More

    ಕಳೆದ 6 ವರ್ಷಗಳಲ್ಲಿ 10,933 ಎನ್​ಕೌಂಟರ್​! ಕ್ರಿಮಿನಲ್​ಗಳ ವಿರುದ್ಧ ಯೋಗಿ ಸರ್ಕಾರ ಕ್ರಮ

    ಲಖನೌ: ಕಳೆದ ಆರು ವರ್ಷಗಳಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಇದುವರೆಗೆ 10,933 ಎನ್​ಕೌಂಟರ್​ಗಳಿಗೆ ಸಾಯಾಗಿದೆ. 183 ಕುಖ್ಯಾತ ದುಷ್ಕರ್ಮಿಗಳನ್ನು ಹತ್ಯೆ ಮಾಡಲಾಗಿದೆ. 5,046 ದುಷ್ಕರ್ಮಿಗಳು ಪೊಲೀಸರ ಗುಂಡಿನ ದಾಳಿಯಿಂದ ಗಾಯಗೊಂಡಿದ್ದಾರೆ. ಬಳಿಕ ಅವರನ್ನು ಬಂಧಿಸಲಾಗಿದೆ.

    ಎನ್​ಕೌಂಟರ್​ ಸಮಯದಲ್ಲಿ ಇದುವರೆಗೆ 23,348 ಅಪರಾಧಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಾರ್ಯಾಚರಣೆ ವೇಳೆ 13 ಪೊಲೀಸರು ಪ್ರಾಣಕಳೆದುಕೊಂಡಿದ್ದಾರೆ. 1,443 ಪೊಲೀಸರು ಗಾಯಗೊಂಡಿದ್ದಾರೆ. ಮೇರಠ್​ ವಲಯದಲ್ಲಿ ಹೆಚ್ಚಿನ ಎನ್​ಕೌಂಟರ್​ಗಳು ನಡೆದಿವೆ. ಜಿಲ್ಲೆಯಲ್ಲಿ ಆರು ವರ್ಷಗಳಲ್ಲಿ 3,205 ಎನ್​ಕೌಂಟರ್​ ಗಳು ನಡೆದಿವೆ. 64 ಅಪರಾಧಿಗಳು ಮೃತಪಟ್ಟು, 1708 ಮಂದಿ ಗಾಯಗೊಂಡಿದ್ದಾರೆ. 5967 ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಗ್ರಾದಲ್ಲಿ ಎರಡನೇ ಅತಿ ಹೆಚ್ಚು ಎನ್​ಕೌಂಟರ್​ಗಳಿವೆ.

    ಇದನ್ನೂ ಓದಿ: ಚುನಾವಣಾ ಜಾಗೃತಿ ಅಭಿಯಾನಕ್ಕೆ ಎನ್​ಜಿಒ ಸಾಥ್; ​ಸಮುದ್ರ ತೀರ, ರೈಲು, ಬಸ್ಸು, ಸಂತೆಗಳಲ್ಲಿ ಮತದಾರರಿಗೆ ಮನವರಿಕೆ

    ಅಸದ್​ ಸಂಚು ಬಯಲು

    ಉತ್ತರ ಪ್ರದೇಶದ ರನ್ಸಿಯಲ್ಲಿ ಗುರುವಾರ ಗುಂಡೇಟಿಗೆ ಬಲಿಯಾದ ಕೊಲೆ ಆರೋಪಿ ಅಸದ್​ ಅಹ್ಮದ್​ ಮತ್ತು ಗುಲಾಂ ರೂಪಿಸಿದ್ದ ಸಂಚನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ. ಈಗಾಗಲೇ ಜೈಲಿನಲ್ಲಿರುವ ಗೂಂಡಾ ಅತೀಕ್​ ಅಹ್ಮದ್​ನನ್ನು ಸಾಗಿಸುತ್ತಿದ್ದ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲು ಇವರು ಯೋಜಿಸಿದ್ದರು. ಆದರೆ ಭದ್ರತೆ ಬಿಗಿಯಾಗಿರುವುದರಿಂದ ಅತಿಕ್​ನನ್ನು ಮುಕ್ತಗೊಳಿಸುವುದು ಕಷ್ಟ ಎಂದು ಅವರಿಗೆ ತಿಳಿದಿತ್ತು.

