More

    ಭಾಷೆ, ಸಂಸ್ಕೃತಿ ಉಳಿಸುವ ಜವಾಬ್ದಾರಿ: ತಾರನಾಥ ಗಟ್ಟಿ ಕಾಪಿಕಾಡು ಅನಿಸಿಕೆ: ಕವಿ ಸುಂದರ ಬಾರಡ್ಕಗೆ ಗೌರವಾಭಿನಂದನೆ

    ವಿಜಯವಾಣಿ ಸುದ್ದಿಜಾಲ ಕಾಸರಗೋಡು

    ನೆಲಮೂಲ ಅಧ್ಯಯನದ ಜತೆಗೆ ಭಾಷೆ ಮತ್ತು ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡು ಹೇಳಿದರು.

    ಬಾರಡ್ಕದಲ್ಲಿ ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ, ನವಪುರ ದ್ರಾವಿಡ ಭಾಷಾ ಸಾಹಿತ್ಯ ಪುರಸ್ಕೃತ ಕವಿ ಸುಂದರ ಬಾರಡ್ಕ ಅವರಿಗೆ ಏರ್ಪಡಿಸಿದ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ದಲಿತ ಜಗತ್ತಿನ ಬೆಡಗು ಮತ್ತು ಬೆರಗನ್ನು ತಮ್ಮ ಕೃತಿಯ ಮೂಲಕ ಅಭಿವ್ಯಕ್ತಿಸಿ ಸಾಹಿತ್ಯ ಲೋಕದಲ್ಲಿ ವಿಶೇಷ ಸ್ಥಾನ ಪಡೆದಿರುವುದು ಅಭಿಮಾನದ ವಿಷಯ ಎಂದರು.

    ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಸಮಾರಂಭ ಉದ್ಘಾಟಿಸಿದರು. ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಕೇರಳ ಕೇಂದ್ರೀಯ ವಿವಿ ಪೆರಿಯ ಕ್ಯಾಂಪಸ್‌ನ ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಸೌಮ್ಯ ಎಚ್. ಮುಖ್ಯ ಅತಿಥಿಗಳಾಗಿದ್ದರು. ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಆಶಾಲತಾ ಸಿ.ಕೆ ಅಭಿನಂದನಾ ಭಾಷಣ ಮಾಡಿದರು.

    ಅಖಿಲೇಶ್ ನಗುಮುಗಂ, ಶಂಕರ ಕನಕಪ್ಪಾಡಿ, ಸತ್ಯರಾಜ್ ಬಿ, ನಿರಂಜನ ಬಾರಡ್ಕ ಉಪಸ್ಥಿತರಿದ್ದರು. ಕವಿ, ಪತ್ರಕರ್ತ ರವೀಂದ್ರನ್ ಪಾಡಿ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿ ಸಂಗಮ ನಡೆಯಿತು. ಕವಿ, ವ್ಯಂಗ್ಯಚಿತ್ರಕಾರ ವೆಂಕಟ್ ಭಟ್ ಎಡನೀರು ಉದ್ಘಾಟಿಸಿದರು. ಹಲವು ಮಂದಿ ಕವಿಗಳು ಕವನ ವಾಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts