More

    ಮೂವರು ಸೈಂಟಿಸ್ಟ್​​ಗಳಿಗೆ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ

    ಸ್ಟಾಕ್​​ಹೋಮ್​: ಭೌತಶಾಸ್ತ್ರ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಸಕ್ತ ವರ್ಷದ ಪ್ರತಿಷ್ಠಿತ ನೊಬೆಲ್​ ಪುರಸ್ಕಾರ, ಕಪ್ಪುಕುಳಿಗಳ ಕುರಿತ ಸಂಶೋಧನೆಗಾಗಿ ಮೂವರು ಸೈಂಟಿಸ್ಟ್​ಗಳ ಪಾಲಾಗಿದೆ ಎಂದು ದ ರಾಯಲ್ ಸ್ವೀಡಿಷ್ ಅಕಾಡೆಮಿ ಮಂಗಳವಾರ ತಿಳಿಸಿದೆ.

    ಬ್ರಿಟನ್​ನ​ ರೋಜರ್​ ಪನ್​ರೋಸ್​ ಅವರ “ಕಪ್ಪುಕುಳಿ ರಚನೆಯ ಅನ್ವೇಷಣೆಯು ಸಾಮಾನ್ಯ ಸಾಪೇಕ್ಷ ಸಿದ್ಧಾಂತದ ದೃಢ ಊಹೆಯ ಫಲ” ಎಂಬ ಕುರಿತ ಪ್ರತಿಪಾದನೆಗೆ ನೊಬೆಲ್ ಒಲಿದಿದೆ. ಇದೇ ರೀತಿ, ಜರ್ಮನ್ ರೆನ್​ಹಾರ್ಡ್​ ಜೆನ್​ಝೆಲ್​ ಮತ್ತು ಅಮೆರಿಕನ್​ ಆಂಡ್ರಿಯಾ ಘೆಝ್ ಇಬ್ಬರು ಸೇರಿ ನಮ್ಮ ನಕ್ಷತ್ರಪುಂಜಗಳ ಮಧ್ಯೆ ಒಂದು ಬೃಹತ್ ಕಾಂಪಾಕ್ಟ್​ ವಸ್ತು ಇದೆ ಎಂಬುದನ್ನು ಶೋಧಿಸಿದಕ್ಕಾಗಿ ಪುರಸ್ಕಾರ ಒಲಿದಿದೆ.

    ಇದನ್ನೂ ಓದಿ: ಕ್ವಾರಂಟೈನಿಗಳ ನಿತ್ಯ ನರಳಾಟ: ಕೋವಿಡ್-19 ಕೇಂದ್ರಗಳ ಅವ್ಯವಸ್ಥೆ ದರ್ಶನ

    ಪ್ರತಿಷ್ಠಿತ ಪ್ರಶಸ್ತಿಯಲ್ಲಿ ಒಂದು ಚಿನ್ನದ ಪದಕ, ಬಹುಮಾನದ ನಗದು 10 ದಶಲಕ್ಷ ಸ್ವೀಡಿಶ್​ ಕ್ರೊನೋರ್​ (8.08 ಕೋಟಿ ರೂಪಾಯಿ) ಒಳಗೊಂಡಿದೆ. ಆಲ್ಫ್ರೆಡ್ ನೊಬೆಲ್​ ಸ್ಥಾಪಿಸಿದ ಪ್ರಶಸ್ತಿ ಇದು. ಹಣದುಬ್ಬರಕ್ಕೆ ಸಮನಾಗಿ ಬಹುಮಾನ ಮೊತ್ತವನ್ನು ಇತ್ತೀಚೆಗೆ ಏರಿಸಲಾಗಿದೆ. (ಏಜೆನ್ಸೀಸ್)

    ಹೆಪಟೈಟಿಸ್​ ಸೋಂಕು ಪತ್ತೆ: ಮೂವರಿಗೆ ದಕ್ಕಿತು ನೊಬೆಲ್​ ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts