More

    ಯೂಟ್ಯೂಬ್ ಚಾನಲ್‌ ಸಬ್​ಸ್ಕ್ರಿಪ್ಶನ್​ನಲ್ಲಿ ವಿಶ್ವದಲ್ಲೇ ಮೋದಿ ನಂಬರ್​ ಒನ್​: ನಮ್ಮ ಪ್ರಧಾನಿಯ ಚಂದಾದಾರಿಕೆ ಎಷ್ಟು ಗೊತ್ತೆ?

    ನವದೆಹಲಿ: ವಿಶ್ವದ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು ಎಂದೇ ಪರಿಗಣಿಸಲಾಗಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಸೋಷಿಯಲ್​ ಮೀಡಿಯಾದಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ 20 ಮಿಲಿಯನ್​ಗೂ ಅಧಿಕ ಸಬ್​ಸ್ಕ್ರೈಬರ್​​ ( 2 ಕೋಟಿಗೂ ಮೀರಿ ಚಂದಾದಾರರನ್ನು) ಹೊಂದಿದ ಮೊದಲ ಜಾಗತಿಕ ನಾಯಕರಾಗಿ ಮೋದಿ ಹೊರಹೊಮ್ಮಿದ್ದಾರೆ.

    ಪ್ರಧಾನಿ ಅವರು ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಹಲವು ದಾಖಲೆಗಳನ್ನು ಬರೆದ ನಾಯಕರಾಗಿದ್ದಾರೆ. ಪ್ರಧಾನಿ ಮೋದಿ ಅವರು Instagram ನಲ್ಲಿ 82.7 ಮಿಲಿಯನ್​ ಫಾಲೋವರ್​ (8.27 ಕೋಟಿ ಅನುಯಾಯಿಗಳನ್ನು) ಹೊಂದಿದ್ದಾರೆ. ಎಕ್ಸ್​ನಲ್ಲಿ 94 ಮಿಲಿಯನ್ ಫಾಲೋವರ್​ಗಳನ್ನು (9.4 ಕೋಟಿ ಅನುಯಾಯಿಗಳನ್ನು) ಹೊಂದಿದ್ದಾರೆ. ಇದಲ್ಲದೆ, ಪಿಎಂ ಮೋದಿ ಅವರನ್ನು ವಿಶ್ವದ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

    ಯೂಟ್ಯೂಬ್ ಚಾನಲ್‌ ಸಬ್​ಸ್ಕ್ರಿಪ್ಶನ್​ ಸಂಖ್ಯೆಯಲ್ಲಿ ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನೋರಾ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಇವರ ಚಂದಾದಾರರ ಸಂಖ್ಯೆ 6.4 ಮಿಲಿಯನ್ (64 ಲಕ್ಷ) ಆಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಯೂಕ್ರೇನ್​ ಅಧ್ಯಕ್ಷ ವೊಲೊದಿಮಿರ್​ ಜೆಲೆನಸ್ಕಿ ಇದ್ದಾರೆ. ಇವರು 1.1 ಮಿಲಿಯನ್‌ (11 ಲಕ್ಷ ) ಚಂದಾದಾರರನ್ನು ಹೊಂದಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಕೇವಲ 7,94,000 ಚಂದಾದಾರರ ಸಂಖ್ಯೆಯನ್ನು ಹೊಂದಿದ್ದಾರೆ.

    ಇದಲ್ಲದೆ, ವೀಕ್ಷಣೆಗಳ ವಿಷಯಕ್ಕೆ ಬಂದಾಗ ಡಿಸೆಂಬರ್ 2023 ರಲ್ಲಿ 2.24 ಶತಕೋಟಿ ವೀಕ್ಷಣೆಗಳನ್ನು ದಾಖಲಿಸುವ ಮೂಲಕ ಮೋದಿಯವರ ಚಾನೆಲ್ ಪ್ರಾಬಲ್ಯ ಮುಂದುವರಿಸಿದೆ. ಈ ಅಂಕಿ ಅಂಶವು ಜಾಗತಿಕವಾಗಿ ಎರಡನೇ ಅತಿ ಹೆಚ್ಚು ವೀಕ್ಷಣೆಗಳನ್ನು ಹೊಂದಿರುವ ಜೆಲೆನಸ್ಕಿ ಅವರಿಗಿಂತ 43 ಪಟ್ಟು ಹೆಚ್ಚಾಗಿದೆ. ಯೂಟ್ಯೂಬ್​ನಲ್ಲಿ ಮೋದಿಯವರ ಯಶಸ್ಸು ಅವರ ಡಿಜಿಟಲ್ ಸಾಮರ್ಥ್ಯ ಮತ್ತು ವ್ಯಾಪಕವಾದ ಜಾಗತಿಕ ಆಕರ್ಷಣೆಯನ್ನು ಪ್ರತಿಬಿಂಬಿಸುತ್ತದೆ.

    ಮೋದಿಯವರ ಚಾನಲ್, 4.5 ಬಿಲಿಯನ್ (450 ಕೋಟಿ) ವೀಡಿಯೊ ವೀಕ್ಷಣೆಗಳೊಂದಿಗೆ ಬೇರಾರೂ ಸ್ಫರ್ಧೆಯಲ್ಲಿರದಂತೆ ಮಾಡಿದೆ. ಈ ಸಾಧನೆಯು ಅವರ ಜಾಗತಿಕ ಜನಪ್ರಿಯತೆಯನ್ನು ಒತ್ತಿಹೇಳುತ್ತದೆ, ಮಾರ್ನಿಂಗ್ ಕನ್ಸಲ್ಟ್ ಸೇರಿದಂತೆ ವಿವಿಧ ಸಮೀಕ್ಷೆಗಳಲ್ಲಿ ಸತತವಾಗಿ ಅವರು 75 ಶೇಕಡಾಕ್ಕಿಂತ ಹೆಚ್ಚಿನ ಅನುಮೋದನೆಯ ರೇಟಿಂಗ್‌ನೊಂದಿಗೆ ಅತ್ಯಂತ ಜನಪ್ರಿಯ ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ.

    ಮೋದಿಯವರ ಯೂಟ್ಯೂಬ್ ಚಾನೆಲ್ ಜನಪ್ರಿಯತೆಯು ಭಾರತದೊಳಗೆ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅವರ ರಾಜಕೀಯ ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತದೆ. ಪ್ರಧಾನಿ ಮೋದಿಯವರ ಯೂಟ್ಯೂಬ್ ಚಾನೆಲ್ ಫೆಬ್ರವರಿ 2022 ರಲ್ಲಿ ಒಂದು ಕೋಟಿ ಚಂದಾದಾರರನ್ನು ದಾಟಿತ್ತು.

    ಬಿಹಾರದಲ್ಲಿ 3.5 ಲಕ್ಷ ಗುತ್ತಿಗೆ ಶಿಕ್ಷಕರಿಗೆ ಸರ್ಕಾರಿ ನೌಕರರ ಸ್ಥಾನಮಾನ: ನಿತೀಶ್​ ಕುಮಾರ್​ ನಿರ್ಧಾರದಿಂದ ಏನೇನು ಪ್ರಯೋಜನ?

    ಸ್ವಿಗ್ಗಿ ಪ್ರತಿಸ್ಪರ್ಧಿ ಜೊಮ್ಯಾಟೊದಲ್ಲಿಯೂ ಬಿರಿಯಾನಿಗೇ ಅಗ್ರಸ್ಥಾನ: ಪ್ರತಿದಿನ 9 ಬಾರಿ ಫುಡ್​ ಆರ್ಡರ್​ ಮಾಡಿದ ವ್ಯಕ್ತಿ ಯಾರು ಗೊತ್ತೆ?

    ಕಾಶ್ಮೀರದಲ್ಲಿ ಭಯೋತ್ಪಾದಕರು ಬಳಸುತ್ತಿದ್ದಾರೆ ಚೀನಾ ನಿರ್ಮಿತ ಶಸ್ತ್ರಾಸ್ತ್ರ: ಇವುಗಳು ಉಗ್ರರಿಗೆ ಲಭಿಸುತ್ತಿರುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts