More

    ಜಮೀನು ಖರೀದಿಸಲು ತಂದಿದ್ದ 9.50 ಲಕ್ಷ‌ ರೂ.‌ ಕಳ್ಳತನ: ಹಣ ಕಳೆದುಕೊಂಡ ರೈತನ ಗೋಳಾಟ ಹೇಳತೀರದು

    ಚಾಮರಾಜನಗರ: ಜಮೀನು ಖರೀದಿಸಲೆಂದು ಬಂದಿದ್ದ ರೈತರೊಬ್ಬರ 9.50 ಲಕ್ಷ ರೂಪಾಯಿ ನಗದು ಜಿಲ್ಲಾಡಳಿತ ಭವನದ ಮುಂಭಾಗವೇ ಕಳ್ಳತನ ಆಗಿದ್ದು, ಹಣ ಕಳೆದುಕೊಂಡ ರೈತನ ಚೀರಾಟ ಮುಗಿಲು ಮುಟ್ಟಿದೆ.

    ಗುರುವಾರ ಬೆಳಗ್ಗೆ ಅಚ್ಚೆಟ್ಟಿಪುರ ಗ್ರಾಮದ ರೈತ ನಾಗಯ್ಯ ಅವರು ದುಂಡೇಗೌಡ ಎಂಬುವರ ಜಮೀನು ಖರೀದಿ ಮಾಡಲೆಂದು 9.50 ರೂ. ಹಣವನ್ನು ತಂದಿದ್ದರು‌‌. ತಾಲೂಕು ಕಚೇರಿಯಲ್ಲಿ ಜಮೀನು ರಿಜಿಸ್ಟ್ರಾರ್ ಪ್ರಕ್ರಿಯೆ ನಡೆಸಿ ಊಟ ಮಾಡಲೆಂದು ಮಧ್ಯಾಹ್ನ ಜಿಲ್ಲಾಡಳಿತ ಭವನದ ಮುಂದೆ ಇರುವ ‘ಅಧ್ಯಕ್ಷ’ ಹೋಟೆಲ್​ಗೆ ತೆರಳಿದ್ದರು. ಈ ವೇಳೆ ಹೋಟೆಲ್​ ಮುಂಭಾಗ ಕಾರು ನಿಲ್ಲಿಸಿ, ಅದರಲ್ಲೇ ಹಣ ಇಟ್ಟಿದ್ದರು.

    ಅತ್ತ ಹೋಟೆಲ್​ನಲ್ಲಿ ರೈತ ಊಟ ಮಾಡುತ್ತಿದ್ದರೆ ಇತ್ತ ದುಷ್ಕರ್ಮಿಗಳು ಕಾರಿನ ಗಾಜು ಹೊಡೆದು ಹಣ ದೋಚಿದ್ದಾರೆ. ಊಟ ಮುಗಿದ ಬಳಿಕ ಕಾರಿನ ಬಳಿಗೆ ಬಂದಾಗ ಗಾಜು ಪಡೆದು ಹಣ ಎಗರಿಸಿರುವುದು ಗೊತ್ತಾಗಿದೆ. ಹಣ ಕಳೆದುಕೊಂಡ ರೈತ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸ್ಥಳಕ್ಕೆ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

    ಕೋಳಾಲಮ್ಮ ದೇಗುಲದ ಶ್ರೀಧರಮ್ಮ- ಅರ್ಚಕ ಆತ್ಮಹತ್ಯೆ ಕೇಸ್​ಗೆ ಸ್ಫೋಟಕ ತಿರುವು: ಮತ್ತೊಂದು ವಿಡಿಯೋ ವೈರಲ್​

    ಮಳೆ ಮುಂದುವರಿದರೆ ಈ ಗ್ರಾಮಕ್ಕೆ ಗಂಡಾಂತರ ಗ್ಯಾರಂಟಿ! 2 ಕೆರೆಗಳ ಏರಿ ಬಿರುಕು ಬಿಡೋ ಮುನ್ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts