More

  ಇನ್ನೊಂದು ವರ್ಷದಲ್ಲಿ ಎಲ್ಲ ಶಾಲಾ ಕಾಲೇಜುಗಳಿಗೆ ವಾಟರ್ ಫಿಲ್ಟರ್

  ಬಾಳೆಹೊನ್ನೂರು: ಶೃಂಗೇರಿ ಕ್ಷೇತ್ರದ ಶಾಲಾ ಕಾಲೇಜು ಹಾಗೂ ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಲು ಇನ್ನೊಂದು ವರ್ಷದಲ್ಲಿ ವಾಟರ್ ಫಿಲ್ಟರ್‌ಗಳನ್ನು ನೀಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

  ಬಿ.ಕಣಬೂರು ಗ್ರಾಮದ ವಾಟುಕೊಡಿಗೆಯಲ್ಲಿ ಶನಿವಾರ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಅಂಗನವಾಡಿ ಮಕ್ಕಳ ಭವಿಷ್ಯಕ್ಕೆ ತಳಪಾಯ. ಇಲ್ಲಿನ ಶಿಕ್ಷಣ ಜೀವನಕ್ಕೆ ಪೂರಕವಾಗಿದೆ ಎಂದರು.
  ಗ್ರಾಮಗಳನ್ನು ಅಭಿವೃದ್ಧಿಗೊಳಿಸುವುದು ಸರ್ಕಾರದ ಗುರಿಯಾಗಿದ್ದು, ಗ್ರಾಮೀಣ ಭಾಗಗಳಲ್ಲಿ ರಸ್ತೆ, ಇಂಟರ್‌ಲಾಕ್ ಅಳವಡಿಸಲಾಗಿದೆ. ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಹೇಳಿದರು.
  ವಾಟುಕೊಡಿಗೆ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು. ಗ್ರಾಪಂ ಅಧ್ಯಕ್ಷ ಎಂ.ವಿ.ಸದಾಶಿವ ಆಚಾರ್ಯ, ಸದಸ್ಯರಾದ ಕೋಕಿಲಮ್ಮ, ಮಹೇಶ್ ಆಚಾರ್ಯ, ಎಂ.ಎಸ್.ಅರುಣೇಶ್, ಇಬ್ರಾಹಿಂ ಶಾಫಿ, ಬಿ.ಎಸ್.ಶಶಿಕಲಾ, ಸಿಸಿಲಿಯಾ ಲೋಬೋ, ಬಗರ್‌ಹುಕುಂ ಸಮಿತಿ ಸದಸ್ಯೆ ಹೇಮಲತಾ, ಎಂ.ಎಸ್.ಚನ್ನಕೇಶವ್, ಎಂ.ಎಸ್.ಜಯಪ್ರಕಾಶ್, ಗೇರುಬೈಲು ನಟರಾಜ್, ಮಹಮ್ಮದ್ ಹನೀಫ್, ಹಿರಿಯಣ್ಣ, ವೀರೇಶ್, ದಾಕ್ಷಾಯಣಿಬಾಯಿ, ಕಾಶಪ್ಪ, ಸೌಮ್ಯಾ, ಶುಭಾ, ಉಷಾ, ರಮ್ಯಾ, ಅನಿತಾ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts