More

    ಬೆಂಕಿ ಅವಘಡ ಕುರಿತು 5 ಪ್ರಕರಣ ದಾಖಲು

    ಕೊಪ್ಪಳ: ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿನ ವಾಣಿಜ್ಯ ಮಳಿಗೆಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಸಂಬಂಧ ಐದು ಪ್ರಕರಣಗಳು ದಾಖಲಾಗಿವೆ.

    ತಾರಾನಾಥ ದಲಬಂಜನ್​, ದೇವರಾಜ ಏರಿ, ಮೇಘರಾಜ, ರಾಜೇಶ ಮಡಿವಾಳರ ಹಾಗೂ ಮಂಜುನಾಥ ತಟ್ಟಿ ಎಂಬುವರು ನೀಡಿದ ಪ್ರತ್ಯೇಕ ದೂರಿನ ಅನ್ವಯ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 4,74,11,335 ರೂ.ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬೆಂಕಿಯಿಂದ ಸುಟ್ಟ ಅಂಗಡಿಗಳನ್ನು ಮಂಗಳವಾರ ಸಂಪೂರ್ಣ ತೆರವು ಮಾಡಲಾಯಿತು. ಇಡೀ ದಿನ ಅಳಿದುಳಿದ ಅವಶೇಷಗಳನ್ನು ಸ್ಥಳಾಂತರಿಸಲಾಯಿತು. ಅಂಗಡಿಯವರು ಉಪಯುಕ್ತ ವಸ್ತುಗಳನ್ನು ತೆಗೆದಿರಿಸಿಕೊಂಡರು. ಶಾಸಕ ರಾಘವೇಂದ್ರ ಹಿಟ್ನಾಳ ಸ್ಥಳಕ್ಕೆ ಭೇಟಿ ನೀಡಿ ಅಂಗಡಿಕಾರರಿಗೆ ಸಾಂತ್ವಾನ ಹೇಳಿದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತರುವೆ. ನಷ್ಟ ಅನುಭವಿಸಿದ ಅಂಗಡಿಕಾರರಿಗೆ ಸೂಕ್ತ ಪರಿಹಾರ ಕೊಡಿಸುವೆ ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts