More

    ಇಡೀ ಜಗತ್ತಿನಲ್ಲಿ 9 ಜನ ಭಾರತೀಯ ಮೂಲದವರು ವಿವಿಧ ದೇಶಗಳ ಮುಖ್ಯಸ್ಥರು..!

    ಬೆಂಗಳೂರು: ಎಲ್ಲರಿಗೂ ತಿಳಿದಿರುವಂತೆ ರಿಷಿ ಸುನಕ್​ ಯುಕೆ ಪ್ರಧಾನಿ ಆಗಿ ಆಯ್ಕೆ ಆಗಿದ್ದಾರೆ. ವರು ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅಳಿಯ. ಇವರು ಭಾರತ ಹಾಗೂ ಆಫ್ರಿಕಾ ಹಿನ್ನೆಲೆ ಉಳ್ಳವರು. ಇದೀಗ ಯುರೋಪ್​ನಲ್ಲಿ ಒಟ್ಟು ಮೂವರು ಪ್ರಧಾನಿಗಳು, ಭಾರತೀಯ ಮೂಲದವರು! ಬ್ರಿಟನ್​ ಬಿಟ್ಟು ಉಳಿದ ಎರಡು ದೇಶಗಳು ಯಾವುವು ಅಂತ ಕೇಳ್ತೀರಾ| ಉತ್ತರ ಹೀಗಿದೆ…

    ಪೋರ್ಚುಗಲ್​ ದೇಶದಲ್ಲಿ ಅಂತೋನಿಯೋ ಕೋಸ್ತಾ ಎನ್ನುವವರು ಪ್ರಧಾನಿ ಪಟ್ಟ ಅಲಂಕರಿಸಿದ್ದಾರೆ. ವಿಶೇಷ ಎಂದರೆ ಇವರಲ್ಲಿ ಓವರ್​ ಸೀಸ್​ ಸಿಟಿಜನ್​ ಆಫ್​ ಇಂಡಿಯಾ (ಅನಿವಾಸಿ ಭಾರತೀಯ) ಕಾರ್ಡ್​ ಕೂಡ ಇದೆ!

    ಇನ್ನು ಐರ್ಲೆಂಡ್​ ದೇಶದಲ್ಲಿ ಲಿಯೋ ವರಾದ್ಕರ್​ ಎನ್ನುವವರು ಪ್ರಧಾನಿ ಆಗಿದ್ದಾರೆ. ಇವರು ಮೂಲತಃ ಮಹರಾಷ್ಟ್ರ ಮೂಲದವರು.ಇನ್ನೂ ವಿಶೇಷ ಏನೆಂದರೆ ತಾವು ಸಲಿಂಗಿ ಎನ್ನುವುದನ್ನು ಘೋಷಿಸಿಕೊಂಡಿದ್ದಾರೆ.

    ಇಡೀ ಜಗತ್ತಿನಲ್ಲಿ 9 ಜನ ಭಾರತೀಯ ಮೂಲದವರು ವಿವಿಧ ದೇಶಗಳ ಮುಖ್ಯಸ್ಥರು..!
    ಐರ್ಲೆಂಡ್​ ಪ್ರಧಾನಿ ಲಿಯೋಫ ವರಾದ್ಕರ್​ ಮಹಾರಾಷ್ಟ್ರದ ತಮ್ಮ ಪೂರ್ವಜರ ಹಳ್ಳಿಗೆ ಭೇಟಿ ಕೊಟ್ಟ ಕ್ಷಣ…

     

    ಇದನ್ನೂ ಓದಿ: ನಿಮಗಿದು ಗೊತ್ತಾ? ಜಗತ್ತಿನಲ್ಲಿ ಈ 5 ದೇಶಗಳ ಮುಖ್ಯಸ್ಥರು ಭಾರತ ಮೂಲದವರು!

    ಇನ್ನು ಜಗತ್ತಿನ ಬೇರೆ ಭಾಗಗಳಲ್ಲಿ ಉಳಿದ 6 ಭಾರತ ಮೂಲದ ಪ್ರಧಾನಿಗಳು ಕೆಲಸ ಮಾಡುತ್ತಿದ್ದಾರೆ. ಆ ದೇಶಗಳು ಹೀಗಿವೆ:
    1) ಗುಯಾನಾ: ಅಧ್ಯಕ್ಷ ಡಾ| ಇರ್ಫಾನ್ ಅಲಿ
    2) ಸೇಶೆಲ್ಸ್: ​ಅಧ್ಯಕ್ಷ ವೇವಲ್​ ರಾಮಕಲಾವನ್​.
    3) ಸುರಿನಮೆ: ಅಧ್ಯಕ್ಷ ಚಾನ್​ ಸಂತೋಕಿ
    4) ಸಿಂಗಾಪುರ್​: ಅಧ್ಯಕ್ಷೆ ಹಲಿಮಾ ಯಕೂಬ್
    5) ಬ್ರಿಟನ್​: ಪ್ರಧಾನಿ ರಿಷಿ ಸುನಕ್​
    6) ಮಾರಿಷಸ್​: ಪ್ರಧಾನಿ ಪ್ರವಿಂದ್​ ಜುಗುನಾಥ್

    ಈ ಹೋಟೆಲಿನಲ್ಲಿ ಜ್ವಾಲಾಮುಖಿಯೇ ಒಲೆ; ಅಡುಗೆ ಮನೆಯನ್ನು ಕಟ್ಟಿದ್ದೇ ರೋಚಕ ಕಥೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts