ಕೊಲಂಬೊ: ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡದ ವೇಗಿ ಶ್ರೀಪಾಲಿ ವೀರಕ್ಕೋಡಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಬುಧವಾರ ವಿದಾಯ ಘೋಷಿಸಿದ್ದಾರೆ. 34 ವರ್ಷದ ಅವರು ಶ್ರೀಲಂಕಾ ಪರ 89 ಏಕದಿ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 58 ಮತ್ತು 31 ವಿಕೆಟ್ ಕಬಳಿಸಿದ್ದಾರೆ.
2018ರಲ್ಲಿ ಬಾಂಗ್ಲಾದೇಶ ವಿರುದ್ಧ ಅವರು ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. 2006ರಲ್ಲಿ ಜೈಪುರದಲ್ಲಿ ಪಾಕಿಸ್ತಾನ ವಿರುದ್ದ ಪದಾರ್ಪಣೆ ಮಾಡಿದ್ದ ಅವರು 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ಎಂಎಸ್ಡಿ ಎಂದರೆ ಧೋನಿ ಅಲ್ಲ, ಹೊಸ ಅರ್ಥ ನೀಡಿದ್ದಾರೆ ಪೊಲೀಸರು!
ನಾನು ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಅದಕ್ಕೆ ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ. ನಿವೃತ್ತಿ ಹೊಂದುವುದು ನನ್ನ ವೈಯಕ್ತಿಕ ನಿರ್ಧಾರವಾಗಿದೆ ಎಂದು ಶ್ರೀಪಾಲಿ ವೀರಕ್ಕೋಡಿ ತಿಳಿಸಿದ್ದಾರೆ. 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಡಂಬುಲಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ 19 ರನ್ಗೆ 3 ವಿಕೆಟ್ ಕಬಳಿಸಿದ್ದು ಅವರ ಅತ್ಯುತ್ತಮ ನಿರ್ವಹಣೆಯಾಗಿದೆ. ಟಿ20 ಕ್ರಿಕೆಟ್ನಲ್ಲೂ 2012ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧವೇ ಅತ್ಯುತ್ತಮ ಬೌಲಿಂಗ್ (23ಕ್ಕೆ 3) ನಿರ್ವಹಣೆ ತೋರಿದ್ದರು.