More

    52 ಅಂಗವಿಕಲರಿಗೆ ಮಾಸಾಶನ

    ಯೋಜನಾಕಾರಿ ರಜಬ ಅಲಿ ಮಾಹಿತಿ

    ನಂದೇಶ್ವರ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಅನೇಕ ಜನೋಪಯೋಗಿ ಯೋಜನೆ ಜಾರಿಗೆ ತಂದಿದೆ ಎಂದು ಅಥಣಿ ಕ್ಷೇತ್ರ ಯೋಜನೆ ಅಕಾರಿ ರಜಬ ಅಲಿ ಹೇಳಿದರು. ಸಮೀಪದ ಸತ್ತಿ ಗ್ರಾಮದಲ್ಲಿ ಶುಕ್ರವಾರ ಜನ ಮಂಗಲ ಕಾರ್ಯಕ್ರಮದಡಿ ಅಂಗವಿಕಲ ಸಹೋದರರಾದ ಈರಗೌಡ ಪಾಟೀಲ ಹಾಗೂ ಚೇತನ ಪಾಟೀಲ ಅವರಿಗೆ ವಾಕರ್, ವಾಟರ್ ಬೆಡ್ ಹಾಗೂ ಮಾಲಾ ಧರಿಗೌಡ ಅವರಿಗೆ ವೀಲ್ ಚೇರ್ ವಿತರಿಸಿ ಮಾತನಾಡಿ, ಜಲಮಂಗಲ ಕಾರ್ಯಕ್ರಮದಡಿ ಅಥಣಿ ತಾಲೂಕಿನ 65ಕ್ಕೂ ಹೆಚ್ಚು ಅಂಗವಿಕಲರಿಗೆ ಉಪಕರಣ ವಿತರಿಸಲಾಗಿದೆ. ಅಥಣಿ ವಲಯದ 52 ಅಂಗವಿಕಲರಿಗೆ ಮಾಸಾಶನ ನೀಡುತ್ತಿದೆ ಎಂದರು. ಕ್ಷೇತ್ರ ಕೃಷಿ ಅಕಾರಿ ಶಿವನಗೌಡ ಪಾಟೀಲ, ಬಸಗೌಡ ಪಾಟೀಲ, ಎಲ್.ಬಿ. ಕುಂಬಾರ, ಸಂಘದ ಸೇವಾ ಪ್ರತಿನಿ ಬೇಬಿ ಪಾಟೀಲ, ರಾಯಿಸಾ ಕಾಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts