More

    24 ಗಂಟೆಯಲ್ಲಿ ‘777 ಚಾರ್ಲಿ’ ಟೀಸರ್​ಗೆ ಸಿಕ್ತು 17 ಮಿಲಿಯನ್ ವೀಕ್ಷಣೆ

    ಬೆಂಗಳೂರು: ರಕ್ಷಿತ್ ಶೆಟ್ಟಿ ಜನ್ಮದಿನದ ಪ್ರಯುಕ್ತ ಬಿಡುಗಡೆಯಾಗಿರುವ 777 ಚಾರ್ಲಿ ಸಿನಿಮಾದ ಟೀಸರ್ ಎಲ್ಲೆಡೆಯಿಂದ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಯೂಟ್ಯೂಬ್​ನಲ್ಲಿ ಮಿಲಿಯನ್​ಗಟ್ಟಲೇ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಕನ್ನಡದ ಜತೆಗೆ ಇನ್ನುಳಿದ ನಾಲ್ಕು ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಆ ಭಾಷೆಗಳಲ್ಲಿಯೂ ಟೀಸರ್​ ಬಿಡುಗಡೆ ಆಗಿದೆ. ಅಷ್ಟೇ ಅಲ್ಲ ಲಕ್ಷ ಲಕ್ಷ ವೀಕ್ಷಣೆಯನ್ನೂ ಪಡೆದುಕೊಂಡು ಮುನ್ನುಗ್ಗುತ್ತಿದೆ.


    ಕಿರಣ್ ರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 777 ಚಾರ್ಲಿ ಸಿನಿಮಾ ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧದ ಕಥೆ. ಲೈಫ್ ಆಫ್​ ಚಾರ್ಲಿ ಶೀರ್ಷಿಕೆಯಡಿ ಹೊರಬಂದಿರುವ ಟೀಸರ್​ನಲ್ಲಿ ಚಿತ್ರದ ಮುಖ್ಯ ಪಾತ್ರಧಾರಿ ಚಾರ್ಲಿಯ ಪರಿಚಯವನ್ನು ನಿರ್ದೇಶಕರು ಮಾಡಿಕೊಟ್ಟಿದ್ದಾರೆ. ಮುದ್ದಾದ ನಾಯಿಮರಿಯ ತರಲೆ, ತುಂಟಾಟ, ಸುತ್ತಾಟವನ್ನು ಎರಡು ನಿಮಿಷದ ಟೀಸರ್​ನಲ್ಲಿ ತೋರಿಸಿದ್ದಾರೆ ನಿರ್ದೇಶಕ ಕಿರಣ್ ರಾಜ್.

    ಇದನ್ನೂ ಓದಿ: ಎಲ್ಲಿ ನನ್ನ ಚಪ್ಪಲ್?; ಯಾಮಿಗೆ ಕಾಲೆಳೆದವರಿಗೆ ಕಂಗನಾ ತರಾಟೆ

    ಸದ್ಯದ ವಿಷಯವೇನೆಂದರೆ, ಐದು ಭಾಷೆಯಲ್ಲಿ ಬಿಡುಗಡೆ ಆಗಿರುವ ಈ ಟೀಸರ್​, ಕನ್ನಡದಲ್ಲಿ 42 ಲಕ್ಷ, ಮಲಯಾಳಂನಲ್ಲಿ 33 ಲಕ್ಷ, ತಮಿಳಿನಲ್ಲಿ 34 ಲಕ್ಷ, ಹಿಂದಿಯಲ್ಲಿ 32ಲಕ್ಷ, ತೆಲುಗಿನಲ್ಲಿ 32 ಲಕ್ಷ ವೀಕ್ಷಣೆ ಕಂಡಿದೆ. ಲೈಕ್ಸ್ ವಿಚಾರದಲ್ಲಿಯೂ ಎಲ್ಲ ಭಾಷೆಗಳಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನೇ ಪಡೆದುಕೊಳ್ಳುತ್ತಿವೆ. ಒಟ್ಟಾರಿಯಾಗಿ ಐದು ಭಾಷೆಗಳಲ್ಲಿ 17 ಮಿಲಿಯನ್​ಗೂ ಅಧಿಕ ಅಂದರೆ ಒಂದು ಕೋಟಿ 70 ಲಕ್ಷ ವೀಕ್ಷಣೆ 777 ಚಾರ್ಲಿ ಟೀಸರ್​ಗೆ ಸಿಕ್ಕಿದೆ.

     

    ಇದನ್ನೂ ಓದಿ: ಇಂದು ಚಿರು ಸರ್ಜಾ ಪುಣ್ಯಸ್ಮರಣೆ; ಅಗಲಿ ಇಂದಿಗೆ ಭರ್ತಿ 1 ವರ್ಷ

    ಚಾರ್ಲಿ ಚಿತ್ರಕ್ಕೆ ನೋಬಿನ್ ಪೌಲ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದಾರೆ. ಜಿ​ಎಸ್​ ಗುಪ್ತಾ ಮತ್ತು ಪರಮ್ವಾ ಸ್ಟುಡಿಯೋಸ್ ಬ್ಯಾನರ್​ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿದರೆ, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ, ದಾನಿಶ್ ಸೇಠ್ ಪ್ರಮುಖ ಪಾತ್ರದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts