More

    ಅಸ್ಸಾಂನಲ್ಲಿ 6.4ರಷ್ಟು ತೀವ್ರತೆಯ ಭೂಕಂಪನ: ಕುಸಿದು ಬಿದ್ದ ಕಟ್ಟಡಗಳು

    ತೇಜ್​ಪುರ: ಅಸ್ಸಾಂನಲ್ಲಿ ಇಂದು(ಬುಧವಾರ) ಬೆಳಗ್ಗೆ ಭೂಕಂಪನ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ತೀವ್ರತೆ 6.4ರಷ್ಟಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.

    ಇಂದು ಬೆಳಗ್ಗೆ 7.51ಕ್ಕೆ ಅಸ್ಸಾಂ ಒಳಗೊಂಡು ಇಡೀ ಈಶಾನ್ಯ ಭಾರತ ಹಾಗೂ ಉತ್ತರ ಬಂಗಾಳದಲ್ಲಿ ಭೂಮಿ ಕಂಪಿಸಿದೆ. ಮತ್ತೆ 8.01ಕ್ಕೆ ಮತ್ತೊಮ್ಮೆ ಭೂಮಿ ಕಂಪಿಸಿದೆ. ಗುವಾಹಟಿ ಸೇರಿದಂತೆ ಹಲವೆಡೆ ಕಟ್ಟಡಗಳಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮನೆಗಳ ಛಾವಣಿ, ಕಟ್ಟಡಗಳು ಕುಸಿದಿವೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ. ಭೂಮಿ ಕಂಪಿಸಿದ್ದಕ್ಕೆ ಸ್ಥಳೀಯರು ಆತಂಕಗೊಂಡಿದ್ದಾರೆ. ಹಲವರು ಭಯದಿಂದ ಮನೆಯಿಂದ ಹೊರ ಓಡಿಬಂದಿದ್ದಾರೆ.

    ಭೂಕಂಪನದಿಂದ ಕಟ್ಟಡಗಳಿಗೆ ಹಾನಿ ಆಗಿರುವ ಫೋಟೋಗಳು ಮತ್ತು ರಿಕ್ಟರ್​ ಮಾಪಕದಲ್ಲಿ ಭೂಕಂಪನದ ತೀವ್ರತೆಯ ಮಾಹಿತಿಯನ್ನ ಆರೋಗ್ಯ ಸಚಿವ ಹಿಮಂತ ಬಿಸ್ವಾಶರ್ಮಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್, ‘ಅಸ್ಸಾಂನಲ್ಲಿ ಭೂಕಂಪನ ಸಂಭವಿಸಿದೆ. ಎಲ್ಲರ ಕ್ಷೇಮಕ್ಕಾಗಿ ಪ್ರಾರ್ಥಿಸುವೆ’ ಎಂದು ಟ್ವೀಟ್​ ಮಾಡಿದ್ದಾರೆ.

    ‘ಅಸ್ಸಾಂನ ಕೆಲವು ಭಾಗಗಳಲ್ಲಿ ಭೂಕಂಪನ ಆಗಿದೆ. ಅಸ್ಸಾಂ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಅಸ್ಸಾಂ ಸಿಎಂ ಸೋನೊವಾಲ್ ಅವರೊಂದಿಗೆ ಮಾತನಾಡಿದ್ದು, ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯ ಮಾಡಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.

    ಕರೊನಾಗೆ ಬಲಿಯಾದ ಪತ್ನಿಯ ಮೃತದೇಹ ಕೊಡಲ್ಲ ಎಂದು ಹಠ ಹಿಡಿದ ಗಂಡ! ಒಂದೇ ವಾರದಲ್ಲಿ ಮೂವರ ಸಾವಿಗೆ ಕಂಗೆಟ್ಟ…

    ಮೋಕ್ಷಕ್ಕಾಗಿ ಸಹೋದರಿಯರಿಬ್ಬರ ಬಲಿ ಕೊಟ್ಟ ಊರಲ್ಲೇ ಮತ್ತೊಂದು ದುರಂತ: ರಾತ್ರೋರಾತ್ರಿ ತಾಯಿ-ತಂಗಿ-ತಮ್ಮನ ಭೀಕರ ಹತ್ಯೆ!

    ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts