More

    ಜ್ಯೋತಿಷಿಗಳಿಗೆ ಡಿಮ್ಯಾಂಡ್! ನಾಮಪತ್ರ ಸಲ್ಲಿಕೆಗೆ ಶುಭ ಮುಹೂರ್ತದ ಕೋರಿಕೆ

    ದಾವಣಗೆರೆ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಅಭ್ಯರ್ಥಿಗಳು ಶುಭ ಮುಹೂರ್ತದ ಹುಡುಕಾಟ ನಡೆಸಿರುವುದರಿಂದ ಜ್ಯೋತಿಷಿಗಳಿಗೆ ಡಿಮ್ಯಾಂಡ್​ ಬಂದಿದೆ!

    ನಾಮಪತ್ರ ಸಲ್ಲಿಸುವಾಗ ಯಾವ ದಿಕ್ಕಿನ ಕಡೆಗೆ ಮುಖ ಮಾಡಬೇಕು?

    ರಾಜಕೀಯ ಭವಿಷ್ಯದ ಪ್ರಶ್ನೆ ಆಗಿರುವುದರಿಂದ ಒಳ್ಳೆಯ ಸಮಯದಲ್ಲಿ ನಾಮಪತ್ರ ಸಲ್ಲಿಸಬೇಕು ಎನ್ನುವ ನಂಬಿಕೆ ಸಾಮಾನ್ಯವಾಗಿದೆ. ಆದ್ದರಿಂದ ಅಭ್ಯರ್ಥಿಗಳು, ಬೆಂಬಲಿಗರು ