ದೆಹಲಿ: 200 ಕೋಟಿ ರೂ. ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ವಿರುದ್ಧ ಬಾಲಿವುಡ್ ನಟಿ ಜಾಕ್ಲೀನ್ ಫರ್ನಾಂಡಿಸ್ ಹರಿಹಾಯ್ದಿದ್ದರು. ಆತ ತನ್ನ ಜೀವನವನ್ನೇ ನರಕ ಮಾಡಿದ ಎಂದು ಹೇಳಿಕೊಂಡಿದ್ದರು. ಈಗ ಸುಕೇಶ್ ಒಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ನೋರಾಗೆ ಜಾಕ್ಲೀನ್ ಕಂಡರೆ ಹೊಟ್ಟೆಉರಿ ಇತ್ತು ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಇನ್ನು ದಪ್ಪ ಆಗಬಾರದು ಎಂದು ವಿಜಯ್ ಸೇತುಪತಿ ತೀರ್ಮಾನ … ಯಾಕೆ ಗೊತ್ತಾ?
ತಮ್ಮ ವಕೀಲರಾದ ಅನಂತ್ ಮಲಿಕ್ ಮತ್ತು ಎ.ಕೆ. ಸಿಂಗ್ ಮೂಲಕ ಪ್ರಕಟಣೆ ಹೊರಡಿಸಿರುವ ಅವರು, ‘ನೋರಾಗೆ ಜಾಕ್ಲೀನ್ ಕಂಡರೆ ಆಗುತ್ತಿರಲಿಲ್ಲ. ಆಕೆಗೆ ನಾನು ಜಾಕ್ಲೀನ್ಳನ್ನು ಭೇಟಿ ಮಾಡುವುದು ಇಷ್ಟ ಇರಲಿಲ್ಲ. ಹಾಗಾಗಿ, ಆಕೆಯನ್ನು ಬಿಟ್ಟು ತನ್ನನ್ನು ಡೇಟಿಂಗ್ ಮಾಡುವುದಕ್ಕೆ ಒತ್ತಾಯಿಸುತ್ತಿದ್ದಳು. ಕೆಲವೊಮ್ಮೆ ದಿನಕ್ಕೆ 10 ಬಾರಿಯಾದರೂ ಫೋನ್ ಮಾಡುತ್ತಿದ್ದಳು. ಒಂದು ಪಕ್ಷ ನಾನು ಫೋನ್ ಎತ್ತದಿದ್ದರೆ, ಪದೇಪದೇ ಕಾಲ್ ಮಾಡುತ್ತಿದ್ದಳು’ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಲಾಯರ್ ಪಾತ್ರದಲ್ಲಿ ಸಂಯುಕ್ತಾ ಹೊರನಾಡು; ಲವ್ ಬರ್ಡ್ಸ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟನೆ
ಕ್ರಮೇಣ ನೋರಾಳನ್ನು ಅವಾಯ್ಡ್ ಮಾಡುವ ಪ್ರಯತ್ನ ಮಾಡಿರುವುದಾಗಿ ಹೇಳಿಕೊಂಡಿರುವ ಸುಕೇಶ್. ‘ನಾನು ಅದೆಷ್ಟು ಆಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದರೂ, ಆಕೆ ಬಿಡುತ್ತಿರಲಿಲ್ಲ. ಆಕೆಯ ಕಸಿನ್ ಬಾಬ್ಬಿಯ ಮ್ಯೂಸಿಕ್ ಕಂಪೆನಿ ಶುರು ಮಾಡುವುದಕ್ಕೆ ಸಹಾಯ ಕೇಳುತ್ತಿದ್ದಳು. ನಾನು ಸಹಾಯ ಮಾಡುತ್ತಿದೆ. ಜತೆಗೆ ತನಗೆ ಬೇಕಾದ ಒಡವೆಗಳು ಮತ್ತು ಹರ್ಮ್ಸ್ ಬ್ಯಾಗ್ಗಳ ಫೋಟೋಗಳನ್ನು ಕಳೆಸುತ್ತಿದ್ದಳು. ನಾನು ಕಳಿಸುತ್ತಿದ್ದೆ. ಆಕೆ ಅದನ್ನು ಈಗಲೂ ಬಳಸುತ್ತಿದ್ದಾಳೆ. ಸುಮ್ಮನೆ ಒಮ್ಮೆ ಬಿಲ್ ಕೊಡಿ ಎಂದು ಕೇಳಿ ನೋಡಿ. ಆಕೆಯ ಬಳಿ ಬಿಲ್ ಇಲ್ಲ. ಆ ಬ್ಯಾಗ್ಗಳ ಮೌಲ್ಯವೇ ಎರಡು ಕೋಟಿಯಷ್ಟಾಗುತ್ತದೆ’ ಎಂದು ಸುಕೇಶ್ ಹೇಳಿಕೊಂಡಿದ್ದಾರೆ.
ನಿಮಗೆ ಇಲ್ಲಿ ಸಿನಿಮಾ ಮಾಡೋ ಯೋಚನೆ ಇದ್ರೆ ಹೇಳಿ, ಮಾತಾಡೋಣ: ರಾಜಮೌಳಿಗೆ ಕ್ಯಾಮರಾನ್ ಆಫರ್