More

    ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ-ರಿಕಿ ಪಾಂಟಿಂಗ್ ನಡುವೆ ಜಗಳ!

    ನವದೆಹಲಿ: ಐಪಿಎಲ್ 13ನೇ ಆವೃತ್ತಿಯ ವೇಳೆ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್​ ರಿಕಿ ಪಾಂಟಿಂಗ್ ನಡುವೆ ಮಾತಿನ ಚಕಮಕಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಡೆಲ್ಲಿ ತಂಡದ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

    ನವೆಂಬರ್ 2ರಂದು ಅಬುಧಾಬಿಯಲ್ಲಿ ನಡೆದ ಉಭಯ ತಂಡಗಳ ಪಾಲಿನ ನಿರ್ಣಾಯಕ ಅಂತಿಮ ಲೀಗ್ ಪಂದ್ಯದ ವೇಳೆ ಈ ಘಟನೆ ನಡೆದಿತ್ತು. ಆರ್‌ಸಿಬಿ ಇನಿಂಗ್ಸ್‌ನ ಸ್ಟ್ರಾಟಜಿಕ್ ಟೈಮ್‌ಔಟ್ ವೇಳೆ ಕೊಹ್ಲಿ ಅಂಪೈರ್ ಜತೆಗೆ ಚರ್ಚಿಸುತ್ತಿದ್ದಾಗ ಪಾಂಟಿಂಗ್ ಮಧ್ಯಪ್ರವೇಶಿಸಿದ್ದರು. ಈ ವೇಳೆ ಕೊಹ್ಲಿ-ಪಾಂಟಿಂಗ್ ನಡುವೆ ಭಾರಿ ವಾಗ್ವಾದ ನಡೆದಿರುವುದನ್ನು ಅಶ್ವಿನ್, ಆನ್‌ಲೈನ್ ಮಾತುಕತೆಯ ವೇಳೆ ಬಹಿರಂಗಪಡಿಸಿದ್ದಾರೆ.

    ಈ ಪಂದ್ಯದಲ್ಲಿ ಅಶ್ವಿನ್, ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದ್ದರು. ಇದೇ ಮೊದಲ ಬಾರಿಗೆ ಕೊಹ್ಲಿ ವಿಕೆಟ್ ಕಬಳಿಸಿದ ಬಗ್ಗೆ ಸಂಭ್ರಮ ವ್ಯಕ್ತಪಡಿಸಿರುವ ಸಮಯದಲ್ಲಿ ಅಶ್ವಿನ್, ಮೈದಾನದಲ್ಲಿ ಆಕ್ರಮಣಕಾರಿ ವರ್ತನೆ ತೋರುವುದಕ್ಕೆ ಹೆಸರುವಾಸಿಯಾಗಿರುವ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ನಡುವಿನ ವಾಗ್ವಾದದ ಬಗ್ಗೆ ಮಾತನಾಡಿದ್ದಾರೆ.

    ಪಂದ್ಯದಲ್ಲಿ ಬೆನ್ನು ನೋವಿನ ನಡುವೆ ಬೌಲಿಂಗ್ ಕೋಟಾ ಮುಗಿಸಿದ ಬಳಿಕ ಅಶ್ವಿನ್ ಮೈದಾನದಿಂದ ನಿರ್ಗಮಿಸಿದ್ದರು. ಈ ಬಗ್ಗೆ ಆರ್‌ಸಿಬಿ ನಾಯಕ ಕೊಹ್ಲಿ ಪ್ರಶ್ನಿಸಿದ್ದರು. ಆಗ ಪಾಂಟಿಂಗ್ ಸಮರ್ಥನೆ ನೀಡಿದ್ದರು. ಪಾಂಟಿಂಗ್ ಯಾವುದೇ ಜಗಳವನ್ನೂ ಹಾಗೇ ಬಿಡುವವರಲ್ಲ ಎಂದೂ ಅಶ್ವಿನ್ ಹೇಳಿದ್ದಾರೆ.

    ಐಪಿಎಲ್ ಪ್ರಶಸ್ತಿ ಗೆಲುವನ್ನು 3 ತಿಂಗಳ ಪುತ್ರನಿಗೆ ಅರ್ಪಿಸಿದ ಹಾರ್ದಿಕ್ ಪಾಂಡ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts