More

    ಹೊಸಪೇಟೆಯಲ್ಲಿ ಪುನೀತ್​ ರಾಜ್‍ಕುಮಾರ್ ಪುಣ್ಯಸ್ಮರಣೆ: ಅಭಿಮಾನಿಗಳಿಂದ ಅಪ್ಪುಗೆ ನಾನ್​ ವೆಜ್ ನೈವೇದ್ಯ

    ವಿಜಯನಗರ: ‘ನಗುಮುಖದ ರಾಜಕುಮಾರ’, ಸ್ಯಾಂಡಲ್​ವುಡ್​ನ ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಬಾರದ ಲೋಕಕ್ಕೆ ಹೋಗಿ ಇಂದಿಗೆ ಎರಡು ವರಷಗಳು ಕಳೆದರೂ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೋವು ಮಾತ್ರ ಇಂದಿಗೂ ಕರಗಿಲ್ಲ. ಅಪ್ಪು ಇಲ್ಲವಲ್ಲ ಎಂಬ ನೋವನ್ನು ಆಗಾಗ ವ್ಯಕ್ತಪಡಿಸುತ್ತಲೇ ಇದ್ದಾರೆ. ಅಪ್ಪು ಫೋಟೋವನ್ನು ಅಸಂಖ್ಯಾತ ಜನರು ಮನೆಗಳಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಪುನೀತ್​ ಭೂತಾಯಿಯ ಮಡಿಲು ಸೇರಿದ್ದರೂ ಅಭಿಮಾನಿಗಳಿಗೆ ಅವರ ಮೇಲಿರುವ ಪ್ರೀತಿ ಕಿಂಚಿತ್ತೂ ಕರಗಿಲ್ಲ.

    ಇಂದು ರಾಜ್ಯಾದ್ಯಂತ ಪುನೀತ್​ ರಾಜ್​ಕುಮಾರ್​ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ನಡೆಯುತ್ತಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಲಗ್ಗೆಯಿಟ್ಟಿರುವ ಅಭಿಮಾನಿಗಳು ಪುನೀತ್​ ಸಮಾಧಿಗೆ ಪೂಜೆ ಸಲ್ಲಿಸಿ, ನೆಚ್ಚಿನ ನಟನ ಸ್ಮರಣೆ ಮಾಡುತ್ತಿದ್ದಾರೆ. ರಾಜ್​ ಕುಟುಂಬವೂ ಸಹ ಬೆಳಗ್ಗೆ ಪುನೀತ್​ ಸಮಾಧಿ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.

    ರಾಜ್ಯಾದ್ಯಂತ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಪುನೀತ್​ ಮೇಲೆ ಅಭಿಮಾನ ಮೆರೆಯುತ್ತಿದ್ದಾರೆ. ಹೊಸಪೇಟೆಯ ಅಭಿಮಾನಿಗಳು ಅಪ್ಪು ಪುತ್ಥಳಿಗೆ ನಾನ್ ವೇಜ್ ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ, ಪುತ್ಥಳಿಗೆ ಪೂಜೆ, ಮಾಡಿ ಹೂಮಳೆ ಗೈದಿದ್ದಾರೆ. ಬಳಿಕ ಸಾರ್ವಜನಿಕರಿಗೆ ವೆಜ್ ಅಂಡ್ ನಾನ್ ವೆಜ್ ಅನ್ನ ಸಂತರ್ಪಣೆ ಮಾಡಿದ್ದಾರೆ.

    ಇದೇ ಸಂದರ್ಭದಲ್ಲಿ ಅಪ್ಪು ಪುತ್ಥಳಿ ಮುಂದೆ ಶಾಲಾ ಮಕ್ಕಳು ಡಾನ್ಸ್​ ಮಾಡಿ, ಅಪ್ಪುಗೆ ಗೌರವ ಸೂಚಿಸಿದರು. ವಿಜಯನಗರ ಜಿಲ್ಲೆಯ ಹೊಸಪೇಟೆಯ ಡಾ. ಪುನೀತ್ ರಾಜ್‍ಕುಮಾರ್ ವೃತ್ತದ ಬಳಿ ಇರೋ ದೊಡ್ಮನೆ ಹುಡುಗನ 6.6 ಅಡಿ ಎತ್ತರದ ಪ್ರತಿಮೆಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ಪುತ್ಥಳಿಯನ್ನು ಮಾಜಿ ಸಚಿವ ಆನಂದ್ ಸಿಂಗ್ ನಿರ್ಮಾಣ ಮಾಡಿಸಿದ್ದಾರೆ.

    ‘ಡ್ಯಾಡ್’ ಟೀಸರ್​​ಗೆ ಬಾಲಿವುಡ್ ನಿರ್ದೇಶಕ ಸುಭಾಶ್ ಘಾಯ್ ಫಿದಾ!

    ಇಸ್ರೇಲ್-ಹಮಾಸ್ ಹಿಂಸಾಚಾರಕ್ಕೆ ಭಾರತ – ಈಜಿಪ್ಟ್​ ಕಳವಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts