More

    ಸೊಸೆಯಂದಿರ ಕಾಟ ತಾಳಲಾಗದೆ ಊರು ಬಿಟ್ಟಿದ್ದಲ್ಲದೆ ನದಿಗೆ ಹಾರಿದ ವೃದ್ಧೆ; ಆತ್ಮಹತ್ಯೆಗೆ ಯತ್ನಿಸಿದವಳನ್ನು ರಕ್ಷಿಸಿದ ಯುವಕರು

    ಬಾಗಲಕೋಟೆ: ಸೊಸೆಯಂದಿರ ಕಾಟವನ್ನು ತಾಳಲಾಗದೆ ನೊಂದ ವೃದ್ಧೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದನ್ನು ಕಂಡ ಯುವಕರು ತಕ್ಷಣ ನೆರವಿಗೆ ಧಾವಿಸಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಬಳಿ ಹರಿಯುವ ಮಲಪ್ರಭಾ ನದಿಗೆ ಇವರು ಹಾರಿದ್ದರು. ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಗ್ರಾಮದವರಾದ ಈ ಮಹಿಳೆ ಸೊಸೆಯಂದಿರ ಕಾಟ ತಾಳಲಾಗದೆ ಮನೆ ಬಿಟ್ಟು ಬಂದಿದ್ದರು. ಮನೆ ಬಿಟ್ಟು ಬಂದರೂ ಅದೇ ಕೊರಗಿನಿಂದ ನೊಂದುಕೊಳ್ಳುತ್ತಿದ್ದ ಈಕೆ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ನದಿಗೆ ಹಾರಿದ್ದರು.

    ಇದನ್ನೂ ಓದಿ: ‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..

    ಈ ವೇಳೆ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಮಂಗಳೂರು ಗ್ರಾಮದ ಯುವಕರು ವೃದ್ಧೆ ನದಿಗೆ ಹಾರಿದ್ದನ್ನು ಗಮನಿಸಿ, ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ನದಿಯಲ್ಲಿ ಈಜಿ ವೃದ್ಧೆಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಯುವಕರು ವೃದ್ಧೆಯನ್ನು ರಕ್ಷಿಸಿ ಹೊರತಂತ ಬಳಿಕ ಯೋಗಕ್ಷೇಮ ವಿಚಾರಿಸಿದಾಗ ಆಕೆ ತನ್ನ ಗೋಳನ್ನು ಹೇಳಿಕೊಂಡಿದ್ದಾರೆ.

    ವೃದ್ಧೆ ನದಿಗೆ ಜಿಗಿದಿದ್ದಾಗ ತಲೆಗೆ ಗಾಯವಾಗಿದೆ. ಯುವಕರು ಆಕೆಯನ್ನು ರಕ್ಷಿಸಿದ ಬಳಿಕ ಶಿವಯೋಗ ಮಂದಿರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟಿದ್ದಾರೆ. ರಕ್ಷಣೆಯಲ್ಲಿ ಪಾಲ್ಗೊಂಡ ರವಿ, ಪವನ್ ಸೇರಿ ಐದಾರು ಯುವಕರ ಈ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಕರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಪಿಂಚಣಿ-ಪಡಿತರವಿಲ್ಲ; ಈ ಕುರಿತ ಸತ್ಯಾಂಶವೇನು?

    ದೇಶದಲ್ಲೇ ಅತ್ಯಂತ ಭಾಷಾವೈವಿಧ್ಯದ ನಗರ ಬೆಂಗಳೂರು!; ಜನಗಣತಿಯ ವಿಶ್ಲೇಷಣೆಯಲ್ಲಿ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts