More

    ಕಾಜಿರಂಗ ಉದ್ಯಾನ: ಪ್ರವಾಹಕ್ಕೆ ಸಿಲುಕಿದ್ದ ಪುಟ್ಟ ಘೇಂಡಾಮೃಗದ ರಕ್ಷಣೆ

    ಗೌಹಾಟಿ: ಪ್ರವಾಹಕ್ಕೆ ಒಳಗಾಗಿರುವ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದ ಪ್ರದೇಶದಿಂದ ಜನಿಸಿ ಹತ್ತೇ ದಿನಗಳಾಗಿರುವ ಪುಟ್ಟ ಘೇಂಡಾಮೃಗವೊಂದನ್ನು ರಕ್ಷಿಸಲಾಗಿದೆ. ಮಿಹಿಮುಖ್​ ಪ್ರದೇಶದ ಬಳಿಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಈ ಘೇಂಡಾಮೃಗದ ಮರಿಯನ್ನು ಪಾರ್ಕ್​ ಸಿಬ್ಬಂದಿ ಮಂಗಳವಾರ ರಕ್ಷಿಸಿದ್ದಾರೆ.

    “ಈ ಘೇಂಡಾಮೃಗದ ತಾಯಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಮರಿಯು ಬಲಹೀನವಾಗಿದ್ದುದರಿಂದ ಅದನ್ನು ಶುಶ್ರೂಷೆ ಮತ್ತು ಆರೈಕೆಗಾಗಿ ವೈಲ್ಡ್​ಲೈಫ್​ ರಿಹ್ಯಾಬಿಲಿಟೇಷನ್ ಅಂಡ್​ ಕನ್ಸರ್ವೇಷನ್​ ಸೆಂಟರ್​​ಗೆ ಕಳುಹಿಸಲಾಗಿದೆ” ಎಂದು ಪಾರ್ಕ್​ ಅಧಿಕಾರಿ ಹೇಳಿದ್ದಾರೆ.

    ಇದನ್ನೂ ಓದಿ: ಗ್ರಾಹಕರಿಗೆ ಅಡುಗೆ ಸಿಲಿಂಡರ್‌ ಬರೆ: ಪುನಃ ಗಗನಕ್ಕೇರಿದ ಬೆಲೆ- ಎಲ್ಲೆಲ್ಲಿ ಎಷ್ಟೆಷ್ಟು?

    ಕಾಜಿರಂಗ ಪಾರ್ಕ್​ನಲ್ಲಿ ಪ್ರವಾಹ ಪರಿಸ್ಥಿತಿ ವಿಷಮವಾಗಿದ್ದು, ಶೇ. 70 ರಷ್ಟು ಪ್ರದೇಶಗಳು ಜಲಾವೃತವಾಗಿವೆ. ಪಾರ್ಕ್​ನಲ್ಲಿರುವ 223 ಆ್ಯಂಟಿ-ಪೋಚಿಂಗ್​ ತಾಣಗಳಲ್ಲಿ 153 ಪ್ರದೇಶಗಳು ಬಾಧಿತವಾಗಿವೆ. ಪ್ರವಾಹದಿಂದಾಗಿ ಈವರೆಗೆ 7 ಹಾಗ್​ ಡೀರ್​ಗಳು ಸೇರಿದಂತೆ 9 ವನ್ಯಪ್ರಾಣಿಗಳು ಮೃತಪಟ್ಟಿವೆ. ಇನ್ನೂ 5 ಹಾಗ್​ ಡೀರ್​ಗಳು ಪಾರ್ಕ್​ಅನ್ನು ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 37 ರಲ್ಲಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

    ಮನೆಯ ಬಳಿ ಆಡುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ!

    ಸೊಂಟದ ಬೊಜ್ಜು ಕರಗಿಸಿ ದೇಹದ ತೂಕ ಇಳಿಸಲು ಮರೀಚ್ಯಾಸನ ಮಾಡಿ!

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts