More

    ಮಂಡ್ಯದಲ್ಲಿ ಸಂಚಲನ ಮೂಡಿಸಿದ ಆಡಿಯೋ! ಜೆಡಿಎಸ್​ ಮಹಿಳಾ ಕಾರ್ಯಕರ್ತೆ ಜತೆ ಶಿವರಾಮೇಗೌಡ ಮಾತನಾಡಿದ್ದೇನು?

    ನಾಗಮಂಗಲ: ಕಳೆದ ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ 30 ಕೋಟಿ ರೂ. ಖರ್ಚು ಮಾಡಿದ್ದೆ. ಎಂಎಲ್ಸಿ ಚುನಾವಣೆಯಲ್ಲಿ 27 ಕೋಟಿ ರೂ. ಖರ್ಚು ಮಾಡಿದ್ದೆ. ಮುಂಬರುವ ವಿಧಾನಸಭೆ ಚುನಾವಣೆಗೆ 30 ಕೋಟಿ ರೂ. ಖರ್ಚು ಮಾಡಲು ಸಿದ್ಧನಿದ್ದೇನೆ ಎಂದು ಮಾಜಿ ಸಂಸದ ಎಲ್​.ಆರ್​. ಶಿವರಾಮೇಗೌಡ ಹೇಳಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಭಾರೀ ಸಂಚಲನ ಮೂಡಿಸಿದೆ.

    ಕಳೆದ ಬಾರಿ ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಿವರಾಮೇಗೌಡ ,5 ತಿಂಗಳ ಎಂಪಿ ಚುನಾವಣೆಗೆ 30 ಕೋಟಿ ರೂ. ಖರ್ಚು ಮಾಡಿದ್ದೇನೆ. ನನ್ನದು 8 ಸ್ಕೂಲ್​ಗಳಿದ್ದು, ಒಂದು ತಿಂಗಳಿಗೆ 3 ಕೋಟಿ ರೂ. ಸಂಬಳ ನೀಡುತ್ತಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಗೆ 10 ತಿಂಗಳ ಸಂಬಳದಷ್ಟೇ ಹಣ ಬೇಕಾಗುತ್ತದೆ. ಅಷ್ಟು ಹಣ ಖರ್ಚು ಮಾಡುತ್ತೇನೆ. ನನಗೆ ಬೆಂಬಲ ನೀಡಬೇಕು ಎಂದು ಆಡಿಯೋದಲ್ಲಿ ಮಾತನಾಡಿದ್ದಾರೆ.

    ಕಳೆದ ಬಾರಿ ಶಾಸಕ ಸುರೇಶ್​ಗೌಡ ನನಗೆ ಲೋಕಸಭೆ ಟಿಕೆಟ್​ ತಪ್ಪಿಸಿದ್ರು. ನಿಖಿಲ್​ ಕುಮಾರಸ್ವಾಮಿಯನ್ನು ಚುನಾವಣೆಗೆ ನಿಲ್ಲಿಸಿ ಅವರ ಮನೆಗೆ ಕಂಟಕ ತಂದ್ರು. ನನಗೂ ಸುರೇಶ್​ಗೌಡ ಕಂಟಕ ತಂದ. ನಾನು ಎರಡು ಸಲ ಎಂಎಲ್​ಎ ಆಗಿದ್ದೆ. ಸುರೇಶ್​ಗೌಡ ಮಾಡಿದ್ದಕ್ಕಿಂತ ತಾತನಂತಹ ಕೆಲಸ ಮಾಡಬಹುದು. ನಾನು 5 ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋತಿದ್ದೇನೆ. ಎಲ್ಲವೂ ಕಡಿಮೆ ಅಂತರದಿಂದ ಸೋತಿದ್ದೇನೆ. ಜಿ.ಮಾದೇಗೌಡರಿಗೆ ಎಕ್ಕಡದಲ್ಲಿ ಹೊಡೆದಿದ್ದೆ. ಜಿ.ಮಾದೇಗೌಡ ಆಗ ಸಂಸದರಾಗಿದ್ದರು. ಅದರಿಂದಲೇ ಜಿ.ಮಾದೇಗೌಡರ ವಿರೋಧದಿಂದ ಸೋತೆ. ಮುಂದಿನ ಬಾರಿ ನಾನು ಸ್ಪರ್ಧೆ ಮಾಡಲು ತಯಾರಿ ನಡೆಸುತ್ತಿದ್ದೇನೆ. ಬೆಂಬಲ ನೀಡಿ ಎಂದು ಕಾರ್ಯಕರ್ತೆಯ ಜತೆ ಶಿವರಾಮೇಗೌಡ ಮಾತನಾಡಿದ್ದಾರೆ.

    ಇದಕ್ಕೆ ಪ್ರತಿಯಾಗಿ ಮಹಿಳಾ ಕಾರ್ಯಕರ್ತೆ ಮಾತನಾಡಿ, ಎಚ್​.ಡಿ. ದೇವೇಗೌಡ ಮತ್ತು ಕುಮಾರಣ್ಣ ಯಾರಿಗೆ ಟಿಕೆಟ್​ ಕೊಡುತ್ತಾರೋ ಅವರಿಗೆ ಮಾತ್ರ ನನ್ನ ಬೆಂಬಲ ಅಷ್ಟೆ. ಮೊದಲು ಟಿಕೆಟ್​ ತೆಗೆದುಕೊಳ್ಳಿ, ತದನಂತರ ಬೆಂಬಲಿಸುತ್ತೇನೆ ಎಂದು ಹೇಳಿರುವ ಆಡಿಯೋ ವೈರಲ್​ ಆಗಿದ್ದು, ಮಂಡ್ಯ ಜಿಲ್ಲಾದ್ಯಂತ ಭಾರಿ ಸದ್ದು ಮಾಡುತ್ತಿದೆ.

    ಪದ್ಮಾವತಿ ಕೊಲೆ ಕೇಸ್​: ಶಾಸಕ ಸೋಮಶೇಖರ್​ ರೆಡ್ಡಿಗೂ ಸಿಬಿಐ ಉರುಳು?

    ತಂದೆ-ತಾಯಿ ಮೇಲಿನ ಕೋಪಕ್ಕೆ ರೇಷ್ಮೆಗೂಡಿಗೆ ವಿಷ ಹಾಕಿದ ಮಗಳು! ಕೋಲಾರದಲ್ಲಿ ಅಮಾನವೀಯ ಘಟನೆ

    ಊರಿಗೆ ಊರೇ ಅನಾರೋಗ್ಯ ಪೀಡಿತ: ವಿಜಯವಾಣಿಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ದೊಡ್ಡಾಣೆ ತಲುಪಿದ ವೈದ್ಯಕೀಯ ಸೇವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts