ಲಂಡನ್: ಅನುಮಾನ ಒಳ್ಳೆಯದಲ್ಲ. ಕೆಲವೊಮ್ಮೆ ಅನುಮಾನದಿಂದಲೇ ಸಂಸಾರ ಒಡೆದುಹೋಗಿದ್ದನ್ನೂ ನೀವು ಕೇಳಿರುತ್ತೀರಿ. ಆದರೆ ಈ ಕಥೆ ಸ್ವಲ್ಪ ಡಿಫರೆಂಟ್. ನನ್ನೊಂದಿಗಿರ್ತೀಯಾ ಅಂತ ಪ್ರೇಮ ನಿವೇದನೆ ಮಾಡಿದ ಪ್ರಿಯಕರ ತಂದಿದ್ದ ಡೈಮೆಂಡ್ ಬಗ್ಗೆನೇ ಅನುಮಾನ ಪಟ್ಟ ಯುವತಿ ಪ್ರೀತಿಯನ್ನೇ ತಿರಸ್ಕರಿಸಿ ಹೋಗಿದ್ದಾಳೆ.
ಹೌದು. ಇಂತದ್ದೊಂದು ಘಟನೆ ಬ್ರಿಟನ್ನಲ್ಲಿ ನಡೆದಿದೆ. ಅದರ ಬಗ್ಗೆ ಸ್ವತಃ ನೊಂದ ಪ್ರೇಮಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾನೆ. 15 ಲಕ್ಷ ರೂಪಾಯಿ ಕೊಟ್ಟು, ಲ್ಯಾಬ್ನಲ್ಲಿ ಮಾಡಿದ ಡೈಮೆಂಡ್ ರಿಂಗ್ ತೆಗೆದುಕೊಂಡು ಬಂದೆ. ನೈಸರ್ಗಿಕ ಡೈಮೆಂಡ್ ಇಂದ ಪರಿಸರಕ್ಕೆ ಹಾನಿಯಾಗುತ್ತೆ ಎನ್ನುವ ಕಾರಣಕ್ಕೆ ಲ್ಯಾಬ್ನಲ್ಲಿ ತಯಾರಾರ ಡೈಮೆಂಡ್ ಮೊರೆ ಹೋದೆ.
ಆದರೆ ನನ್ನ ಹುಡುಗಿಗೆ ಅದು ದೊಡ್ಡ ತಪ್ಪಾಗಿ ಕಂಡಿತು. ಪ್ರೀತಿಸಿದವಳಿಗೆ ಒಂದು ನೈಸರ್ಗಿಕ ಡೈಮೆಂಡ್ ರಿಂಗ್ ಕೊಡುವ ಯೋಗ್ಯತೆ ಇಲ್ಲವೇ ಎಂದು ಹೇಳಿ ಪ್ರೀತಿಯನ್ನು ತಿರಸ್ಕರಿಸಿ ಹೋಗಿಬಿಟ್ಟಳು ಎಂದು ಆತ ಬರೆದುಕೊಂಡಿದ್ದಾನೆ. ಯಾವ ಯಾವುದೋ ಕಾರಣಕ್ಕೆ ಪ್ರೀತಿ ನಿರಾಕರಿಸುವವರ ಎದುರು ಈ ಘಟನೆ ಒಂದು ರೀತಿಯ ವಿಚಿತ್ರವಾಗಿ ಹೊರಹೊಮ್ಮಿದೆ.
ನೊಂದ ಪ್ರೇಮಿಯ ಈ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್)
ಸಾಯುತ್ತಿದ್ದ ಅಮ್ಮನಿಗಾಗಿ ವಿಡಿಯೋ ಕಾಲ್ನಲ್ಲೇ ಹಾಡು ಹೇಳಿದ ಮಗ! ಕಣ್ಣೀರು ತರಿಸುವ ಕಥೆ ಹಂಚಿಕೊಂಡ ಡಾಕ್ಟರ್
ನಿಂತಿದ್ದ ಆ್ಯಂಬುಲೆನ್ಸ್ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!