More

  ಕ್ರೀಡಾಕೂಟ ಆಯೋಜನೆಗೆ ಸ್ಥಳ ನಿಗದಿ

  ಕನಕಗಿರಿ: ಕನಕಗಿರಿ ಉತ್ಸವ 2024ರ ಹಿನ್ನೆಲೆಯಲ್ಲಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಫೆ.27ರಿಂದ 29ರವರೆಗೆ ಕ್ರೀಡೆಗಳು ನಡೆಯಲಿವೆ ಎಂದು ಉತ್ಸವ ಸಮಿತಿ ನೋಡಲ್ ಅಧಿಕಾರಿ ಎ.ಸಿ. ಕ್ಯಾ.ಮಹೇಶ ಮಾಲಗಿತ್ತಿ ತಿಳಿಸಿದರು.

  ಕ್ರೀಡಾಕೂಟ ನಡೆಸಲು ಸ್ಥಳ ಗುರುತಿಸಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದರು. ಕನಕಗಿರಿ ಉತ್ಸವ ಅಂಗವಾಗಿ ನಡೆಯುವ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಡೆಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸ್ಥಳ ಗುರುತಿಸಲಾಗಿದೆ. ರಾಜಾ ಉಡಚಪ್ಪ ಭವ್ಯ ವೇದಿಕೆ ಸ್ಥಳದಲ್ಲಿ ಸ್ವಚ್ಛತೆ, ನಾಲ್ಕು ಕಡೆಗಳಲ್ಲಿ ರಸ್ತೆ ವ್ಯವಸ್ಥೆ, ಕುಡಿವ ನೀರು ಹಾಗೂ ವಿದ್ಯುತ್ ವ್ಯವಸ್ಥೆ ಮಾಡಲು ಕಾರ್ಯ ಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

  ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡ ಮಾತನಾಡಿ, ಕನಕಗಿರಿ ಉತ್ಸವ ಭಾಗವಾಗಿ ಮೂರು ದಿನ ಗುಂಪು ಆಟ ಹಾಗೂ ವೈಯಕ್ತಿಕ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಕಬಡ್ಡಿ, ಕುಸ್ತಿ, ಮ್ಯಾರಥಾನ್, ಹಗ್ಗ-ಜಗ್ಗಾಟ, ಮಲ್ಲಗಂಬ ಜತೆಗೆ ವಾಲಿಬಾಲ್ ಸಹ ನಡೆಯಲಿದೆ. ಎತ್ತಿನ ಬಂಡಿ ಉತ್ಸವ, ಹ್ಯಾಂಡ್‌ಬಾಲ್, ಬಾಲ್ ಬ್ಯಾಡ್ಮಿಂಟನ್, ಲೆಗ್ ಕ್ರಿಕೆಟ್, ಅಧಿಕಾರಿಗಳ ಕ್ರಿಕೆಟ್ ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ನಡೆಯಲಿದ್ದು, ಫೆ.22ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು ಎಂದರು.

  ತಹಸೀಲ್ದಾರ್ ವಿಶ್ವನಾಥ ಮುರುಡಿ, ಡಿವೈಎಸ್‌ಪಿ ಸಿದ್ಧಲಿಂಗಪ್ಪಗೌಡ ಪಾಟೀಲ್, ತಾಲೂಕು ದೈಹಿಕ ಶಿಕ್ಷಕ ರಂಗಸ್ವಾಮಿ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts