More

    ಈ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಪುಕ್ಕಟ್ಟೆಯಾಗಿ ನೋಡಬಹುದು …

    ಮುಂಬೈ: ಸುಮಾರು ಏಳು ತಿಂಗಳುಗಳ ನಂತರ ಚಿತ್ರಮಂದಿರಗಳು ಚಿತ್ರಪ್ರದರ್ಶನವನ್ನು ಪ್ರಾರಂಭಿಸಿವೆ. ಆದರೆ, ಈಗಲೂ ಜನ ಕರೊನಾಗೆ ಹೆದರಿ ಚಿತ್ರಮಂದಿಗಳತ್ತ ಧೈರ್ಯದಿಂದ ಹೆಜ್ಜಾ ಹಾಕುತ್ತಿಲ್ಲ. ಜನ ಬಾರದೆ ಚಿತ್ರಮಂದಿರದವರು ಸಹ ಕಂಗಾಲಾಗಿ, ಈ ಸಮಸ್ಯೆ ಯಾವಾಗ ಸರಿಹೋಗುತ್ತದೆ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

    ಇದನ್ನೂ ಓದಿ: ಬಹುನಿರೀಕ್ಷಿತ ‘ಲಕ್ಷ್ಮೀ’ ನೋಡಿದ ಜನ ಏನಂತಾರ ಗೊತ್ತಾ?

    ಹೀಗಿರುವಾಗಲೇ, ಬಾಲಿವುಡ್​ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಯಶ್​ರಾಜ್​ ಫಿಲಂಸ್​ ಒಂದು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ದೀಪಾವಳಿ ಹಬ್ಬದ ಅಂಗವಾಗಿ ಒಂದು ವಾರ ತನ್ನ ಸಂಸ್ಥೆಯಿಂದ ಬಿಡುಗಡೆಯಾದ ಕೆಲವು ಹಿಟ್​ ಚಿತ್ರಗಳನ್ನು ಮಲ್ಟಿಪ್ಲೆಕ್ಸ್​ಗಳಲ್ಲಿ ಪುಕ್ಕಟ್ಟೆಯಾಗಿ ತೋರಿಸುವುದಕ್ಕೆ ಮುಂದಾಗಿದೆ.

    ಹಬ್ಬ ಎನ್ನುವುದು ಒಂದು ಕಾರಣವಾದರೆ, ಜನರನ್ನು ಚಿತ್ರಮಂದಿರಗಳತ್ತ ಮತ್ತೆ ಸೆಳೆಯುವುದು ಇನ್ನೊಂದು ಕಾರಣ, ಈ ನಿಟ್ಟಿನಲ್ಲಿ ಯಶ್​ರಾಜ್​ ಫಿಲಂಸ್​ನಿಂದ ನಿರ್ಮಾಣವಾದ ‘ರಬ್​ ನೇ ಬನಾದಿ ಜೋಡಿ’, ‘ಸುಲ್ತಾನ್​’, ‘ವೀರ್​ ಜಾರಾ’, ‘ಜಬ್​ ತಕ್​ ಹೇ ಜಾನ್​’, ‘ಏಕ್​ ಥಾ ಟೈಗರ್​’ ಸೇರಿದಂತೆ ಹಲವು ಹಿಟ್​ ಚಿತ್ರಗಳನ್ನು ಜನರಿಗೆ ಪುಕ್ಕಟ್ಟೆಯಾಗಿ ತೋರಿಸುವುದಕ್ಕೆ ಸಜ್ಜಾಗಿದೆ.

    ಇದು ಎಲ್ಲಾ ಚಿತ್ರಮಂದಿರಗಳಲ್ಲೂ ಅಲ್ಲ, ಪಿವಿಆರ್​, ಐನಾಕ್ಸ್​, ಸಿನಿಪೊಲೀಸ್​ ಮುಂತಾದ ಮಲ್ಟಿಪ್ಲೆಕ್ಸ್​ಗಳಲ್ಲಿ ಈ ಚಿತ್ರಗಳ ಉಚಿತ ಪ್ರದರ್ಶನವಿದ್ದು, ಯಾರು ಬೇಕಾದರೂ ಹೋಗಿ ಈ ಚಿತ್ರಗಳನ್ನು ನೋಡಬಹುದು ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಆರ್​ಆರ್​’ ಚಿತ್ರಕ್ಕಾಗಿ ಬೃಹತ್​ ಫೈಟ್​ ಚಿತ್ರೀಕರಣ

    ಯಶ್​ರಾಜ್​ ಫಿಲಂಸ್​ ಸಂಸ್ಥೆಗೆ ಕಳೆದ ತಿಂಗಳಷ್ಟೇ 50 ವರ್ಷ ತುಂಬಿದ್ದು, ಈ ಸಂಭ್ರಮವನ್ನು ದೊಡ್ಡ ಮಟ್ಟದಲ್ಲಿ ಆಚರಿಸುವುದಕ್ಕೆ ಆದಿತ್ಯ ಚೋಪ್ರಾ ನಿರ್ಧರಿಸಿದ್ದಾರೆ. ಇದರ ಅಂಗವಾಗಿ ಮುಂದಿನ ಒಂದು ವರ್ಷ, ಹಲವು ದೊಡ್ಡ ಸ್ಟಾರ್​ಗಳ ಮತ್ತು ದೊಡ್ಡ ಬಜೆಟ್​ ಚಿತ್ರಗಳನ್ನು ಅವರು ಘೋಷಿಸಿದ್ದು, ಒಂದರಹಿಂದೊಂದು ಚಿತ್ರಗಳು ಶುರುವಾಗಲಿದ್ದು, ಅವೆಲ್ಲಾ ಮುಂದಿನ ಒಂದು ವರ್ಷದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಶಾರೂಖ್​ ಖಾನ್​ಗೆ ಆಕ್ಷನ್​-ಕಟ್​ ಹೇಳಿದ ಆಮೀರ್​ ಖಾನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts