VIDEO | ಪಿಪಿಇ ಕಿಟ್​ ಧರಿಸಿ ಕುಣಿದ ಚಾಹಲ್​ ಭಾವಿ ಪತ್ನಿ ಧನಶ್ರೀ!

blank

ಬೆಂಗಳೂರು: ಟೀಮ್​ ಇಂಡಿಯಾ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ಇತ್ತೀಚೆಗೆ ಕೋರಿಯೋಗ್ರಾಫರ್​ ಹಾಗೂ ವೈದ್ಯೆ ಧನಶ್ರೀ ವರ್ಮ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು. ಚಾಹಲ್​ ಕೈಹಿಡಿಯುವುದಕ್ಕೆ ಸಜ್ಜಾದ ಬಳಿಕ ಧನಶ್ರೀ ವರ್ಮ ಕೂಡ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ್ದಾರೆ. ಯುಟ್ಯೂಬ್​ನಲ್ಲಿ ವಿವಿಧ ಡ್ಯಾನ್ಸ್​ ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತ ಗಮನ ಸೆಳೆಯುತ್ತ ಬಂದಿದ್ದ ಧನಶ್ರೀ ವರ್ಮ ಅವರು ಈಗ ಪಿಪಿಇ ಕಿಟ್​ ಧರಿಸಿ ಮಾಡಿರುವ ನೃತ್ಯದ ವಿಡಿಯೋ ಕೂಡ ಸಾಕಷ್ಟು ವೈರಲ್​ ಆಗಿದೆ.

ಇನ್​ಸ್ಟಾಗ್ರಾಂನಲ್ಲಿ ಧನಶ್ರೀ ವರ್ಮ ಪೋಸ್ಟ್​ ಮಾಡಿರುವ ಹೊಸ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ಪಿಪಿಇ ಕಿಟ್​ ಧರಿಸಿ ಧನಶ್ರೀ ವರ್ಮ ಅವರು ‘ಕುರ್ತಾ ಪೈಜಾಮಾ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜತೆಗೆ, ‘ನನ್ನ ಕುರ್ತಾ ಪೈಜಾಮಾ ನನ್ನ ಸೇಫ್ಟಿ ಕಿಟ್​ ಆಗಿವೆ. ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಮತ್ತು ಸುರಕ್ಷಿತವಾಗಿರಿ’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್​ಗೆ ಚಾಹಲ್​ ಕೂಡ ಮೆಚ್ಚುಗೆಯ ಕಮೆಂಟ್​ ಹಾಕಿದ್ದಾರೆ.

ಇದನ್ನೂ ಓದಿ: VIDEO | ಚಾಹಲ್​ ಡ್ಯಾನ್ಸ್​ಗೆ ಭಾವಿ ಪತ್ನಿ ಕೋರಿಯೋಗ್ರಾಫರ್​!

ಧನಶ್ರೀ ಅವರು ಈ ವಿಡಿಯೋವನ್ನು ವಿಮಾನ ನಿಲ್ದಾಣದಲ್ಲಿ ಚಿತ್ರೀಕರಿಸಿದ್ದಾರೆ ಎನ್ನಲಾಗುತ್ತಿದೆ. ಚಾಹಲ್​ ಅವರೇ ಈ ವಿಡಿಯೋವನ್ನು ಶೂಟ್​ ಮಾಡಿದ್ದಾರಾ ಎಂದೂ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಚಾಹಲ್​ ಮುಂಬರುವ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಅವರು ಈಗಾಗಲೆ ಬೆಂಗಳೂರಿಗೆ ಆಗಮಿಸಿ ಕ್ವಾರಂಟೈನ್​ಗೂ ಒಳಪಟ್ಟಿದ್ದಾರೆ ಎನ್ನಲಾಗುತ್ತಿದೆ. ಧನಶ್ರೀ ಅವರು ಡ್ಯಾನ್ಸ್​ನ ಪೂರ್ಣ ವಿಡಿಯೋವನ್ನು ಯುಟ್ಯೂಬ್​ನಲ್ಲಿ ತಮ್ಮ 1.5 ದಶಲಕ್ಷ ಹಿಂಬಾಲಕರಿಗೆ ಹಂಚಿದ್ದಾರೆ.

https://www.instagram.com/p/CDvhXZulUV5/?utm_source=ig_web_copy_link

Share This Article

ಮಿತಿ ಮೀರಿ ಮೊಬೈಲ್ ಬಳಸುವುದರಿಂದ ವೃದ್ಧಾಪ್ಯದ ಲಕ್ಷಣ ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತವೆ! ತಜ್ಞರು ಏನು ಹೇಳುತ್ತಾರೆ ಗೊತ್ತಾ?… smartphone

ನವದೆಹಲಿ:  ( smartphone ) ಇತ್ತೀಚಿನ ದಿನಗಳಲ್ಲಿ ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಮೊಬೈಲ್…

ಮೊಬೈಲ್​ ಹಿಡಿದುಕೊಳ್ಳುವ ಸ್ಟೈಲ್​ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts

Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…

ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips

Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…