More

    ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ ಅಂದ್ರು 281 ವೈದ್ಯರು!; ಯಾಕೆ, ಯಾರಲ್ಲಿ?

    ನವದೆಹಲಿ: ಇವರು ಜೀವ ಉಳಿಸುವ ವೈದ್ಯರು, ಆದರೆ ಇವರೇ ಜೀವ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅರ್ಥಾತ್, ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ ಎಂದು ಇವರು ಕೋರಿಕೊಂಡಿದ್ದಾರೆ. ಅಂದಹಾಗೆ ಹೀಗೆ ಕೇಳಿಕೊಂಡಿರುವುದು ಮೂರ್ನಾಲ್ಕು ಮಂದಿಯಲ್ಲ, ಬದಲಿಗೆ ಬರೋಬ್ಬರಿ 281 ವೈದ್ಯರು ಇಂಥದ್ದೊಂದು ಅನುಮತಿ ಕೋರಿ ಪತ್ರ ಬರೆದಿದ್ದಾರೆ.

    ಹೌದು.. ಹೀಗೆ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೋರಿರುವುದು ಬಿಎಎಂಎಸ್​ ಪದವೀಧರ ಆಯುರ್ವೇದ ವೈದ್ಯರು. ಇವರೆಲ್ಲ ಹೀಗೊಂದು ಪತ್ರವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರಿಗೆ ಬರೆದಿದ್ದಾರೆ. ಮಹಾರಾಷ್ಟ್ರ ಸರ್ಕಾರ ನಮಗೆ ಕೊಟ್ಟಿದ್ದ ಕೊಟ್ಟಿದ್ದ ಭರವಸೆ ಈಡೇರಿಸಿಲ್ಲ. ಮಾತ್ರವಲ್ಲ, ನಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದಕ್ಕಿಂತ ಸಾಯುವುದೇ ಮೇಲು ಎಂಬಂತೆ ಇವರು ತಮ್ಮ ನೋವು ತೋಡಿಕೊಂಡಿದ್ದಾರೆ.

    ಇದನ್ನೂ ಓದಿ: ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

    ವರ್ಷದ ಹಿಂದೆ ಕೋವಿಡ್​-19 ಮಹಾಮಾರಿ ಕಾಟದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದೆವು. ಈ ಸಂದರ್ಭದಲ್ಲಿ ಭೇಟಿಯಾಗಿದ್ದ ಸಿಎಂ ಉದ್ಧವ್ ಠಾಕ್ರೆ, ಡಿಸಿಎಂ ಅಜಿತ್ ಪವಾರ್, ಆರೋಗ್ಯ ಸಚಿವ ರಾಜೇಶ್ ತೋಪ್​ ಅವರು ಗುಡ್ಡಗಾಡು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ 281 ಆಯುರ್ವೇದ ವೈದ್ಯರಿಗೆ 24 ಸಾವಿರ ರೂ. ಇರುವ ವೇತನವನ್ನು 40 ಸಾವಿರ ರೂ.ಗೆ ಏರಿಸುವುದು ಎಂದು ನಿರ್ಧರಿಸಲಾಗಿತ್ತು. ಆದರೆ ಅದು ಭರವಸೆ ಆಗಿಯೇ ಉಳಿದುಕೊಂಡಿದೆ ಎಂದು ಈ ವೈದ್ಯರು ಅಲವತ್ತುಕೊಂಡಿದ್ದಾರೆ. (ಏಜೆನ್ಸೀಸ್​)

    ಮುಂಬರುವ ಈ ತಿಂಗಳಲ್ಲಿ ಎಚ್ಚರಿಕೆಯಿಂದಿರಿ: ಕರೊನಾ ಮೂರನೇ ಅಲೆ ಬಗ್ಗೆ ಹೊರಬಿತ್ತು ಆತಂಕಕಾರಿ ಅಂಶ!

    ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?

    ಇತ್ತೀಚೆಗೆ ಕೋವಿಡ್​ನಿಂದ ಸತ್ತವರಲ್ಲಿ ಶೇ.99.2 ಮಂದಿ ಲಸಿಕೆ ಪಡೆಯದವರೇ!; ಹೀಗಾಗಿದ್ದು ಎಲ್ಲಿ ಗೊತ್ತಾ?

    ಗಂಡ ಮಲಗಿದ್ದಾಗಲೇ ಮನೆಯೊಳಗೆ ನಡೆಯಿತು ದುರಂತ; ಬಾಗಿಲು ಒಡೆದು ಕೋಣೆಗೆ ಹೊಕ್ಕವನಿಗೆ ತೀವ್ರ ಆಘಾತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts