More

    ಈ ಹೋಟೆಲಿನಲ್ಲಿ ಜ್ವಾಲಾಮುಖಿಯೇ ಒಲೆ; ಅಡುಗೆ ಮನೆಯನ್ನು ಕಟ್ಟಿದ್ದೇ ರೋಚಕ ಕಥೆ..!

    ಸ್ಪೇನ್​: ಅಡುಗೆ ಮಾಡಲು ಬಗೆ ಬಗೆಯಲ್ಲಿ ಜನ ಪ್ರಯತ್ನ ಪಡ್ತಾರೆ. ಕೆಲವರು, ಸಾಂಪ್ರದಾಯಿಕ ಎಂದು ಹೇಳಿಕೊಂಡು ಕಟ್ಟಿಗೆಯಲ್ಲೇ ಅಡುಗೆ ಮಾಡುತ್ತಾರೆ. ಆಧುನಿಕ ಜಗತ್ತಿನಲ್ಲಿ ಈಗ ಬಾಯ್ಲರ್​ಗಳನ್ನು ಬಳಸಿ ಹೊಟೇಲಿನಲ್ಲಿ ಅಡುಗೆ ಮಾಡ್ತಾರೆ. ಆದರೆ ಈ ವಿಶಿಷ್ಟ ಹೊಟೇಲಿನಲ್ಲಿ ಮಾತ್ರ ನೇರವಾಗಿ ಜ್ವಾಲಾಮುಖಿಯ ಮೇಲೆ ಪಾತ್ರೆ ಇಟ್ಟು ಅಡುಗೆ ಮಾಡ್ತಾರೆ! ಒಟ್ಟಿನಲ್ಲಿ ಇವರು ಗ್ಯಾಸ್​ನ ಖರ್ಚನ್ನು ಉಳಿಸಿರುವುದು ಸುಳ್ಳಲ್ಲ.

    ಅಂದ ಹಾಗೆ ಈ ಹೋಟೆಲು ಇರೋದು ಸ್ಪೇನ್​ ದೇಶದಲ್ಲಿ. ಸ್ಪೇನ್​ನ ಲ್ಯಾಂಜಾರೋಟ್ ಹೆಸರಿನ ದ್ವೀಪದಲ್ಲಿ ಈ ಹೊಟೇಲ್​ ಇದೆ. ಇಲ್ಲಿ ವಿಶಿಷ್ಟ ಆಹಾರ ತಯಾರಿಕೆಯ ತಂತ್ರವನ್ನು ಬಳಸಿಕೊಂಡು ಬಾಣಸಿಗರು ಅಡುಗೆ ಮಾಡ್ತಾರೆ. ಇಲ್ಲಿನ ಅಡುಗೆ ಮನೆಯ ನೆಲದಲ್ಲಿ ಒಂದು ಜ್ವಾಲಾ ಮುಖಿ ರಂಧ್ರ ಇದೆ. ಇದನ್ನೇ ಒಲೆಯ ರೀತಿ ಬಳಸಿಕೊಂಡು ಅಡುಗೆ ಮಾಡಲಾಗುತ್ತೆ. ಅಂದಹಾಗೆ ಈ ಹೋಟೆಲಿನ ಹೆಸರು ಎಲ್​-ಡಿಯಾಬ್ಲೊ. ಇದರ ಅರ್ಥ ನರಕದ ಒಡೆಯ ಎಂದು!

    ತೀವ್ರತರ ಬಿಸಿಯನ್ನು ಹೊರಸೂಸುವ ಜ್ವಾಲಾಮುಖಿಯ ಮೇಲೆ ಒಲೆ ನಿರ್ಮಿಸುವುದು ಸುಲಭದ ಕೆಲಸವಲ್ಲ. ಇದನ್ನು ವಾಸ್ತುಶಿಲ್ಪಿಗಳಾದ ಎಡ್ವರ್ಡೊ ಕ್ಯಾಸೆರೆಸ್ ಮತ್ತು ಜೀಸಸ್ ಸೊಟೊ ನಿರ್ಮಿಸಿದ್ದಾರೆ.

    ಇದಕ್ಕೆ ಅಡಿಪಾಯವನ್ನು ನಿರ್ಮಿಸಲು ನೆಲವನ್ನು ಅಗೆಯುವ ಬದಲು ಬಸಾಲ್ಟ್ ಬಂಡೆಯಿಂದ ಮಾಡಲ್ಪಟ್ಟ ಇಟ್ಟಿಗೆಗಳ 9 ಪದರಗಳನ್ನು ಹಾಕಬೇಕಾಯಿತು. ಅದರ ಮೇಲೆ ದೈತ್ಯ ಗ್ರಿಲ್ಅನ್ನು ಕೂರಿಸಲಾಗಿದೆ, ಒಲೆಯ 6 ಅಡಿ ಕೆಳಗೆ, 400 ಡಿಗ್ರಿ ಸೆಲ್ಸಿಯಸ್‌ ಬಿಸಿಯಾಗಿರುವ ಲಾವಾವನ್ನು ಸಣ್ಣಗೆ ಕುದಿಯುತ್ತಾ ಇರುತ್ತದೆ.
    ಇಲ್ಲಿ ಮುಖ್ಯವಾಗಿ ಮಾಂಸಾಹಾರವನ್ನೇ ಬೇಯಿಸಲಾಗುತ್ತದೆ.

    ಇಲ್ಲಿನ ಅಡುಗೆ ರುಚಿಯನ್ನು ಸವಿಯಲು ಭಯಪಡಬೇಕಾಗಿಲ್ಲ. ಈ ಸುಪ್ತ ಜ್ವಾಲಾಮುಖಿ, 1824 ರಲ್ಲಿ ಕೊನೆಯ ಬಾರಿ ಸ್ಫೋಟಗೊಂಡ ನಂತರ ಶಾಂತವಾಗಿದೆ. ಆದರೆ ಅಲ್ಲಿ ಲಾವಾ ಮಾತ್ರ ಸಣ್ಣಗೆ ಕುದಿಯುತ್ತಾ ಇರುತ್ತದೆ.

    ವಿಶಿಷ್ಟ ಅಡುಗೆ ವಿಧಾನಗಳ ಹೊರತಾಗಿ, ಎಲ್ ಡಿಯಾಬ್ಲೊ ಹೊಟೇಲು, ಕೆಂಪು ಮರಳು ಮತ್ತು ಜ್ವಾಲಾಮುಖಿ ಬಂಡೆಗಳ ವಿಹಂಗಮ ನೋಟವನ್ನೂ ಹೊಂದಿದೆ. ಇದು ಇರೋದು ಟಿಮಾನ್‌ಫಾಯಾ ರಾಷ್ಟ್ರೀಯ ಉದ್ಯಾನವನದಲ್ಲಿ. 18 ನೇ ಶತಮಾನದಲ್ಲಿ ದ್ವೀಪದಲ್ಲಿ ಹುಟ್ಟಿಕೊಂಡ ಸುಮಾರು 100 ಜ್ವಾಲಾಮುಖಿಗಳು “ಮೊಂಟಾನಾಸ್ ಡೆಲ್ ಫ್ಯೂಗೊ” ಅಥವಾ ಫೈರ್ ಪರ್ವತಗಳಿಂದ ರೂಪುಗೊಂಡಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts