More

    ಸಂಭ್ರಮ ಸಡಗರದಿಂದ ನಡೆದ ರಾಮನವಮಿ

    ಚಿಕ್ಕಮಗಳೂರು: ಚಿಕ್ಕಮಗಳೂರು ನಗರಾದ್ಯಂತ ಶ್ರೀರಾಮ ನವಮಿ ಆಚರಣೆ ಸಂಭ್ರಮ ಸಡಗರದಿಂದ ನೆರವೇರಿತು. ಅದರಲ್ಲೂ ನಗರದ ಹೊರವಲಯದ ಹಿರೇಮಗಳೂರಿನಲ್ಲಿರುವ ಶ್ರೀಕೋದಂಡರಾಮಸ್ವಾಮಿ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜಾ ವಿಧಿವಿಧಾನಗಳು ಹಾಗೂ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಶ್ರೀಕೋದಂಡರಾಮಚAದ್ರ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು.

    ಇನ್ನು ಶ್ರೀರಾಮ ನವಮಿಯ ಅಂಗವಾಗಿ ಕಾಫಿ ನಾಡಿನಾದ್ಯಂತ ವಿವಿಧ ಸಂಘ ಸಂಸ್ಥೆಗಳ ಯುವಕರು ಅಲ್ಲಲ್ಲಿ ಪಾನಕ ಹಾಗೂ ಕೋಸಂಬರಿ ವಿತರಿಸುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಜನರೂ ಸಹ ಪಾನಕ ಮತ್ತು ಕೋಸಂಬರಿಯನ್ನು ಪ್ರಸಾದವನ್ನಾಗಿ ಸ್ವೀಕರಿಸಿ ಕೃತಾರ್ಥರಾದರು.
    ತಾಲೂಕಿನ ಕುರುವಂಗಿ ಗ್ರಾಮದಲ್ಲಿ ರಾಮನವಮಿ ಅಂಗವಾಗಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿAದಲೇ ವಿಶೇಷ ಪೂಜಾ ಪುನಸ್ಕಾರಗಳು ನೆರವೇರಿದವು. ಬಳಿಕ ಗ್ರಾಮದ ನೂರಾರು ಭಕ್ತಾಧಿಗಳಿಗೆ ಪಾನಕ, ಕೊಸಂಬರಿಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಹೇಶ್, ದೇವರಾಜ್, ಪ್ರಸನ್ನ, ಪ್ರಕಾಶ್, ಕಿರಣ್, ಕುಮಾರಶೆಟ್ಟಿ, ಪುನೀತ್, ಮರಿಶೆಟ್ಟಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts