More

    ಕೋವಿಡ್​-19 ಪಿಡುಗು ತಂದಿಟ್ಟ ಪೇಚು; 247 ದಶಲಕ್ಷ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕರಿನೆರಳು

    ನವದೆಹಲಿ: ಭಾರತದಲ್ಲಿ ಕೋವಿಡ್​-19 ಪಿಡುಗು ಹಿನ್ನೆಲೆಯಲ್ಲಿ ದೇಶದ 247 ದಶಲಕ್ಷ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕಾರ್ಮೋಡ ಆವರಿಸಿದೆ. ಇವರೆಲ್ಲರೂ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವವರಾಗಿದ್ದಾರೆ ಎಂದು ಯೂನಿಸೆಫ್​ ಸಿದ್ಧಪಡಿಸಿರುವ ವರದಿ ತಿಳಿಸಿದೆ. ಇವರದಲ್ಲದೆ, ಶಿಶುವಿಹಾರದಲ್ಲಿ ವ್ಯಾಸಂಗ ಮಾಡುತ್ತಿರುವ 28 ದಶಲಕ್ಷ ಮಕ್ಕಳ ಭವಿಷ್ಯವನ್ನೂ ಅಂಧಕಾರಕ್ಕೆ ದೂಡಿದೆ ಎಂದು ಹೇಳಲಾಗಿದೆ.

    ಈ ವರದಿಯ ಪ್ರಕಾರ ದಕ್ಷಿಣ ಏಷ್ಯಾದ 600 ದಶಲಕ್ಷ ಮಕ್ಕಳ ವಿದ್ಯಾಭ್ಯಾಸಕ್ಕೆ ಕೋವಿಡ್​-19 ಪಿಡುಗು ಸಂಚಕಾರ ತಂದಿದೆ.

    ಭಾರತದಲ್ಲಿ ಶಾಲೆಗಳನ್ನು ಮುಚ್ಚಲಾಗಿರುವುದರಿಂದ ಪೂರ್ವಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳಲ್ಲಿ 247 ದಶಲಕ್ಷ ಮಕ್ಕಳ ಭವಿಷ್ಯ ಗಾಢಾಂಧಕಾರದಲ್ಲಿ ಸಿಲುಕಿಕೊಂಡಿದೆ. ಅಂಗನವಾಡಿ ಕೇಂದ್ರಗಳಲ್ಲಿ ಓದುತ್ತಿರುವ 28 ದಶಲಕ್ಷ ಮಕ್ಕಳ ಭವಿಷ್ಯಕ್ಕೂ ಸಂಚಕಾರ ತಂದಿದೆ. ಕೋವಿಡ್​-19 ಪಿಡುಗು ಆವರಿಸುವ ಮುನ್ನವೇ 6 ದಶಲಕ್ಷ ಬಾಲಕಿಯರು ಮತ್ತು ಬಾಲಕರು ಶಾಲೆಗಳಿಂದ ಹೊರಗುಳಿದಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಸರ್ಕಾರದ ಬಗ್ಗೆ ಮೆಚ್ಚುಗೆ: ಮಕ್ಕಳ ಓದಿಗೆ ತೊಂದರೆಯಾಗದ ರೀತಿಯಲ್ಲಿ ವೆಬ್​ ಪೊರ್ಟಲ್​, ಮೊಬೈಲ್​ ಆ್ಯಪ್​, ಟಿವಿ ಚಾನಲ್​ಗಳು, ರೇಡಿಯೋ ಮತ್ತು ಪಾಡ್​ಕಾಸ್ಟ್​ನಂತ ಇ-ಪ್ಲ್ಯಾಟ್​ಫಾರಂಗಳನ್ನು ಬಳಸಲು ಕ್ರಮ ಕೈಗೊಂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಕ್ಕೆ ವರದಿಯಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ದೀಕ್ಷಾ ಪ್ಲ್ಯಾಟ್​ಫಾರಂ, ಸ್ವಯಂ ಪ್ರಭ ಟಿವಿ ಚಾನಲ್​ಗಳು, ಇ-ಪಾಠಶಾಲಗಳು ಮತ್ತು ನ್ಯಾಷನಲ್​ ರೆಪಾಸಿಟರಿ ಆಫ್​ ಓಪನ್​ ಎಜುಕೇಷನಲ್​ ರಿಸೋಸರ್ಸ್​ ಬಳಕೆಗೆ ಕ್ರಮ ಕೈಗೊಂಡಿರುವುದಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

    ಇದನ್ನೂ ಓದಿ: ಗಿಡ ನೆಡುವುದು ಇಸ್ಲಾಂ ವಿರೋಧಿಯೇ? ಪಾಕಿಸ್ತಾನದಲ್ಲಿ ಸಸಿಗಳನ್ನು ಕಿತ್ತು ಹಾಕಿದ್ಯಾಕೆ ಜನರು?

    ಕೋವಿಡ್​-19 ಲಾಕ್​ಡೌನ್​ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್​ಸಿಇಆರ್​ಟಿ) 1ನೇ ತರಗತಿಯಿಂದ 12ನೇ ತರಗತಿವರೆಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್​ ಅನ್ನು ಸಿದ್ಧಪಡಿಸಿದೆ. ಇದರಲ್ಲಿ ಮನೆಯಲ್ಲೇ ಕುಳಿತು ಕಲಿಯಲು ಪೂರಕವಾಗಿ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ.

    ಇಂಟರ್​ನೆಟ್​ ಸಂಪರ್ಕದ ಕೊರತೆ: ಭಾರತದಲ್ಲಿ ಅಂದಾಜು ಶೇ.24 ಮನೆಗಳಲ್ಲಿ ಇಂಟರ್​ನೆಟ್​ ಸಂಪರ್ಕದ ಕೊರತೆ ಇದೆ. ಅಲ್ಲದೆ, ಗ್ರಾಮೀಣ-ನಗರ ಪ್ರದೇಶ ಹಾಗೂ ಲಿಂಗ ತಾರತಮ್ಯ ಅಗಾಧವಾಗಿದೆ ಎಂದು ಯೂನಿಸೆಫ್​ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ಭಾರಿ ಪ್ರಮಾಣದ ಮಕ್ಕಳು ದೂರಶಿಕ್ಷಣದ ಅವಕಾಶದಿಂದ ವಂಚಿತರಾಗಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದೆ.

    ಒಳಉಡುಪು ಧರಿಸಿದ ನಿಗೂಢ ಕಳ್ಳರ ಕಾರ್ಯತಂತ್ರ ಪತ್ತೆಹಚ್ಚಲು ಅಧ್ಯಯನ ನಡೆಸಿದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts