More

    ಭೂಗತ ಪಾತಕಿ ಛೋಟಾ ರಾಜನ್​ಗೆ ಕರೊನಾ ಪಾಸಿಟಿವ್​, ಆಸ್ಪತ್ರೆಗೆ ದಾಖಲು

    ಮುಂಬೈ: ಭೂಗತ ಪಾತಕಿ ಛೋಟಾ ರಾಜನ್(61)​ಗೆ ಕರೊನಾ ಸೋಂಕು ತಗುಲಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    2015ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಗಡಿಪಾರು ಮಾಡಿದ ನಂತರ ಛೋಟಾ ರಾಜನ್​ನನ್ನು ಬಂಧಿಸಿ ದೆಹಲಿಯ ತಿಹಾರ್ ಜೈಲಿನಲ್ಲಿರಿಸಲಾಗಿದೆ. ಈತ 70ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದು, ಮುಂಬೈನಲ್ಲಿ ಆತನ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸಿ ಅವುಗಳ ವಿಚಾರಣೆಗಾಗಿ ವಿಶೇಷ ಕೋರ್ಟ್ ಸ್ಥಾಪಿಸಲಾಗಿದೆ. ಸದ್ಯ ಕರೊನಾ ಹಿನ್ನೆಲೆ ಭೂಗತ ಪಾತಕಿ ಛೋಟಾ ರಾಜನ್​ ಆಸ್ಪತ್ರೆಯಲ್ಲಿರುವ ಕಾರಣ ಪ್ರಕರಣಗಳ ವಿಚಾರಣೆಗಾಗಿ ನ್ಯಾಯಾಧೀಶರ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಸಾಧ್ಯವಿಲ್ಲ ಎಂದು ತಿಹಾರ್ ಜೈಲಿನ ಸಹಾಯಕ ಜೈಲರ್ ಇಲ್ಲಿನ ಸೆಷನ್ಸ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

    ಭೂಗತ ಲೋಕಕ್ಕೆ ಕಾಲಿಡುವ ಮೊದಲು ರಾಜೇಂದ್ರ ನಿಕಲಾಜೆಯಾಗಿದ್ದ ಛೋಟಾ ರಾಜನ್​, 1970ರಲ್ಲಿ ಚೇಂಬೂರ್​ ಬಳಿಯ ಸಿನಿಮಾ ಮಂದಿರಗಳ ಮುಂದೆ ಬ್ಲ್ಯಾಕ್​ ಟಿಕೆಟ್​ ಮಾರಾಟ ಮಾಡುತ್ತ ಸಣ್ಣಪುಟ್ಟ ಅಪರಾಧ ಕೃತ್ಯಗಳ ಜತೆಗೆ ಕಳ್ಳಭಟ್ಟಿ ತಯಾರಿಸುತ್ತಿದ್ದ. ದಾವೂದ್​ ಗ್ಯಾಂಗ್​(ಡಿ ಗ್ಯಾಂಗ್​) ಸೇರಿಕೊಂಡ ನಂತರ ‘ಛೋಟಾ ರಾಜನ್​’ ಎಂದು ಕುಖ್ಯಾತನಾದ. ವಿದೇಶದಲ್ಲಿ ಇದ್ದುಕೊಂಡೇ ಭೂಗತ ಲೋಕದ ವ್ಯವಹಾರ ನಿಯಂತ್ರಿಸುತ್ತಿದ್ದ. ಮುಂಬೈ ಭೂಗತ ಜಗತ್ತಿನ ಹಿಡಿತ ಸಾಧಿಸಲು ಹಲವು ಕೃತ್ಯವೆಸಗಿದ್ದ. ಒಂದು ಕಾಲದಲ್ಲಿ ದಾವೂದ್​ ಇಬ್ರಾಹಿಂನ ಬಲಗೈ ಬಂಟನಾಗಿದ್ದ.

    ಕೊಲೆ ಸುಲಿಗೆ, ಅಪಹರಣ ಬೆದರಿಕೆ ಅಕ್ರಮ ಶಸ್ತ್ರಾಸ್ತ್ರ ಸೇರಿದಂತೆ ಹಲವಾರು ಅಪರಾಧ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ರಾಜನ್ ಎರಡು ದಶಕಗಳ ಕಾಳ ತಲೆ ಮರೆಸಿಕೊಂಡಿದ್ದ. 2015ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ಛೋಟಾ ರಾಜನ್​ನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಬಳಿಕ ಆತನನ್ನು ಭಾರತ ತನ್ನ ವಶಕ್ಕೆ ಪಡೆದಿತ್ತು.

    ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ನಾಯಕ ಎಸ್.ಬಿ. ಸಿದ್ನಾಳ್ ನಿಧನ

    ಸಿನಿಮಾ ಮತ್ತು ರಾಜಕೀಯಕ್ಕೆ ಶಾಶ್ವತ ಗುಡ್ ​ಬೈ ಹೇಳಿದ ರಮ್ಯಾ! ಇನ್ನೆಂದೂ ಬಣ್ಣದ ಲೋಕಕ್ಕೆ ಬರಲ್ಲ ಎಂದ ಮೋಹಕ ತಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts