More

    ಸ್ವಾತಂತ್ರ್ಯ ಚಳವಳಿ ಮುನ್ನಡೆಸಿದ್ದು ಗಾಂಧೀಜಿ

    ಚಿಕ್ಕೋಡಿ, ಬೆಳಗಾವಿ: ಮಹಾತ್ಮ ಗಾಂಧೀಜಿ ಜಗತ್ತಿನಾದ್ಯಂತ ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯ ಚಳವಳಿಗಳನ್ನು ಪ್ರೇರೇಪಿಸಿದರು ಎಂದು ತಾಲೂಕು ವೈದ್ಯಾಧಿಕಾರಿ ಡಾ.ವಿಠ್ಠಲ ಶಿಂಧೆ ಹೇಳಿದರು.

    ಇಲ್ಲಿನ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಜೈ ಜವಾನ್ ಜೈ ಕಿಸಾನ್ ಎಂಬ ಘೋಷ ವಾಕ್ಯದೊಂದಿಗೆ ರೈತರ-ಯೋಧರ ಮಹತ್ವ ಸಾರಿದ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸಿ ಆದರ್ಶ ಪಾಲಿಸೋಣ ಎಂದರು. ಡಾ.ಯಶೋಧಾ ಬಬಲಿ, ಡಾ. ಮಂಗಲ ಶಾಸ್ತ್ರಿ, ಡಾ. ವಿದ್ಯಾ ಪಾಟೀಲ, ಡಾ. ರಾಜಕುಮಾರ ಮದಿಹಳ್ಳಿ, ಡಾ. ವಿದ್ಯಾಧರ ಹುಂಡೇಕರ, ಚಿದಾನಂದ ಕಲಾದಗಿಮಠ ಇತರರಿದ್ದರು.

    ಇಲ್ಲಿನ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸಿ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ, ಡಾ. ಮಹಾಂತಯ್ಯ ಮಠಪತಿ, ಡಾ. ಆರ್.ಕೆ.ಪಾಟೀಲ, ಪ್ರದೀಪ ಹೊದ್ಲೂರ, ಬಸವರಾಜ ಚೌಕಿಮಠ, ಪ್ರೊ. ಸಚಿನ ಮೆಕ್ಕಳಕಿ, ವಿನಯ ಮನಗೂಳಿ ಇತರರಿದ್ದರು.

    ಹುಕ್ಕೇರಿ ವರದಿ: ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು. ಸ್ವಚ್ಛ ಭಾರತ ಆಂದೋಲನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಸ್.ರೊಟ್ಟೇರ, ವಕೀಲ ಸಂಘದ ಅಧ್ಯಕ್ಷ ರಾಜೀವ ಚೌಗಲಾ, ತಹಸೀಲ್ದಾರ್ ಡಾ. ಡಿ.ಎಚ್.ಹೂಗಾರ, ಇಒ ಉಮೇಶ ಸಿದ್ನಾಳ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಕಂದಾಯ ಅಧಿಕಾರಿ ಪ್ರವೀಣ ಮಾಳಾಜ, ಸುಜಾತಾ ಪಾಟೀಲ, ಡಿ.ಕೆ.ಅವರಗೋಳ, ಕೆ.ಬಿ.ಕುರಬೇಟ, ಆಶಾ ಸಿಂಗಾಡಿ, ಎಂ.ಕೆ.ಪಾಟೀಲ, ಎನ್.ಐ.ದೇಮನ್ನವರ ಇತರರಿದ್ದರು.

    ಅಥಣಿ ವರದಿ: ಇಲ್ಲಿನ ರೋಟರಿ ಕ್ಲಬ್ ಮತ್ತು ಭಾರತೀಯ ಜೈನ ಸಂಘಟನೆಯಿಂದ ಗಾಂಧಿ ಜಯಂತಿ ಅಂಗವಾಗಿ ಲಕ್ಷ್ಮೀ ನಾರಾಯಣ ಸಾರ್ವಜನಿಕ ಆಟದ ಮೈದಾನ ಸ್ವಚ್ಛಗೊಳಿಸಲಾಯಿತು. ಕ್ಲಬ್ ಅಧ್ಯಕ್ಷ ಸಂತೋಷ ಬೊಮ್ಮಣ್ಣವರ, ಅರುಣ ಯಲಗುದ್ರಿ, ಡಾ. ಚಿದಾನಂದ ಮೇತ್ರಿ, ಡಾ.ಅಮೃತ ಕುಲಕರ್ಣಿ, ಶೇಖರ ಕೋಲಾರ, ಅರುಣ ಸೌದಾಗರ, ಬಾಹುಬಲಿ ಯರಂಡೋಳಿ, ಮೋಹನ ಕಾಂಬಳೆ ಇತರರಿದ್ದರು.

    ಅಥಣಿ ಗ್ರಾಮೀಣ: ನಿಮ್ಮ ಮನೆಯ ಸುತ್ತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ಗ್ರಾಮ ಸ್ವಚ್ಛವಾಗುತ್ತದೆ ಎಂದು ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು. ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಖಂಡ ಮಹೇಶ ಕಾಡದೇವರಮಠ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸುರೇಶ ರಾಠೋಡ, ಅನಿಲ ಮೇಲಿನಕೇರಿ, ಸುಭಾಷ ಸೋನಕರ, ಗ್ರಾಪಂ ಅಧ್ಯಕ್ಷ ಬಾಳಾಸಾಬ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ನಾನಾಸಾಹೇಬ ವೀರಗೌಡ, ಶಿವಗೌಡ ನೇಮಗೌಡ ಇತರರಿದ್ದರು.

    ಅರಟಾಳ ವರದಿ: ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸಿ ಜಯಂತಿ ಅಂಗವಾಗಿ ಇಲ್ಲಿನ ಗ್ರಾಪಂ ಕಾರ್ಯಾಲಯದಲ್ಲಿ ಗ್ರಾಪಂ ಮಾಜಿ ಸದಸ್ಯ ಶಿವಪ್ಪ ಪೂಜಾರಿ ಹಾಗೂ ಕರೆಪ್ಪ ಹಟ್ಟಿ, ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಪೂಜಾರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂ ಮಾಜಿ ಸದಸ್ಯ ಕರೆಪ್ಪ ಹಿರೇಕುರಬರ, ಸಮೀಪದ ಬಾಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಿ.ಆರ್.ಡಂಗಿ ಅವರು ಗಾಂಧಿ ಮತ್ತು ಶಾಸಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

    ಐಗಳಿ ವರದಿ: ಇಲ್ಲಿನ ಗ್ರಾಪಂನಲ್ಲಿ ಭಾನುವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಗ್ರಾಪಂ
    ಅಧ್ಯಕ್ಷೆ ರಾಜಶ್ರೀ ಪಾಟೀಲ, ಬಿ.ಎಸ್.ಬಿರಾದಾರ, ಶ್ರೀಶೈಲ ಮಿರ್ಜಿ, ರವೀಂದ್ರ ಹಾಲಳ್ಳಿ, ಸುರೇಶ ಬಿಜ್ಜರಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts