More

    ಜಿಕಾ ವೈರಸ್​ನ ತಡೆಗಟ್ಟೋದು ಹೇಗೆ? ಮುನ್ನೆಚ್ಚರಿಕೆಗಾಗಿ ಸರಳ ಸಲಹೆಗಳು

    ಬೆಂಗಳೂರು: ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಮೊದಲ ಬಾರಿಗೆ ಜಿಕಾ ವೈರಸ್ ಕಾಣಿಸಿಕೊಂಡಿತ್ತು. ರಾಯಚೂರು ಜಿಲ್ಲೆಯ ಐದು ವರ್ಷದ ಬಾಲಕಿಗೆ ಸೋಂಕು ತಗುಲಿದ್ದು, ಟೆಸ್ಟ್​ ವರದಿ ಪಾಸಿಟಿವ್ ಎಂದು ಬಂದಿತ್ತು.

    ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಕೆ ಸುಧಾಕರ್ ‘ಇದು ರಾಜ್ಯದಲ್ಲಿ ಮೊದಲ ಪ್ರಕರಣವಾಗಿದ್ದು, ಸರ್ಕಾರವು ಪರಿಸ್ಥಿತಿಯನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಿದೆ. ಜಿಕಾ ವೈರಸ್​ ನಿರ್ವಹಿಸಲು ನಮ್ಮ ಇಲಾಖೆ ಸನ್ನದ್ಧವಾಗಿದೆ’ ಎಂದಿದ್ದರು.

    ಇದನ್ನೂ ಓದಿ: ರಾಯಚೂರಿನ 5 ವರ್ಷದ ಬಾಲಕಿಗೆ ಜಿಕಾ ವೈರಸ್​​ ದೃಢ: ಸೋಂಕಿನ ಲಕ್ಷಣ ಕಂಡುಬಂದರೆ ಏನು ಮಾಡಬೇಕು?

    ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನರಿಗೆ ಸಲಹೆ ನೀಡಲಾಗಿದ್ದು, ವೈದ್ಯರು ಸಾರ್ವಜನಿಕರಿಗೆ ರೋಗಲಕ್ಷಣಗಳ ಬಗ್ಗೆ ಮಾಹಿತಿ ನೀಡಿ ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳುವಂತೆ ಸೂಚಿಸಿದ್ದಾರೆ.

    ಏನಿದು ಜಿಕಾ ವೈರಸ್​?
    ಈ ಜಿಕಾ ವೈರಸ್ ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಈಡಿಸ್ ಈಜಿಪ್ಟಿ ಎಂಬ ಹೆಸರಿನ ಸೊಳ್ಳೆಯಿಂದ ಹರಡುತ್ತದೆ. ಈ ಸೊಳ್ಳೆ ಹಗಲಿನಲ್ಲಿ ಕಚ್ಚುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದದ್ದು, ಜ್ವರ, ಕಾಂಜಂಕ್ಟಿವಿಟಿಸ್, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಮತ್ತು 2-7 ದಿನಗಳವರೆಗಿನ ತಲೆನೋವು ಜಿಕಾ ಲಕ್ಷಣಗಳು.

    ಜಿಕಾ ವೈರಸ್ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ ಹಾಗೂ ಜನನದ ನಂತರ ಕೂಡ ಹರಡಬಹುದು. ಗರ್ಭಾವಸ್ಥೆಯಲ್ಲಿ ಹರಡುವ ಈ ಸೋಂಕು ಹುಟ್ಟಲಿರುವ ಮಗುವಿನ ಮೆದುಳು ಮತ್ತು ನರಮಂಡಲದಲ್ಲಿ ಸಮಸ್ಯೆ ಉಂಟು ಮಾಡಬಹುದು. ಇದರಿಂದ ಹುಟ್ಟುವ ಮಗುವಿಗೆ ಮಾನಸಿಕ ಹಾಗೂ ಶಾರೀರಿಕ ಸಮಸ್ಯೆಗಳು ತಲೆದೋರಬಹುದು.

    ಜಿಕಾ ವೈರಸ್​ನ ತಡೆಗಟ್ಟೋದು ಹೇಗೆ? ಮುನ್ನೆಚ್ಚರಿಕೆಗಾಗಿ ಸರಳ ಸಲಹೆಗಳು
    ಹುಟ್ಟೋ ಮೊದಲೇ ಜಿಕಾ ವೈರಸ್​ಗೆ ತುತ್ತಾದ ಮಗು

     

    ರೋಗವನ್ನು ತಡೆಗಟ್ಟಲು ಏನೇನು ಮುನ್ನೆಚ್ಚರಿಕೆ ತಗೋಬೇಕು?
    ಜಿಕಾ ವೈರಸ್ ಲೈಂಗಿಕವಾಗಿ ಕೂಡ ಹರಡುತ್ತೆ. ಹೀಗಾಗಿ ಕಾಂಡಮ್​ಗಳನ್ನು ಬಳಸಬೇಕು. ನೀವು ಜಿಕಾ ಪೀಡಿತ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ, ಸೊಳ್ಳೆ ಕಡಿತವನ್ನು ತಪ್ಪಿಸಲೇ ಬೇಕು. ಅದಕ್ಕೆ ದಪ್ಪನಾದ ಬಟ್ಟೆಗಳಿಂದ ಸಂಪೂರ್ಣವಾಗಿ ಶರೀರವನ್ನು ಮುಚ್ಚಬೇಕು. ಮನೆಯ ಸುತ್ತಲೂ ಸೊಳ್ಳೆ ನಿರೋಧಕ ಕೀಟನಾಶಕಗಳನ್ನು ಬಳಸಬೇಕು. ರಾತ್ರಿ ಸೊಳ್ಳೆ ಪರದೆಯನ್ನು ಹಾಸಿಗೆಯ ಸುತ್ತಲೂ ಸುತ್ತಿ ನಿದ್ದೆ ಹೊಡೆಯಬೇಕು.

    ಸೊಳ್ಳೆಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಮಾಡುವುದು ನಿಂತ ನೀರಲ್ಲಿ. ಹೀಗಾಗಿ ಮನೆಯ ಸುತ್ತಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ವೈರಸ್ ಹರಡುವ ಸಾಧ್ಯತೆ ಕಡಿಮೆಯಾಗುತ್ತೆ.

    ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೆ ಮಾತ್ರ ಜನರೆಲ್ಲರೂ ಸುರಕ್ಷಿತವಾಗಿ ಇರಬಹುದು. ನಮ್ಮ ರಕ್ಷಣೆ ನಾವು ಮಾಡಿಕೊಂಡರೂ ಸಾಕು. ನಮ್ಮಿಂದ ಇತರರಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts