More

    ಮೈಸೂರಲ್ಲಿ ಜಂಬೂಸವಾರಿಗೆ ಕ್ಷಣಗಣನೆ: ವಿಜಯದಶಮಿ‌ ಪೂಜಾ ಕೈಂಕರ್ಯ ಶುರು, ಇಲ್ಲಿದೆ ಪೂರ್ಣ ಚಿತ್ರಣ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಮುಂಜಾನೆ 4.40ಕ್ಕೆ ಅರಮನೆಯಲ್ಲಿ ವಿಜಯದಶಮಿ‌ ಪೂಜಾ ಕೈಂಕರ್ಯ ಆರಂಭವಾಯಿತು. ದುಷ್ಟಶಕ್ತಿ ಮೇಲೆ ಶಿಷ್ಟಶಕ್ತಿಯ ವಿಜಯದ ಸಂಕೇತವಾಗಿ ಆಚರಿಸುವ ನಾಡಹಬ್ಬ ದಸರಾ ಉತ್ಸವಕ್ಕೆ ಇಂದು ಸಂಜೆ(ಅ.15) ಅರಮನೆ ಆವರಣದಲ್ಲಿ ನಡೆಯುವ ಜಂಬೂಸವಾರಿ ಮೆರವಣಿಗೆಯ ಮೂಲಕ ಸಂಭ್ರಮದ ತೆರೆ ಬೀಳಲಿದ್ದು, ಇಡೀ ದಿನ ಏನೆಲ್ಲ ನಡೆಯುತ್ತೆ ಎಂಬುದರ ಮಾಹಿತಿ ಇಲ್ಲಿದೆ.

    ಮುಂಜಾನೆ 5.45ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳ ಆಗಮಿಸಿದ್ದು, 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ ನೆರವೇರಿತು. ಖಾಸಾ ಆಯುಧಗಳಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ​ ಅವರು ಉತ್ತರ ಪೂಜೆ ಮಾಡಿ ನಂತರ ಶಮಿ ಪೂಜೆ ನೆರವೇರಿಸಿದರು. ಚಾಮುಂಡಿ ದೇವಿಯ ವಿಗ್ರಹ ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ, ನಂತರ ಪಟ್ಟದ ಕತ್ತಿ ಭುವನೇಶ್ವರಿ ದೇವಾಲಯಕ್ಕೆ ರವಾನೆ ಮಾಡಿ ಬೆಳಗ್ಗೆ 7.20ರಿಂದ 7.40ರವರೆಗೆ ವಿಜಯ ಯಾತ್ರೆ. ಬೆಳ್ಳಿ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ, ಕಾರಿನಲ್ಲಿ ಯದುವೀರ್ ಕುಳಿತು ವಿಜಯ ಯಾತ್ರೆ ಮಾಡುವರು. ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ, ಭುವನೇಶ್ವರಿ ಮಂಟಪದಲ್ಲಿ ಬನ್ನಿ ಮರಕ್ಕೆ ಪೂಜೆ ನಡೆಯಲಿದೆ. ಶಮಿ ಪೂಜೆಯ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್ ಆಗಿವ ಯದುವೀರ್ ಕಂಕಣ ವಿಸರ್ಜನೆ ಮಾಡುವರು. ಬೆಳಗ್ಗೆ 8.30ಕ್ಕೆ ಚಾಮುಂಡಿ ಬೆಟ್ಟದಿಂದ ವಿಶೇಷವಾಗಿ ಅಲಂಕಾರಗೊಂಡ ತಾಯಿಯ ಉತ್ಸವ ಮೂರ್ತಿಯನ್ನು ಕರೆ ತರಲಾಗುತ್ತೆ.

    ಮಧ್ಯಾಹ್ನ 2 ಗಂಟೆ ನಂತರ ಅಭಿಮನ್ಯು ಆನೆಗೆ ಗಾದಿ, ನಮ್ದ ಕಟ್ಟಿ ಅಂಬಾರಿ ಕಟ್ಟುವ ಕಾರ್ಯ ಶುರುವಾಗುತ್ತೆ. ಸಂಜೆ 4.36ರಿಂದ 4.46ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಲಿದೆ. ನಂತರ ಸಂಜೆ 5 ರಿಂದ 5.30ಕ್ಕೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅಂಬಾರಿ ಮೇಲೆ ವಿರಾಜಮಾನಳಾಗುವ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ನೆರವೇರಿಸಿದ ನಂತರ ವಿಜಯದಶಮಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಈ ವೇಳೆ ವರಹಾ ದ್ವಾರದ ಬಳಿ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತೆ.

    ಸಾಮಾನ್ಯವಾಗಿ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ (5 ಕಿ.ಮೀ.) ಜಂಬೂಸವಾರಿ ಮೆರವಣಿಗೆ ನಡೆಯುತ್ತದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ವರ್ಷವೂ ಜಂಬೂಸವಾರಿ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿದೆ. ನಂದಿಧ್ವಜಕ್ಕೆ ಪೂಜೆ ನೆರವೇರಿದ ಬಳಿಕ ಮೆರವಣಿಗೆ ಪ್ರಾರಂಭಗೊಳ್ಳಲಿದ್ದು, ನಿಶಾನೆ ಮತ್ತು ನೌಫತ್ ಆನೆಗಳು ಮೆರವಣಿಗೆಯನ್ನು ಮುನ್ನಡೆಸಲಿವೆ. ಈ ಆನೆಗಳ ಹಿಂದೆ ನಾದಸ್ವರ, ವೀರಗಾಸೆ, ಸ್ತಬ್ಧಚಿತ್ರಗಳು, ಸಂಗೀತ ಗಾಡಿ, ಅಶ್ವಾರೋಹಿದಳ ಸಾಗಲಿವೆ. ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯ ನಂತರ 750 ಕೆ.ಜಿ. ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಸಾಗಲಿದ್ದಾನೆ.

    ಮೆರವಣಿಗೆ ಸಾಗುವ ದಾರಿ 500 ಮೀಟರ್ ಕೂಡ ದಾಟುವುದಿಲ್ಲ. ಅರಮನೆ ಆವರಣದ ವರಹಸ್ವಾಮಿ ದೇವಾಲಯ ಸಮೀಪದಿಂದ ಆರಂಭವಾಗುವ ಮೆರವಣಿಗೆ ಭುವನೇಶ್ವರಿ ದೇವಾಲಯದವರೆಗೂ ಸಾಗಲಿದೆ. ಅಲ್ಲಿಂದ ಬಲರಾಮ ದ್ವಾರದ ಬಳಿ ಬಲಕ್ಕೆ ತಿರುಗಿ ಕೋಡಿ ಸೋಮೇಶ್ವರ ದೇವಾಲಯದ ರಸ್ತೆಗೆ ಮುಖ ಮಾಡಿ ಸಾಗಿದ ನಂತರ ಮೆರವಣಿಗೆ ಸಮಾಪ್ತಿಗೊಳ್ಳಲಿದೆ. ಒಟ್ಟಾರೆ 30ರಿಂದ 45 ನಿಮಿಷಗಳಲ್ಲಿ ಜಂಬೂಸವಾರಿ ಸಂಪನ್ನಗೊಳ್ಳಲಿದೆ.

    ನವರಾತ್ರಿ ಮುಕುಟ ಮೈಸೂರು ದಸರಾ: ಚಾಮುಂಡಿ ನಾಡದೇವತೆಯಾಗಿದ್ದು ಹೇಗೆ?

    ಗೆಳೆಯನನ್ನು ಮನೆಗೆ ಆಹ್ವಾನಿಸಿದ ವಿವಾಹಿತೆ, ಆತ ಮಲಗಿದ್ದ ವೇಳೆ ಮಾಡಬಾರದ್ದು ಮಾಡಿ ದುರಂತ ಅಂತ್ಯಕಂಡಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts