More

    ದೇವರ ಅಗಸಿ ಪುರ್ನರ್ನಿಮಾಣ ಕಾಮಗಾರಿಗೆ ಭೂಮಿಪೂಜೆ

    ಆಲಮೇಲ: ಹಿಂದೆ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದಿ.ಎಂ.ಸಿ.ಮನಗೂಳಿ ಅವರ ಅನುದಾನದಲ್ಲಿ ಪಟ್ಟಣದ ದೇವರ ಅಗಸಿ ಕಾಮಗಾರಿಯನ್ನು ಅಂದಾಜು 50 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. ಸರ್ಕಾರ ಪತನವಾದ ನಂತರ ಮಾಜಿ ಶಾಸಕರ ಅವಧಿಯಲ್ಲಿ ಅನುದಾನದ ಕೊರತೆಯಿಂದ ಕಾಮಗಾರಿ ನನೆಗುದಿಯಾಗಿತ್ತು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

    ಪಟ್ಟಣದ ದೇವರ ಅಗಸಿ ಪುರ್ನರ್ನಿಮಾಣ ಕಾಮಗಾರಿಗೆ ಎಸ್‌ಎ್ಸಿ ವಿಶೇಷ ಅನುದಾನದ ಅಂದಾಜು 64.65 ಲಕ್ಷ ರೂ. ವೆಚ್ಚದಲ್ಲಿ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ನಾನು ಶಾಸಕನಾದ ಮೇಲೆ ಸರ್ಕಾರದಿಂದ ಪುನಃ ದೇವರ ಅಗಸಿ ಕಾಮಗಾರಿಗೆ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಎಸ್‌ಎ್ಸಿ ಯೋಜನೆಯಡಿ ಅಂದಾಜು 64.65 ಲಕ್ಷ ರೂ. ಬಿಡುಗಡೆಗೊಳಿಸಿ ಪುನಃ ಅಗಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪಟ್ಟಣದ ಸಿಂದಗಿ ರಸ್ತೆಯ ಂಕ್ಷನ್ ಹಾಲ್ ಹತ್ತಿರದ ಬಡಾವಣೆ ಜನರ ಅನುಕೂಲಕ್ಕಾಗಿ ಅಂದಾಜು 4 ಲಕ್ಷ ರೂ. ವೆಚ್ಚದಲ್ಲಿ ಬಸ್ ಶೆಲ್ಟರ್ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಪಟ್ಟಣದ ಬೃಹತ್ 54 ಎಕರೆ ಕೆರೆ ಅಭಿವೃದ್ಧಿಗಾಗಿ ಅಂದಾಜು 3.50 ಕೊಟಿ ರೂ. ಮಂಜೂರು ಮಾಡಿ ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ.

    ಇದೇ ತರಹ ಪಟ್ಟಣದ ಕಲಬುರಗಿ ರಸ್ತೆಯಿಂದ ಇಂಡಿ ರಸ್ತೆಯ ಪ್ರವಾಸಿ ಮಂದಿರದವರೆಗೆ ಅಂದಾಜು 20 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣ ಹಾಗೂ ರಸ್ತೆಯ ಮಧ್ಯೆ ದೀಪ ಅಳವಡಿಸುವ ಕಾಮಗಾರಿಯ ಟೆಂಡರ್ ಕರೆಯಲಾಗುತ್ತಿದೆ. ಪಟ್ಟಣದ ಭೋವಿ ಸಮುದಾಯ ಭವನಕ್ಕೆ 7 ಲಕ್ಷ ರೂ. ಹಾಗೂ ಸಾವಳಗಿ ಶಿವಲಿಂಗೇಶ್ವರ ದೇವಸ್ಥಾನಕ್ಕೆ 5 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿಗಳನ್ನು ಪ್ರಾರಂಭಿಸಿ ಪಟ್ಟಣವನ್ನು ಮಾದರಿಯನ್ನಾಗಿ ಮಾಡಲಾಗುವುದು ಎಂದರು.

    ಶಿವಕುಮಾರ ಗುಂದಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಧೀಕ ಸುಂಬಡ, ನಾಗರಿಕ ವೇದಿಕೆಯ ಅಧ್ಯಕ್ಷ ರಮೇಶ ಬಂಟನೂರ ಮಾತನಾಡಿದರು. ಪಪಂ ಮುಖ್ಯಾಧಿಕಾರಿ ಸುರೇಶ ನಾಯಕ, ಪಿಎಸ್‌ಐ ಕುಮಾರ ಹಾಡಕಾರ, ಅಂಜುಮನ್ ಕಮಿಟಿಯ ಕಾರ್ಯದರ್ಶಿ ರಾಜ ಅಹ್ಮದ ಬೆಣ್ಣೇಶಿರೂರ, ಶೌಕತಲಿ ಸುಂಬಡ, ಪಪಂ ಸದಸ್ಯ ಅಶೋಕ ಕೊಳಾರಿ, ಚಂದ್ರಕಾಂತ ಹಳೇಮನಿ, ಸೋಮನಾಥ ಮೇಲಿನಮನಿ, ಜೈಭೀಮ ನಾಯ್ಕೋಡಿ, ಭೀಮು ಬಮ್ಮನಹಳ್ಳಿ, ದಯಾನಂದ ನಾರಾಯಣಕರ, ಸಂತೋಷ ಜರಕರ, ಶಶಿಧರ ಗಣಿಹಾರ, ಮಹಿಬೂಬ ಮಸಳಿ, ವಹಾಬ ಸುಂಬಡ, ಪಪಂ ಸಿಬ್ಬಂದಿ ಬಿ.ಜಿ.ನಾರಾಯಣಕರ, ಲಾಲಸಾಬ ದೇವರಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts