More

    ಎಸ್ಸೆಸ್ಸೆಲ್ಸಿ ವಿಶೇಷ ತರಗತಿಗಳಿಗೆ ಶಿಕ್ಷಕರ ಕೊರತೆ: ಅತಿಥಿ ಶಿಕ್ಷಕರ ನೇಮಿಸಲು ಯೋಚಿಸದ ಸರ್ಕಾರ

    ಬೆಂಗಳೂರು ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆಯು ನಡೆಸಲು ಉದ್ದೇಶಿಸಿರುವ ‘ವಿಶೇಷ ಪರಿಹಾರ ಬೋಧನೆ ತರಗತಿ’ಗಳಿಗೆ ಶಿಕ್ಷಕರ ಕೊರತೆ ಎದುರಾಗಿದ್ದು, ಅತಿಥಿ ಶಿಕ್ಷಕರ ಅನಿವಾರ್ಯವಾಗಿದ್ದಾರೆ.

    ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಅಂದಾಜು 31 ಸಾವಿರ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ 6 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಅತಿಥಿ ಶಿಕ್ಷಕರಿದ್ದಾರೆ. ಶಿಕ್ಷಣ ಇಲಾಖೆಯು ಅತಿಥಿ ಶಿಕ್ಷಕರನ್ನು ಜೂನ್‌ನಿಂದ ಏಪ್ರಿಲ್‌ವರೆಗೆ ನಡೆಯುವ ಪಾಠ ಪ್ರವನಚಗಳಿಗೆ ಮಾತ್ರ ಅನ್ವಯವಾಗುವಂತೆ 10 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳುತ್ತಿದೆ.

    ಈ ವರ್ಷ ಶಾಲೆಗೆ ಆರಂಭವಾಗಲು ಕೆಲವೇ ದಿನಗಳಿದ್ದು, ಅತಿಥಿ ಶಿಕ್ಷಕರ ನೇಮಕ ವಿಷಯ ಇನ್ನೂ ಪ್ರಸ್ತಾಪವೇ ಆಗಿಲ್ಲ. ಒಂದು ವೇಳೆ ಸರ್ಕಾರವು ಶಾಲೆ ಆರಂಭವಾಗುವಷ್ಟರಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳದಿದ್ದರೆ, ಎಸ್ಸೆಸ್ಸೆಲ್ಸಿ ಅನುತ್ತೀರ್ಣವಾದ ವಿದ್ಯಾರ್ಥಿಗಳಿಗೆ ನಡೆಸಲು ಉದ್ದೇಶಿಸಿರುವ ‘ವಿಶೇಷ ಪರಿಹಾರ ಬೋಧನೆ ತರಗತಿ’ಗಳಿಗೆ ಶಿಕ್ಷಕರ ಕೊರತೆ ಎದುರಾಗಲಿದೆ.
    ಹಲವು ಶಾಲೆಗಳಲ್ಲಿ ಇಂಗ್ಲಿಷ್, ಹಿಂದಿ, ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಅತಿಥಿ ಶಿಕ್ಷಕನ್ನೇ ನೆಚ್ಚಿಕೊಳ್ಳಲಾಗಿದೆ. ಕಾಯಂ ಶಿಕ್ಷಕರು ಇಲ್ಲವಾಗಿದ್ದಾರೆ. ಇಂತಹ ಶಾಲೆಗಳಲ್ಲಿ ವಿಶೇಷ ತರಗತಿಗಳಿತೆ ಶಿಕ್ಷಕರ ಕೊರತೆ ಕಾಡಲಿದೆ.

    ಅತಿಥಿಗಳಿಗೆ ಆಮಿಷ:

    ರಾಜ್ಯದ ಹಲವು ಜಿಲ್ಲೆಗಳಲ್ಲಿ ಅದರಲ್ಲಿಯೂ ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಅಂತಹ ಶಾಲೆಗಳಲ್ಲಿ ಹಿಂದಿನ ವರ್ಷ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿರುವ ಶಿಕ್ಷಕರನ್ನೇ ನೇಮಕ ಮಾಡಿಕೊಳ್ಳುತ್ತೇವೆ. ಅದಕ್ಕೂ ಮೊದಲು ನೀವು ವಿಶೇಷ ತರಗತಿಗಳಿಗೆ ಬೋಧನೆ ಮಾಡಬೇಕೆಂಬ ಷರತ್ತು ವಿಧಿಸುತ್ತಿದ್ದಾರೆ ಎಂದು ಹಲವು ಶಿಕ್ಷಕರ ಆರೋಪವಾಗಿದೆ.

    12 ತಿಂಗಳಿಗೆ ವೇತನ ನೀಡಿ:

    ಹೀಗಾಗಿ ಅತಿಥಿ ಶಿಕ್ಷಕರನ್ನು 12 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಬೇಕು. ಏಪ್ರಿಲ್‌ನಲ್ಲಿಯೂ ಲಿತಾಂಶ ನೀಡುವ ತನಕ ಕೆಲಸ ಮಾಡುತ್ತೇವೆ. ಮೇ ತಿಂಗಳಿನಲ್ಲಿ ಶಾಲೆ ಆರಂಭದ ವೇಳೆಗೆ ಹಾಜರಿರುತ್ತೇವೆ. ಆದರೂ ಪ್ರತಿ ತಿಂಗಳು ವೇತನ ಪಾವತಿಯಾಗುವುದಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ 10 ಸಾವಿರ ಮತ್ತು ಪ್ರೌಢಶಾಲೆಗಳಲ್ಲಿ 10,500ಕ್ಕೆ ದುಡಿಯುತ್ತಿದ್ದೇವೆ. ವೇತನ ಹೆಚ್ಚಳ ಮಾಡುವ ಜತೆಗೆ ವರ್ಷಪೂರ್ತಿ ವೇತನ ನೀಡಬೇಕೆಂದು ಅತಿಥಿ ಶಿಕ್ಷಕ ದುರುಗಪ್ಪ ಅಮರಾವತಿ ಒತ್ತಾಯಿಸಿದ್ದಾರೆ.

    ಮೇ 29ರಿಂದ ವಿಶೇಷ ತರಗತಿಗಳು ಆರಂಭ

    ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ಹಾಗೂ ‘ಸಿ’ ಮತ್ತು ‘ಸಿ ಪ್ಲಸ್’ ಪಡೆದ ವಿದ್ಯಾರ್ಥಿಗಳ ಲಿತಾಂಶ ಸುಧಾರಣೆಗಾಗಿ ಪರೀಕ್ಷೆ-2ರಲ್ಲಿ ಉತ್ತೀರ್ಣರಾಗುವಂತೆ ಸಿದ್ಧಗೊಳಿಸಲು ಶಿಕ್ಷಣ ಇಲಾಖೆಯು ಮೇ 15ರಿಂದ ಜೂ.5ರವರೆಗೆ ಆಯಾ ವಿಷಯ ಶಿಕ್ಷಕರಿಂದ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ನಡೆಸಲು ಉದ್ದೇಶಿಸಲಾಗಿತ್ತು.
    ಈ ಅವಧಿಯಲ್ಲಿ ನಡೆಸುವುದರಿಂದ ಶಿಕ್ಷಕರ ರಜೆ ಕಡಿತವಾಗಲಿದೆ ಎಂದು ಶಿಕ್ಷಕರ ಸಂಘದವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೇ 29ರಿಂದ ಜೂ.13ರವರೆಗೆ ನಡೆಸಲು ತೀರ್ಮಾನಿಸಿದೆ. ಪರೀಕ್ಷೆ-2 ಜೂ.14ರಿಂದ ಆರಂಭವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts