ನವದೆಹಲಿ: ಈವರೆಗಿನ ಅತಿದೊಡ್ಡ ಎಕ್ಸ್ಟಾರ್ಷನ್ ಮತ್ತು ಮನಿ ಲಾಂಡರಿಂಗ್ ಪ್ರಕರಣವೆಂದು ಭಾವಿಸಲಾಗುತ್ತಿರುವ ಪ್ರಕರಣದಲ್ಲಿ, ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್(ಇಡಿ), ಕಾನ್ಮ್ಯಾನ್ ಸುಕೇಶ್ ಚಂದ್ರಶೇಖರ್, ಅವನ ಪತ್ನಿ ಲೀನಾ ಮರಿಯ ಪೌಲ್ ಮತ್ತು ಇತರ ಆರು ಜನರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ. ಸುಕೇಶ್ ತಾನು ಅಕ್ರಮವಾಗಿ ಗಳಿಸಿದ ಹಣವನ್ನು ಹೇಗ್ಹೇಗೆ ಖರ್ಚು ಮಾಡಿದ್ದಾನೆ ಎಂದು ಹೇಳಲಾಗಿದ್ದು, ಈ ಪತಿಪತ್ನಿ ಸ್ವಂತಕ್ಕಾಗಿ ಬಂಗಲೆ, ಐಷಾರಾಮಿ ಕಾರುಗಳನ್ನು ಕೊಳ್ಳುವುದರೊಂದಿಗೆ ಬಾಲಿವುಡ್ ಸೆಲೆಬ್ರಿಟಿಗಳಿಗೂ ಹಲವು ದುಬಾರಿ ಉಡುಗೊರೆಗಳನ್ನು ನೀಡಿರುವ ಬಗ್ಗೆ ಈ 7 ಸಾವಿರ ಪುಟಗಳ ಚಾರ್ಜ್ಶೀಟ್ನಲ್ಲಿ ವಿವರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಬರೋಬ್ಬರಿ 8 ಕೋಟಿ ತೆತ್ತು ಖಾಸಗಿ ಜೆಟ್ ಹೈರ್ ಮಾಡಿದ್ದ ಸುಕೇಶ್ ದೆಹಲಿ ಮತ್ತು ಚೆನ್ನೈ ನಡುವೆ ಹಲವು ಬಾರಿ ಇದರಲ್ಲೇ ಓಡಾಡಿದ್ದ. ನಂತರದಲ್ಲಿ ಬಾಲಿವುಡ್ ನಟಿ ಜಾಕ್ಲೀನ್ ಫರ್ನಾಂಡಿಸ್ ಕೂಡ ಇದನ್ನು ಬಳಸಿದ್ದರು. ಸುಕೇಶ್ ಪತ್ನಿ ಲೀಡಾ ಮರಿಯ ಪೋಲೊ, ಮತ್ತೊಬ್ಬ ನಟಿ ನೋರಾ ಫತೇಹಿಯನ್ನು ಚೆನ್ನೈಗೆ ಆಹ್ವಾನಿಸಿ, ಬಿಎಂಡ್ಬ್ಯೂ ಕಾರು ಮತ್ತು ಐಫೋನನ್ನು ಗಿಫ್ಟ್ ಮಾಡಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: ಮನೆ ಮುಂದೆ ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಹೊತ್ತೊಯ್ದ ಕಳ್ಳರು!
ಜಾಕ್ಲೀನ್ಗೆ ಸಿಕ್ಕ ಗಿಫ್ಟ್ಗಳು: ಜಾಕ್ಲೀನ್ ಫರ್ನಾಂಡಿಸ್ಗೆ ಸುಕೇಶ್, ಕನಿಷ್ಠ 50 ಲಕ್ಷ ರೂಪಾಯಿ ಬೆಲೆ ಬಾಳುವ ಅರೇಬಿಯನ್ ಕುದುರೆ, ತಲಾ 9 ಲಕ್ಷ ರೂ. ಮೌಲ್ಯದ ಮೂರು ಪರ್ಷಿಯನ್ ಬೆಕ್ಕುಗಳು, ಒಡವೆಗಳು, ಕ್ರಾಕರಿ ಸೇರಿದಂತೆ ಸುಮಾರು 10 ಕೋಟಿ ರೂಪಾಯಿಯ ವಿವಿಧ ಉಡುಗೊರೆಗಳನ್ನು ನೀಡಿದ್ದ ಎನ್ನಲಾಗಿದೆ. ಈ ಮುನ್ನ ಜಾಕ್ಲೀನ್ರೊಂದಿಗೆ ಇಂಟಿಮೇಟ್ ಆಗಿ ಕಾಣಿಸಿಕೊಂಡಿರುವ ಸುಕೇಶ್ನ ಫೋಟೋ ಕೂಡ ವೈರಲ್ ಆಗಿದ್ದು, ಈ ವಂಚಕನನ್ನು ನಟಿ ಡೇಟಿಂಗ್ ಮಾಡ್ತಿದ್ದರು ಎಂಬ ಊಹೆಗಳಿಗೆ ಎಡೆಮಾಡಿತ್ತು.
ಈ ಹಿನ್ನೆಲೆಯಲ್ಲಿ ಏಜೆನ್ಸಿಯು ಜಾಕ್ಲೀನ್ ಮತ್ತು ನೋರಾ ಫತೇಹಿ ಈರ್ವರ ಹೇಳಿಕೆಗಳನ್ನೂ ದಾಖಲಿಸಿದೆ. ಸದ್ಯದಲ್ಲೇ ಅಪರಾಧದ ಹಣದಲ್ಲಿ ಖರೀದಿಸಲಾದ ಸ್ವತ್ತುಗಳನ್ನು ಕೋರ್ಟ್ನ ವಶಕ್ಕೆ ಅಟ್ಯಾಚ್ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸುಮಾರು 200 ಕೋಟಿ ರೂ.ಗಳನ್ನು ಸುಕೇಶ್ ಸುಲಿಗೆ ಮಾಡಿದ್ದು, ಇದನ್ನು ಆಪರೇಟ್ ಮಾಡಲು ದೊಡ್ಡ ಹವಾಲಾ ನೆಟ್ವರ್ಕನ್ನೇ ಹೊಂದಿದ್ದ. ಅವನ ಸಹಾಯಕರಲ್ಲಿ ಹಲವು ಬ್ಯಾಂಕರ್ಗಳೂ ಸೇರಿದ್ದರು ಎಂದು ಹೇಳಲಾಗಿದೆ. ಈ ಚಾರ್ಜ್ಶೀಟನ್ನು ದೆಹಲಿಯ ಕೋರ್ಟಿನಲ್ಲಿ ಫೈಲ್ ಮಾಡಿದ್ದು, ಅದರ ಕಾಪಿಗಳನ್ನು ಈ ಪ್ರಕರಣದ ಎಂಟೂ ಆರೋಪಿಗಳಿಗೆ ನೀಡಲಾಗುವುದು ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)
ಭಾರತದ ಈ ಭಾಗದಲ್ಲಿ ಕರೊನಾ ಲಸಿಕೆ ಕಡ್ಡಾಯ! ಒಲ್ಲೆ ಎನ್ನುವವರಿಗೆ ಶಿಕ್ಷೆ