More

    VIDEO: ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಸಿನಿಮಾದ ‘ಪವರ್​ಫುಲ್’ ಟೀಸರ್​ನಲ್ಲಿ ಖಡಕ್​ ಡೈಲಾಗ್​ಗಳು..ಆ್ಯಕ್ಷನ್​ ಸೀನ್​ಗಳು..

    ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಅವರ ಜನ್ಮ ದಿನದ ಪ್ರಯುಕ್ತ ಅವರ ಯುವರತ್ನ ಸಿನಿಮಾದ ಡೈಲಾಗ್​ ಟೀಸರ್​ ಸೋಮವಾರ (ಇಂದು) ಬಿಡುಗಡೆಯಾಗಿದೆ.  1 ನಿಮಿಷ 39 ಸೆಕೆಂಡ್​ಗಳ ಈ ಟೀಸರ್​ನಲ್ಲಿ ಖಡಕ್​ ಡೈಲಾಗ್​ಗಳೊಂದಿಗೆ ಆ್ಯಕ್ಷನ್​ ಸನ್ನಿವೇಶಗಳೂ ಇದ್ದು ಗಮನಸೆಳೆಯುತ್ತವೆ.

    ‘ಖದರ್ ಇಲ್ದಿರೋ ಕಡೆ ನಮ್ಮ ಹುಡುಗ್ರೇ ಓಡಾಡಲ್ಲ, ಇನ್ನು ನಾನೀರ್ತೀನಾ?’ ಬ್ಯಾಟ್​, ಬಾಲ್​ ಇದೆ ಅಂತ ಫೀಲ್ಡ್​ಗೆ ಇಳಿದೋರಲ್ಲ ನಾವು…ಹೊಡಿತೀವಿ ಅಂತ ಕಾನ್ಫಿಡೆನ್ಸ್​ ಇರೋದಕ್ಕೇ ಫೀಲ್ಡಿಗೆ ಇಳಿದಿರೋದು… ಎಂಬಂತಹ ಖಡಕ್​ ಡೈಲಾಗ್​ಗಳನ್ನು ಟೀಸರ್​ನಲ್ಲಿ ಕೇಳಬಹುದು.

    ಹಾಗೇ ನಾಯಕಿ (ಸಾಯೇಶಾ ಸೈಗಲ್) ಅವರು ನಾಯಕ ಪುನೀತ್​ ಬಳಿ ಬಂದು ನೀವು ನೋಡೋಕೆ ಅಣ್ಣಾವ್ರ ಥರನೇ ಇದೀರಾ ಎಂದು ಹೇಳಿದಾಗ ಅದಕ್ಕೆ ಪ್ರತಿಯಾಗಿ ನಾಯಕ, ‘ಹಾಗಂತ ನನ್ನನ್ನು ಅಣ್ಣ ಎಂದುಕೊಳ್ಳಬೇಡಿ’ ಎಂಬಂತಹ ಪಂಚಿಂಗ್​ ಡೈಲಾಗ್​ ಹೇಳೋದನ್ನೂ ನೋಡಬಹುದು.

    ಯುವರತ್ನ ಸಿನಿಮಾದಲ್ಲಿ ಡಾಲಿ ಧನಂಜಯ್ ನೆಗೆಟಿವ್​ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ನಾಯಕಿ ಸಾಯೇಶಾ ಸೈಗಲ್ ಕೂಡ ಮುದ್ದಾಗಿ ಕಾಣಿಸುತ್ತಿದ್ದಾರೆ.

    ಸಂತೋಷ್​ ಆನಂದ್​ರಾಮ್ ನಿರ್ದೇಶನದ ಯುವರತ್ನ ಚಿತ್ರಕ್ಕೆ ವಿಜಯ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಟೀಸರ್ ಲಭ್ಯವಿದೆ. ಈಗಾಗಲೇ ಲಕ್ಷಕ್ಕೂ ಅಧಿಕ ವೀವ್ಸ್​ ಪಡೆದುಕೊಂಡಿದ್ದು, 55 ಸಾವಿರಕ್ಕೂ ಹೆಚ್ಚು ಜನ ಲೈಕ್ಸ್​ ನೀಡಿದ್ದಾರೆ. 

    ಇಂಡಿಯಾಗೆ ಬಂದ ಕರೊನಾ ವೈರಸ್​ ಈಗ ಮಂಡ್ಯಕ್ಕೂ ಕಾಲಿಟ್ಟಿತಾ..; 47 ವರ್ಷದ ಮಹಿಳೆ ವಿಮ್ಸ್​ಗೆ ದಾಖಲು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts