ಸುಶಾಂತ್ ಸಿಂಗ್ ಆತ್ಮಹತ್ಯೆ ಬೆನ್ನಲ್ಲೇ ನೆಪೋಟಿಸಂ ಕುರಿತ ಚರ್ಚೆ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಸ್ವಜನಪಕ್ಷಪಾತವನ್ನು ಪೋಷಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬಾಲಿವುಡ್ನ ಸಾಕಷ್ಟು ಸ್ಟಾರ್ ಕಲಾವಿದರ ಮತ್ತು ನಿರ್ಮಾಪಕರ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಅದರಲ್ಲೂ ಸಲ್ಮಾನ್ ಖಾನ್ ವಿರುದ್ಧ ತಿರುಗಿ ಬಿದ್ದಿರುವ ಜನ, ಅವರ ಸಿನಿಮಾಗಳನ್ನೇ ಬ್ಯಾನ್ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಇದೆಲ್ಲದರ ನಡುವೆಯೇ ಭೋಜಪುರಿ ಭಾಷೆಯಲ್ಲಿ ಹೊರ ಬಂದ ಹಾಡೊಂದರಲ್ಲಿ ಸಲ್ಮಾನ್ ಖಾನ್ಗೆ ಹಿಗ್ಗಾಮುಗ್ಗಾ ಬೈಯಲಾಗಿದೆ!
ಇದನ್ನೂ ಓದಿ: ಟ್ರೋಲ್ಗೆ ಹೆದರಿ ಕಣ್ಣೀರಲ್ಲೇ ಕೈತೊಳೆಯುತ್ತಿದ್ದಾರೆ ಕರಣ್!
ಅಜಯ್ ಕೇಸರಿ ಯಾದವ್ ಹೆಸರಿನ ವ್ಯಕ್ತಿ ಅವಾಚ್ಯ ಪದಗಳನ್ನು ಬಳಕೆ ಮಾಡಿಕೊಂಡು ಸ್ಟಾರ್ ನಟನ ಮೇಲೆ ಹಾಡಿನ ಮೂಲಕ ದಾಳಿ ಮಾಡಿದ್ದು, ಸದ್ಯ ಈ ಹಾಡು ಎಲ್ಲೆಡೆ ವೈರಲ್ ಆಗಿದೆ. ಸಲ್ಮಾನ್ ಸಿನಿಮಾ ಬೇಡವೇ ಬೇಡ ಎಂಬ ಸಾಲುಗಳೂ ಹಾಡಿನಲ್ಲಿದ್ದು, ಇದೆಲ್ಲವನ್ನು ಕಂಡ ಸಲ್ಮಾನ್ ಅವರ ಒಂದಷ್ಟು ಅಭಿಮಾನಿಗಳು ಯೂಟ್ಯೂಬ್ಗೆ ದೂರು ನೀಡಿದ್ದಾರೆ. ಅವಾಚ್ಯ ಪದಗಳಿಂದ ಕೂಡಿದ ಈ ಹಾಡನ್ನು ಯೂಟ್ಯೂಬ್ನಿಂದ ಡಿಲಿಟ್ ಮಾಡುವಂತೆ ಕೋರಿದ್ದಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್ ಶೇರ್ ಮಾಡಿದ್ದಾರೊಂದು ಅಪರೂಪದ ಫೋಟೋ!
ಇನ್ನು ಬಿಹಾರದ ಪಾಟ್ನಾದಲ್ಲಿನ ಬಿಯಿಂಗ್ ಹ್ಯೂಮನ್ ಶೋರೂಮ್ಗಳಿಗೆ ಕೆಲ ವಾರಗಳ ಹಿಂದಷ್ಟೇ ಬೀಗ ಜಡಿಯಲಾಗಿತ್ತು. ಇನ್ನು ಕೆಲವರು ಸಲ್ಮಾನ್ ಫೋಟೋಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದೀಗ ಹಾಡಿನ ಮೂಲಕ ಸ್ಟಾರ್ ನಟನನ್ನು ನಿಂದಿಸಿದ್ದು, ಈ ಬಗ್ಗೆ ಸಲ್ಮಾನ್ ಮತ್ತವರ ತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್)
VIDEO: ಆತ್ಮಹತ್ಯೆಗೆ ಶರಣಾದ ಸುಶೀಲ್, ಫಿಟ್ನೆಸ್ ಐಕಾನ್ ಎಂದೇ ಖ್ಯಾತಿ…