    ಆದರೆ ಉತ್ತರ ಪ್ರದೇಶ ಸರ್ಕಾರವನ್ನು ಮುಜುಗರಕ್ಕೀಡು ಮಾಡುವ ಉದ್ದೇಶದಿಂದ ಬೆಂಗಾವಲು ಪಡೆಗಳ ಮೇಲೆ ದಾಳಿ ನಡೆಸಲು ಅವರು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ. ಗುಜರಾತ್​ನ ಸಬರಮತಿ ಜೈಲಿನಿಂದ ಉತ್ತರ ಪ್ರದೇಶಕ್ಕೆ ಅತಿಕ್​ನನ್ನು ವರ್ಗಾವಣೆ ಮಾಡಲಾಗಿತ್ತು. ಈ ವೇಳೆ ದಾಳಿಗೆ ಅವರು ಸಂಚು ರೂಪಿಸಿದ್ದರು. ಭದ್ರತೆ ಹೆಚ್ಚಿದ್ದ ಕಾರಣ ಇದು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್​-ಬಿಜೆಪಿ ಉತ್ತರ-ದಕ್ಷಿಣ ಗುರಿ; ಹೆಚ್ಚು ಸ್ಥಾನಕ್ಕೆ ಎರಡೂ ಪಕ್ಷಗಳಿಂದ ಸ್ಪಷ್ಟ ಲೆಕ್ಕಾಚಾರ

    ಪ್ರತಿಪಕ್ಷಗಳ ವಾಗ್ದಾಳಿ

    ಉತ್ತರ ಪ್ರದೇಶದ ಸರ್ಕಾರ ಚುನಾವಣೆಯ ಮೇಲೆ ಕಣ್ಣಿಟ್ಟು ಎನ್​ಕೌಂಟರ್​ ನಡೆಸುತ್ತಿದೆ ಎಂದು ಸಮಾಜವಾದಿ ಪದ ಮುಖ್ಯಸ್ಥ ಅಖಿಲೇಶ್​ ಯಾದವ್​ ಆರೋಪ ಮಾಡಿದ್ದಾರೆ. ಸರ್ಕಾರಿ ಸಂಸ್ಥೆಗಳು ಒಂದರ ನಂತರ ಒಂದರಂತೆ ಕೊನೆಗೊಳ್ಳುತ್ತಿವೆ. ಬಾಬಾ ಸಾಹೇಬ್​ ನಮಗೆ ನೀಡಿದ ಸಂವಿಧಾನವನ್ನು ಬಿಜೆಪಿ ಸರ್ಕಾರ ನಾಶಮಾಡಲು ಯತ್ನಿಸುತ್ತಿದೆ.

    ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಕಲಿ ಎನ್​ಕೌಂಟರ್​ಗಳನ್ನು ನಡೆಸುತ್ತಿದೆ. ಮನೆಗಳನ್ನು ಬುಲ್ಡೋಜರ್​ ಮೂಲಕ ಕೆಡವಲಾಗುತ್ತಿದೆ. ಇದರಿಂದಾಗಿ ಇಬ್ಬರು ಪ್ರಾಣ ಕಳೆದುಕೊಂಡರು. ಬಲ್ಲಿಯಾದಲ್ಲಿ ವಿದ್ಯಾರ್ಥಿ ನಾಯಕನ ಹತ್ಯೆ ಆಗಿದೆ. ಈ ಬಗ್ಗೆಯೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪ ಮಾಡಿದರು.

    ಇದನ್ನೂ ಓದಿ: ರಾಷ್ಟ್ರೀಯ, ರಾಜ್ಯ ಪಕ್ಷಗಳ ಸ್ಥಾನಮಾನ ಬದಲಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts