More

    ಸರ್ಕಾರದ ಕ್ರಮಕ್ಕೆ ಬೆಂಬಲ

    ನವಲಗುಂದ: ಸಾಂಕ್ರಾಮಿಕ ರೋಗ ತಡೆಗೆ ಸರ್ಕಾರದ ಎಲ್ಲ ಮುಂಜಾಗ್ರತೆ ಕ್ರಮಗಳಿಗೆ ನವಲಗುಂದ ತಾಲೂಕು ವರ್ತಕರ ಸಂಘ ಸಂಪೂರ್ಣ ಸಹಕಾರ ನೀಡಲು ಮುಂದಾಗಿದೆ.

    ಕರೊನಾ ಭೀತಿಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಣೆಯಿಂದ ಬಂದ್ ಮಾಡಲು ತೀರ್ವನಿಸಿದೆ ಎಂದು ಸ್ಥಳೀಯ ವರ್ತಕರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ನವೀನ ಹುಲ್ಲೂರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

    ವರ್ತಕರ ಸಂಘದ ತಾಲೂಕಾಧ್ಯಕ್ಷ ಆರ್.ಎನ್. ಧಾರವಾಡ ಮಾತನಾಡಿ, ಕರೊನಾ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡಿದ್ದು, ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ಗ್ರಾಹಕರು ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸಿದ ಗ್ರಾಹಕರೊಂದಿಗೆ ಮಾತ್ರ ವ್ಯವಹರಿಸುವುದು. ಶುಕ್ರವಾರದಿಂದ ಮುಂದಿನ ಸೂಚನೆ ಬರುವವರೆಗೆ ಪ್ರತಿದಿನ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮಾತ್ರ ಅಂಗಡಿಗಳನ್ನು ತೆರೆಯುವಂತೆ ವ್ಯಾಪಾರಸ್ಥರಿಗೆ ಸೂಚಿಸಲಾಗಿದೆ. ಕರೊನಾ ತಡೆಯಲು ತಾಲೂಕಾಡಳಿತ ಕೈಗೊಳ್ಳುವ ಎಲ್ಲ ಕ್ರಮಗಳಿಗೆ ಬೆಂಬಲ ನೀಡುತ್ತೇವೆ ಎಂದರು. ವರ್ತಕರ ಸಂಘದ ಪದಾಧಿಕಾರಿಗಳಾದ ಅಣ್ಣಪ್ಪ ಬಾಗಿ, ಲೋಕನಾಥ ಹೆಬಸೂರ, ಶ್ರೀಕಾಂತ ಪಾಟೀಲ, ಈಶ್ವರ ಹೆಬಸೂರ, ಶಂಕರ ಧಾರವಾಡ, ನವೀನ ಹರಿಹರ, ವೀರೇಶ ಬಾಗಲಕೋಟೆ, ಇತರರಿದ್ದರು.

    ಸ್ವಯಂಪ್ರೇರಿತ ಬಂದ್ ಇಂದಿನಿಂದ: ಕರೊನಾ ಸೋಂಕು ಹರಡುವುದನ್ನು ತಡೆಯಲು ಮುಂಜಾಗ್ರತೆ ಕ್ರಮವಾಗಿ ಅಣ್ಣಿಗೇರಿ ಪಟ್ಟಣದಲ್ಲಿ ಜು. 3ರಿಂದ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಅಂಗಡಿ-ಮುಂಗಟ್ಟು ತೆರೆಯಲು ಅವಕಾಶ ಒದಗಿಸಲಾಗಿದೆ.

    ಪಟ್ಟಣದ ಮುಖ್ಯ ಮಾರುಕಟ್ಟೆಯ ಶ್ರೀ ಪರ್ವತ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗುರುವಾರ ಏರ್ಪಡಿಸಿದ್ದ ವ್ಯಾಪಾರಸ್ಥರು, ಗಣ್ಯರು, ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

    ಮುಖಂಡ ಷಣ್ಮುಖ ಗುರಿಕಾರ, ವ್ಯಾಪಾರಸ್ಥ ಚಂಬಣ್ಣ ಸುರಕೋಡ, ಎಪಿಎಂಸಿ ಸದಸ್ಯ ಚಂಬಣ್ಣ ಹಾಳದೋಟರ ಮಾತನಾಡಿದರು. ವರ್ತಕರ ಸಂಘದ ಅಧ್ಯಕ್ಷ ಮಹಾಬಳೇಶ್ವರ ಹೆಬಸೂರ, ಪುರಸಭೆ ಮುಖ್ಯಾಧಿಕಾರಿ ಕೆ.ಎಫ್. ಕಟಗಿ, ಮರದಾನ ದೊಡಮನಿ, ಪ್ರಶಾಂತ ನವಲಗುಂದ, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಅಶೋಕ ಅಗರವಾಲ, ನಿಜಗುಣೆಪ್ಪ ಅಕ್ಕಿ, ಭಗವಂತಪ್ಪ ಪುಟ್ಟಣ್ಣವರ, ಪ್ರಕಾಶ ಜೈನ, ಶೇಖಣ್ಣ ನವಲಗುಂದ, ಅಕ್ಬರಸಾಬ್ ಕರಬುಡ್ಡಿ, ಪಿಎಸ್​ಐ ಲಾಲಸಾಬ್ ಜೂಲಕಟ್ಟಿ, ಈರಣ್ಣ ಆಕಳವಾಡಿ, ಮಹೇಶ ನಾವಳ್ಳಿ, ಅಮೃತ ಹಿರೇಮಠ, ಅಲ್ತಾಫ್ ದೊಡಮನಿ, ಈರಣ್ಣ ಹಾಗೂ ಕಿರಾಣಿ, ಹೋಟೆಲ್, ಬಟ್ಟೆ ಅಂಗಡಿ, ಹಾರ್ಡ್​ವೇರ್ ಅಂಗಡಿಗಳ ಮಾಲೀಕರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts