More

    ನಿಮಗೆ ಇಲ್ಲಿ ಸಿನಿಮಾ ಮಾಡೋ ಯೋಚನೆ ಇದ್ರೆ ಹೇಳಿ, ಮಾತಾಡೋಣ: ರಾಜಮೌಳಿಗೆ ಕ್ಯಾಮರಾನ್​ ಆಫರ್​

    ಲಾಸ್​ ಆಂಜಲೀಸ್​: ಕಳೆದೊಂದು ತಿಂಗಳಿನಲ್ಲಿ ‘RRR’ ಖ್ಯಾತಿಯ ನಿದೇರ್ಶಕ ಎಸ್​.ಎಸ್​. ರಾಜಮೌಳಿ ಒಂದಲ್ಲ ಒಂದು ಸುದ್ದಿಯಲ್ಲಿದ್ದಾರೆ. ಮೊದಲು ಗೋಲ್ಡನ್​ ಗ್ಲೋಬ್​​ನಲ್ಲಿ ಚಿತ್ರದ ಹಾಡಿಗೆ ಪ್ರಶಸ್ತಿ ಸಿಕ್ಕಿತು. ಆ ನಂತರ ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ ಸಮಾರಂಭದಲ್ಲಿ ಅತ್ಯುತ್ತಮ ವಿದೇಶಿ ಚಿತ್ರ ಪ್ರಶಸ್ತಿ ಸಿಕ್ಕಿತು. ಈಗ ಈ ಸಮಾರಂಭದಲ್ಲಿ ನಡೆದ ಒಂದು ಸ್ವಾರಸ್ಯಕರ ಸಂಗತಿಯೊಂದು ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಇನ್ನು ದಪ್ಪ ಆಗಬಾರದು ಎಂದು ವಿಜಯ್​ ಸೇತುಪತಿ ತೀರ್ಮಾನ … ಯಾಕೆ ಗೊತ್ತಾ?

    ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ ಸಮಾರಂಭದಲ್ಲಿ ಹಾಲಿವುಡ್​ನ ಜನಪ್ರಿಯ ನಿರ್ದೇಶಕ ಜೇಮ್ಸ್​ ಕ್ಯಾಮರಾನ್​ ಸಹ ಹಾಜರಿದ್ದರು. ಕಳೆದ ತಿಂಗಳಷ್ಟೇ ಬಿಡುಗಡೆಯಾದ ‘ಅವತಾರ್​ 2’ ಚಿತ್ರವು ಈ ಪ್ರಶಸ್ತಿ ಕಣದಲ್ಲಿತ್ತು. ಈ ಸಂದರ್ಭದಲ್ಲಿ ಕ್ಯಾಮರಾನ್​ ಮತ್ತು ರಾಜಮೌಳಿ ಭೇಟಿಯಾಗಿದೆ. ಅಷ್ಟೇ ಅಲ್ಲ, ಕ್ಯಾಮರಾನ್​ ತಮ್ಮ ಪತ್ನಿಗೆ ‘RRR’ ಚಿತ್ರವನ್ನು ನೋಡಲು ರೆಕಮಂಡ್​ ಮಾಡಿದರಂತೆ.

    ಈ ಮಧ್ಯೆ, ಹಾಲಿವುಡ್​ಗೆ ರಾಜಮೌಳಿ ಹೋಗಬಹುದು ಎಂದು ಸುದ್ದಿ ಇದೆ. ಈ ಕುರಿತು ಮಾತನಾಡಿರುವ ಕ್ಯಾಮರಾನ್​, ‘ನಿಮಗೇನಾದರೂ ಹಾಲಿವುಡ್​ನಲ್ಲಿ ಚಿತ್ರ ಮಾಡುವ ಯೋಚನೆ ಇದ್ದರೆ ಬನ್ನಿ, ಮಾತಾಡೋಣ’ ಎಂದು ಆಫರ್​ ನೀಡಿದ್ದಾರೆ.

    ಇದನ್ನೂ ಓದಿ: ‘ಪಠಾಣ್​’ ಹೊಸ ದಾಖಲೆ; ಮೊದಲ ದಿನವೇ ಎರಡು ಲಕ್ಷ ಟಿಕೆಟ್​ ಸೋಲ್ಡ್​ ಔಟ್!

    ಬರೀ ಚಿತ್ರವನ್ನಷ್ಟೇ ಅಲ್ಲ, ಚಿತ್ರದ ‘ನಾಟ್ಟು ನಾಟ್ಟು’ ಹಾಡನ್ನು ಸಹ ಮೆಚ್ಚಿಕೊಂಡಿರುವ ಕ್ಯಾಮರಾನ್​, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರ ಬೆನ್ನುತಟ್ಟಿದ್ದಾರೆ.

    ರಶ್ಮಿಕಾ ಯೂಟರ್ನ್: ರಕ್ಷಿತ್-ರಿಷಬ್ ಚಿತ್ರರಂಗದ ದಾರಿ ತೋರಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts