More

    ಹಳೇ ಮಂಡಗದ್ದೆ ರಸ್ತೆಯನ್ನು ಶೀಘ್ರ ಅಗಲೀಕರಣಗೊಳಿಸಿ

    ಎನ್.ಆರ್.ಪುರ: ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗಿನ ಹಳೇ ಮಂಡಗದ್ದೆ ರಸ್ತೆ ಇಕ್ಕಟ್ಟಾಗಿದ್ದು ಕೂಡಲೇ ಈ ರಸ್ತೆ ಅಗಲೀಕರಣ ಮಾಡಬೇಕು ಎಂದು ವರ್ತಕರ ಸಂಘದ ಅಧ್ಯಕ್ಷ ಸತ್ಯನಾರಾಯಣ ಶ್ರೇಷ್ಠಿ ಸರ್ಕಾರವನ್ನು ಒತ್ತಾಯಿಸಿದರು.
    ವಾಸವಿ ಸಮುದಾಯ ಭವನದಲ್ಲಿ ವರ್ತಕರ ಸಂಘದ ಸರ್ವ ಸದಸ್ಯರ ಸಭೆ ಹಾಗೂ 2024ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಹಳೇ ಮಂಡಗದ್ದೆ ರಸ್ತೆಯಲ್ಲಿ ಪಾಕಿರ್ಂಗ್ ಸಮಸ್ಯೆ ಎದುರಾಗಿದ್ದು, ವಾಹನ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಶಾಸಕರಿಗೆ ಮನವಿ ನೀಡಿ ಸಂಬಂಧಪಟ್ಟವರಿಗೆ ಪರಿಹಾರ ನೀಡಿ ರಸ್ತೆ ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
    ಈ ಬಗ್ಗೆ ಮುಂದಿನ ದಿನಗಳಲ್ಲೂ ವರ್ತಕರ ಸಂಘದ ಪ್ರಯತ್ನ ಮುಂದುವರಿಯಲಿದೆ. ಪಟ್ಟಣದಲ್ಲಿ ವರ್ತಕರ ಭವನ ನಿರ್ಮಾಣಕ್ಕೆ ನಿವೇಶನ ಖರೀದಿಸಬೇಕಿದೆ. ಈ ಹಿಂದೆ ಇದ್ದಂತೆ ತಾಲೂಕು ಕಚೇರಿಯನ್ನು ಪಟ್ಟಣಕ್ಕೆ ವರ್ಗಾಯಿಸಲು ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲೂ ವರ್ತಕರ ಸಂಘದಿಂದ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts