More

    5 ವರ್ಷದೊಳಗಿನ ಮಕ್ಕಳಲ್ಲಿ ಅತಿಹೆಚ್ಚು ಕರೊನಾ ವೈರಾಣು; ಸೂಪರ್​ಸ್ಪ್ರೆಡರ್​ಗಳಾಗುತ್ತಾರಾ ಈ ಮಕ್ಕಳು?

    ನವದೆಹಲಿ: ಇತ್ತೀಚೆಗೆ ಸಂಶೋಧಕರು ನಡೆಸಿರುವ ಅಧ್ಯಯನದಲ್ಲಿ 5 ವರ್ಷದೊಳಗಿನ ಮಕ್ಕಳ ಶ್ವಾಸಕೋಶದ ಮೇಲ್ಪದರದಲ್ಲಿ ಗರಿಷ್ಠ ಪ್ರಮಾಣದ ಕರೊನಾ ವೈರಾಣು ಪತ್ತೆಯಾಗಿದೆ. ಹೀಗಾಗಿ ಈ ಮಕ್ಕಳು ಕೋವಿಡ್​-19 ಸೋಂಕಿನ ಸೂಪರ್​ ಸ್ಪ್ರೆಡರ್​ಗಳಾಗುತ್ತಾರಾ ಎಂಬ ಬಗ್ಗೆ ಅಧ್ಯಯನ ಆರಂಭಿಸಿದ್ದಾರೆ.

    ಅಮೆರಿಕದ ಷಿಕಾಗೋದ ಇಲಿನಿಯಾಸ್​ನಲ್ಲಿ ಮಾರ್ಚ್​ 23ರಿಂದ ಏಪ್ರಿಲ್​ 27ರವರೆಗೆ ಒಂದು ತಿಂಗಳ ಶಿಶುವಿನಿಂದ ಹಿಡಿದು 65 ವರ್ಷದ ಹಿರಿಯ ನಾಗರಿಕರವರೆಗೆ ಸೌಮ್ಯಲಕ್ಷಣಗಳು ಮತ್ತು ಅತಿಸೌಮ್ಯಲಕ್ಷಣಗಳನ್ನು ಹೊಂದಿದ್ದವರ ಗಂಟಲದ್ರವ ಮಾದರಿಯನ್ನು ಸಂಶೋಧಕರು ಸಂಗ್ರಹಿಸಿ ಅಧ್ಯಯನ ನಡೆಸಿದ್ದರು. ಒಟ್ಟು 145 ವ್ಯಕ್ತಿಗಳ ಮಾದರಿ ಸಂಗ್ರಹಿಸಿದ್ದ ಅವರು, ಅವನ್ನು ಐದು ವರ್ಷದೊಳಗಿನವರು, 5ರಿಂದ 17 ವರ್ಷದ ಮಕ್ಕಳು ಮತ್ತು 18 ವರ್ಷದ ಯುವಕರಿಂದ ಹಿಡಿದು 65 ವರ್ಷದವರೆಗಿನ ಹಿರಿಯ ನಾಗರಿಕರು ಎಂದು ಮೂರು ವರ್ಗಗಳನ್ನಾಗಿ ವಿಂಗಡಿಸಿದ್ದರು.

    ಈ ಮಾದರಿಗಳನ್ನು ವಿಶ್ಲೇಷಿಸಿದಾಗ 5 ವರ್ಷದ ಮಕ್ಕಳಲ್ಲಿ ಹಿರಿಯರಿಗಿಂತ 10ರಿಂದ 100 ಪಟ್ಟು ಹೆಚ್ಚಿನ ವೈರಲ್​ ಲೋಡ್​ ಇದ್ದದ್ದು ಪತ್ತೆಯಾಗಿದೆ. ಇದು ಮಕ್ಕಳ ಶ್ವಾಸಕೋಶದ ಮೇಲ್ಪದರದಲ್ಲಿ ಕೇಂದ್ರೀಕೃತವಾಗಿತ್ತು ಎಂಬುದು ಸಂಶೋಧನೆಗಳಿಂದ ಸ್ಪಷ್ಟವಾಗಿದೆ.

    ಇದನ್ನೂ ಓದಿ: VIDEO| ವರಮಹಾಲಕ್ಷ್ಮಿ ಪೂಜಿಸದಿದ್ರೆ ದಾರಿದ್ರ್ಯ ಬರುತ್ತಾ? ಬ್ರಹ್ಮಾಂಡ ಗುರೂಜಿ ಹೇಳಿದ್ದೇನು?

    ವಯಸ್ಸು ಹೆಚ್ಚಾದಂತೆ ಹಿರಿಯರಲ್ಲಿ ಇರುವಷ್ಟೇ ಪ್ರಮಾಣದ ಕರೊನಾ ವೈರಾಣುಗಳು ಮಕ್ಕಳಲ್ಲೂ ಪತ್ತೆಯಾಗಿವೆ. ಅಂದರೆ, ವೈರಾಣುಗಳು ದ್ವಿಗುಣಗೊಳ್ಳಲು ಅಗತ್ಯವಾದ ಪ್ರೋಟೀನ್​ಗಳ ಜೆನೆಟಿಕ್​ ಕೋಡ್​ ಹೊಂದಿರುವ ನ್ಯೂಕ್ಲಿಕ್​ ಆಸಿಡ್​ ಪ್ರಮಾಣ 5 ವರ್ಷದ ಮಕ್ಕಳಲ್ಲಿ ಅತ್ಯಧಿಕವಾಗಿರುವುದು ಕಂಡುಬಂದಿದೆ. ಈ ಅಧ್ಯಯನದಲ್ಲಿ ಕೇವಲ ನ್ಯೂಕ್ಲಿಕ್​ ಆಸಿಡ್​ನ ಅಂಶಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಅಂದಮಾತ್ರಕ್ಕೆ ಈ ಮಕ್ಕಳು ಕರೊನಾ ವೈರಾಣು ಸೋಂಕಿನ ಸೂಪರ್​ಸ್ಪ್ರೆಡರ್​ಗಳಾಗುತ್ತಾರೆ ಎಂದು ಅನ್ಯಥಾ ಭಾವಿಸಬಾರದು ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

    ಆದರೂ ಸಣ್ಣ ಮಕ್ಕಳಲ್ಲಿ ಅತ್ಯಧಿಕ ಪ್ರಮಾಣದ ವೈರಾಣು ಅಂಶಗಳು ಪತ್ತೆಯಾಗಿರುವುದು ಹಲವು ಆತಂಕಗಳಿಗೆ ಕಾರಣವಾಗಿದೆ. ಶಾಲೆಗಳು ಪುನರಾರಂಭಗೊಂಡ ನಂತರದಲ್ಲಿ ಮಕ್ಕಳು ತಮ್ಮ ಸಹಪಾಠಿಗಳೊಂದಿಗೆ ಆಟೋಟಗಳಲ್ಲಿ ತೊಡಗಿಕೊಳ್ಳುತ್ತಾರೆ. ಅಕ್ಕಪಕ್ಕ ಕುಳಿತು ಪಾಠ ಕೇಳುತ್ತಾರೆ. ಒಟ್ಟಿಗೆ ಊಟ ಮಾಡುತ್ತಾರೆ. ಇದರಿಂದಾಗಿ ಸೋಂಕು ಹರಡುವ ಸಾಧ್ಯತೆ ಕುರಿತು ಆತಂಕ ಇರುವುದಾಗಿ ಸಂಶೋಧಕರು ಹೇಳಿದ್ದಾರೆ.

    ತಮ್ಮ ಈ ಅಧ್ಯಯನದಿಂದ ಸಾರ್ವಜನಿಕ ಆರೋಗ್ಯದ ಮೇಲಾಗುವ ಪರಿಣಾಮಗಳ ಜತೆಗೆ, ಕೋವಿಡ್​-19 ಲಸಿಕೆ ಕಂಡುಹಿಡಿದ ಬಳಿಕ ಮೊದಲಿಗೆ ಯಾವ ವಯೋಮಾನದವರನ್ನು ಗುರಿಯಾಗಿಸಿಕೊಂಡು ಮೊದಲಿಗೆ ಲಸಿಕೆಗಳನ್ನು ಕೊಡಬೇಕು ಎಂಬುದನ್ನು ನಿರ್ಣಯಿಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

    ಬಾಯ್​ಫ್ರೆಂಡ್​ಗಳನ್ನು ಓಡಿಸಿ ಬಾಲಕಿಯರ ಮೇಲೆ ಅತ್ಯಾಚಾರ, ವಿಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್​ಮೇಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts