More

    ಇಲ್ಲಿ ಶಾಲೆ ಪುನರಾರಂಭದ ನಂತರ 400 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು

    ಚೆನ್ನೈ: ಕರೊನಾ ಕರಿನೆರಳಲ್ಲೇ ಶಾಲೆಗಳು ಪುನರಾರಂಭಗೊಳ್ಳುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಸೋಂಕು ತಗುಲುವ ಭೀತಿ ಇದ್ದೇ ಇದೆ. ಹೀಗಿರುವಾಗ ತಮಿಳುನಾಡಿನಲ್ಲಿ ಪ್ರೌಢಶಾಲಾ ತರಗತಿಗಳು ಪುನರಾರಂಭವಾದಾಗಿನಿಂದ ಸುಮಾರು 400 ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ಕಂಡುಬಂದಿದೆ ಎಂಬ ಮಾಹಿತಿ ಹೊರಬಿದ್ದಿದೆ.

    ರಾಜ್ಯದಲ್ಲಿ ಸೆಪ್ಟೆಂಬರ್ 1 ರಿಂದ 9 ಮತ್ತು 10ನೇ ತರಗತಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದು, ಈವರೆಗೆ 400 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು ತಗುಲಿದೆ. ಆದಾಗ್ಯೂ ಸನ್ನಿವೇಶವು ಚಿಂತಾಜನಕವಾಗಿಲ್ಲ. ಏಕೆಂದರೆ ಬಹುತೇಕ ಪ್ರಕರಣಗಳು ಪ್ರತ್ಯೇಕವಾಗಿ ಕಂಡುಬಂದಿದ್ದು, ಕ್ಲಸ್ಟರ್​ ಮಾದರಿಯಲ್ಲಿ ಸೋಂಕು ಉಲ್ಬಣವಾಗಿಲ್ಲ ಎಂದು ತಮಿಳುನಾಡಿನ ಆರೋಗ್ಯ ಕಾರ್ಯದರ್ಶಿ ಜೆ.ರಾಧಾಕೃಷ್ಣನ್​ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

    ಇದನ್ನೂ ಓದಿ: ಪಟಾಕಿ ಸ್ಫೋಟದ ಸ್ಥಳದಲ್ಲೇ ಅಕ್ರಮವಾಗಿ ಶೇಖರಿಸಿಟ್ಟಿದ್ದ ಗ್ಯಾಸ್ ಸಿಲಿಂಡರ್​ಗಳು ಪತ್ತೆ!

    ತಮಿಳುನಾಡಿನಲ್ಲಿ ಕರೊನಾ ಸೋಂಕು ಹತೋಟಿಯಲ್ಲಿದ್ದು, ಆರೋಗ್ಯ ಇಲಾಖೆಯು ಪರಿಸ್ಥಿತಿಯ ಮೇಲೆ ಪೂರ್ಣ ನಿಗಾ ಇಟ್ಟಿದೆ ಎಂದು ಶಾಲೆ ಪುನರಾರಂಭದ ಸವಾಲುಗಳ ಬಗ್ಗೆ ಗುರುವಾರ ನಡೆದ ವೆಬಿನಾರ್​ನಲ್ಲಿ ರಾಧಾಕೃಷ್ಣನ್ ಹೇಳಿದ್ದಾರೆ ಎನ್ನಲಾಗಿದೆ. ಈ ನಡುವೆ, ಕೊಯಮತ್ತೂರು ಜಿಲ್ಲೆಯಲ್ಲಿ ಖಾಸಗಿ ಶಾಲೆಯೊಂದರಲ್ಲಿ 16 ವಿದ್ಯಾರ್ಥಿನಿಯರಿಗೆ ಕರೊನಾ ದೃಢಪಟ್ಟಿದ್ದು, ಶಾಲೆಯನ್ನು ಸೀಲ್​ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)

    ಕಾಂಗ್ರೆಸ್​ ಸೈಕಲ್-ಟಾಂಗಾ ಓಡಿಸೋಕೇ ಸೀಮಿತ! ಸೋಲು ಮರೆಮಾಚಲು ದೊಂಬರಾಟ ಮಾಡ್ತಿದ್ದಾರೆ: ಸಚಿವ ಅಶೋಕ್

    ಶಾಲೆಗಳಲ್ಲಿ ಕಡ್ಡಾಯ ಕನ್ನಡ ಶಿಕ್ಷಣ: ಸರ್ಕಾರಕ್ಕೆ ಎಚ್​ಡಿಕೆ ತಾಕೀತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts