More

    ಹಿರಿ-ಕಿರಿಯ ಮತದಾರರಲ್ಲಿ ಬೆಂಗಳೂರು ನಗರ ಮುಂದು; 7 ಕ್ಷೇತ್ರಗಳಲ್ಲಿ ಒಟ್ಟು ಶೇ.40 ಪಾಲು

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ನಗರ ಜಿಲ್ಲೆಗೆ ಒಳಪಟ್ಟಿರುವ ಏಳು ಮತಕ್ಷೇತ್ರಗಳಲ್ಲಿ ಯುವ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

    ವಿಧಾನಸಭಾ ಮತದಾನಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಚುನಾವಣಾ ಆಯೋಗ ಮತದಾರರ ಮತಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದರನ್ವಯ ಪಾಲಿಕೆಯ 28 ಮತಕ್ಷೇತ್ರಗಳಲ್ಲಿ ಒಟ್ಟು 1,43,536 ಯುವ ಮತದಾರರು ಹಾಗೂ 2,37,206 ಸಂಖ್ಯೆಯಷ್ಟು 80 ವರ್ಷ ಮೇಲ್ಪಟ್ಟ ಮತದಾರರಿದ್ದಾರೆ.

    ಯುವ ಮತದಾರರೇ ಹೆಚ್ಚು

    ಈ ಪೈಕಿ ನಗರ ಜಿಲ್ಲೆ ವ್ಯಾಪ್ತಿಯ ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ಕ್ಷೇತ್ರಗಳಲ್ಲಿ ಒಟ್ಟು 61,602 ಯುವ ಮತದಾರರು ಹಾಗೂ 67,178 ಎಂಬತ್ತು ವರ್ಷ ದಾಟಿದ ಮತದಾರರಿದ್ದಾರೆ. ಈ ಏಳೂ ಕ್ಷೇತ್ರಗಳಲ್ಲೇ ಒಟ್ಟು ಮತದಾರರ ಪಟ್ಟಿಯಲ್ಲಿ ಶೇ.40 ಮಂದಿ ಇರುವುದು ವಿಶೇಷ.

    ಹಿರಿ-ಕಿರಿಯ ಮತದಾರರಲ್ಲಿ ಬೆಂಗಳೂರು ನಗರ ಮುಂದು; 7 ಕ್ಷೇತ್ರಗಳಲ್ಲಿ ಒಟ್ಟು ಶೇ.40 ಪಾಲು

    ಇದನ್ನೂ ಓದಿ: VIDEO| ನನ್ನ ಪತಿಯನ್ನು ಉದ್ಯಮಿ ಮಾಡಿದೆ, ಮಗಳು ಆಕೆಯ ಗಂಡನನ್ನು ಪ್ರಧಾನಿ ಮಾಡಿದ್ದಾಳೆ: ಸುಧಾ ಮೂರ್ತಿ

    ರಾಜಧಾನಿಯಲ್ಲಿ ಈಗಾಗಲೇ ಚುನಾವಣಾ ಪ್ರಚಾರ ತಾರಕಕ್ಕೇರಿದೆ. ನಗರ ಜಿಲ್ಲೆಯ ಮತಕ್ಷೇತ್ರಗಳು ವಿಸ್ತೀರ್ಣ ಹಾಗೂ ಮತದಾರರ ಸಂಖ್ಯೆ ಹೆಚ್ಚಿರುವುದರಿಂದ ರಾಜಕೀಯ ಪಕ್ಷಗಳಿಗೆ ಪ್ರಚಾರ ನಡೆಸುವುದು ತುಸು ಕಷ್ಟವೆನಿಸಿದೆ. ಅದರಲ್ಲೂ ಮೊದಲ ಬಾರಿಗೆ ಮತ ಹಕ್ಕು ಪಡೆದಿರುವ ಯುವ ಮತದಾರರನ್ನು ಸಂಪರ್ಕಿಸಿ ತಮ್ಮ ಪಕ್ಷದತ್ತ ಒಲಿಸಿಕೊಳ್ಳಲು ಆಯಾ ಪಕ್ಷಗಳ ಕಾರ್ಯಕರ್ತರು ಮತಪಟ್ಟಿ ಹಿಡಿದು ಮನೆ-ಮನೆ ಸಂಪರ್ಕದಲ್ಲಿ ತೊಡಗಿದೆ. ಈ ಕಾರ್ಯವನ್ನು ಯುವ ಕಾರ್ಯಕರ್ತರು ಹಾಗೂ ಮಹಿಳಾ ಘಟಕಕ್ಕೆ ಹೊಣೆ ವಹಿಸಲಾಗಿದೆ.

    ನಗರ ಜಿಲ್ಲೆ ಕ್ಷೇತ್ರದ ಯುವ, 80 + ಮತದಾರರ ವಿವರ

    ಕ್ಷೇತ್ರದ ಹೆಸರು ಒಟ್ಟು ಮತದಾರರು ಯುವ 80+ಯಲಹಂಕ 4,38,883 8,379 8,963, ಬ್ಯಾಟರಾಯನಪುರ 5,08,799 9,305 11,237, ಯಶವಂತಪುರ 5,64,172 12,013 9,407, ದಾಸರಹಳ್ಳಿ 4,57,046 6,918 6,825, ಮಹದೇವಪುರ ಮೀ.6,07,158 7,597 9,011, ಬೆಂಗಳೂರು ದಕ್ಷಿಣ 6,95,742 9,986 13,244, ಆನೇಕಲ್ ಮೀಸಲು 4,02,595 7,404 8,491

    ಸಣ್ಣ ಕ್ಷೇತ್ರಗಳಲ್ಲಿ ದೊಡ್ಡವರ ಸಂಖ್ಯೆ ಹೆಚ್ಚು

    ಬಿಎಂಪಿ ವ್ಯಾಪ್ತಿಯ ಹಳೆಯ ಹಾಗೂ ಕೇಂದ್ರ ಭಾಗದಲ್ಲಿರುವ ಮತಕ್ಷೇತ್ರಗಳು ಕಡಿಮೆ ಸಂಖ್ಯೆಯ ಮತದಾರರನ್ನು ಹೊಂದಿವೆ. ಈ ಕ್ಷೇತ್ರಗಳಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚಿರುವುದರಿಂದ ಮತದಾರರ ಸಂಖ್ಯೆ ಕಡಿಮೆ ಇದೆ. ಆದರೂ, ಇಂತಹ ಸಣ್ಣ ಕ್ಷೇತ್ರಗಳಲ್ಲಿ ದೊಡ್ಡವರ (80+) ಸಂಖ್ಯೆ ಗಣನೀಯವಾಗಿದೆ. ಇವುಗಳಲ್ಲಿ ಮಲ್ಲೇಶ್ವರ – 10,867, ಹೆಬ್ಬಾಳ – 9,149, ಸರ್ವಜ್ಞನಗರ – 10,233, ಸಿ.ವಿ.ರಾಮನ್‌ನಗರ – 9,098, ಬಸವನಗುಡಿ – 10,162, ಜಯನಗರ – 9,915, ಪದ್ಮನಾಭನಗರ – 10,238.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts