More

    ದೇಶದಲ್ಲೇ ಅತ್ಯಂತ ಭಾಷಾವೈವಿಧ್ಯದ ನಗರ ಬೆಂಗಳೂರು!; ಜನಗಣತಿಯ ವಿಶ್ಲೇಷಣೆಯಲ್ಲಿ ಬಹಿರಂಗ

    ಬೆಂಗಳೂರು: ಭಾರತವೇ ಅತ್ಯಂತ ವೈವಿಧ್ಯಮಯ ರಾಷ್ಟ್ರ. ಇಲ್ಲಿ ಹಲವು ಧರ್ಮ, ವಿಚಾರ, ಜಾತಿ, ಸಂಸ್ಕೃತಿಯ ಜನರಷ್ಟೇ ಅಲ್ಲ ಹಲವು ಭಾಷೆಗಳ ಜನರೂ ಇದ್ದಾರೆ. ಈ ನಡುವೆ ದೇಶದಲ್ಲಿ ಎಷ್ಟು ಭಾಷೆಗಳು ಬಳಕೆಯಲ್ಲಿವೆ ಎಂಬುದರ ಜತೆಗೆ ದೇಶದ ಅತ್ಯಂತ ಭಾಷಾವೈವಿಧ್ಯ ಇರುವ ಪ್ರದೇಶ ಯಾವುದು ಎಂಬುದು ಕೂಡ ಬಹಿರಂಗಗೊಂಡಿದೆ.

    ಬುಕಿಂಗ್ಸ್ ಸಂಸ್ಥೆಯ ಶಮಿಕಾ ರವಿ ಹಾಗೂ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್​ಸ್ಟಿಟ್ಯೂಷನ್​ನ ಅಸೋಸಿಯೇಟ್ ಪ್ರೊಫೆಸರ್ ಮುದಿತ್ ಕಪೂರ್ ಅವರು 2011ರ ಜನಗಣತಿಯನ್ನು ವಿಶ್ಲೇಷಣೆ ಮಾಡುವ ಮೂಲಕ ದೇಶದಲ್ಲಿನ ಭಾಷೆಗಳ ಬಳಕೆ ಕುರಿತ ಈ ಅಂಶವನ್ನು ಕಂಡುಕೊಂಡಿದ್ದಾರೆ.

    ಬೆಂಗಳೂರು ದೇಶದಲ್ಲೇ ಅತ್ಯಧಿಕ ಭಾಷೆಗಳು ಬಳಕೆಯಲ್ಲಿರುವ ನಗರವಾಗಿದೆ. ದೇಶದ ಅತ್ಯಂತ ಭಾಷಾವೈವಿಧ್ಯದ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 107 ಭಾಷೆಗಳನ್ನು ಮಾತನಾಡಲಾಗುತ್ತಿದೆ. ದೇಶದ 22 ಷೆಡ್ಯೂಲ್ಡ್ ಹಾಗೂ 84 ನಾನ್​-ಷೆಡ್ಯೂಲ್ಡ್​ ಭಾಷೆಗಳಿಗೆ ಕಡಿಮೆ ಇರದಂತೆ ಬೆಂಗಳೂರಿನಲ್ಲಿ ಭಾಷಾಬಳಕೆ ಇದೆ. ದೇಶದ ಯಾವುದೇ ಜಿಲ್ಲೆಯಲ್ಲೂ ಇಷ್ಟೊಂದು ಭಾಷಾವೈವಿಧ್ಯತೆ ಕಾಣಿಸುತ್ತಿಲ್ಲ ಎಂಬುದನ್ನು ಅವರು ಕಂಡುಕೊಂಡಿದ್ದಾರೆ.

    ಇದನ್ನೂ ಓದಿ: ಇನ್​ಸ್ಪೆಕ್ಟರ್​ ಜನರಲ್ ಆಫ್ ಪೊಲೀಸ್ ಅವರ ಮನೆಯಲ್ಲೇ ಕಳ್ಳತನ; ಬಾಗಿಲ ಲಾಕ್ ಮುರಿದು ಮನೆಗೆ ಹೊಕ್ಕಿದ್ದ ಕಳ್ಳರು

    ಬೆಂಗಳೂರಿನಲ್ಲಿ ಶೇ. 44.5 ಮಂದಿ ಕನ್ನಡ, ಶೇ. 15 ಜನರು ತಮಿಳು, ಶೇ. 14 ಮಂದಿ ತೆಲುಗು, ಶೇ. 12 ಮಂದಿ ಉರ್ದು, ಶೇ. 6 ಜನರು ಹಿಂದಿ ಹಾಗೂ ಶೇ. 3 ಮಂದಿ ಮಲಯಾಳಂ ಭಾಷೆ ಮಾತನಾಡುತ್ತಿದ್ದಾರೆ. ವಿಭಿನ್ನ ಭಾಷೆಗಳನ್ನು ಮಾತನಾಡುವ ಜನರು ಒಂದು ಸ್ಥಳದಲ್ಲಿ ಸೇರಿದಾಗ ಅದು ಆರ್ಥಿಕತೆ ಹಾಗೂ ಉದ್ಯೋಗಕ್ಕೆ ಚಾಲನಾ ಶಕ್ತಿ ಆಗುತ್ತದೆ ಎಂದು ಅವರು ಈ ವಿಶ್ಲೇಷಣೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. (ಏಜೆನ್ಸೀಸ್​)

    ಕರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಪಿಂಚಣಿ-ಪಡಿತರವಿಲ್ಲ; ಈ ಕುರಿತ ಸತ್ಯಾಂಶವೇನು?

    ಡಾ.ರಾಜಕುಮಾರ್-ಡಾ.ವಿಷ್ಣುವರ್ಧನ್​ ಅಭಿಮಾನಿಗಳ ಅಪೂರ್ವ ಸಂಗಮ; ಜಂಟಿ ಹೋರಾಟಕ್ಕೂ ಸಜ್ಜಾದ ಅಭಿಮಾನಿಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts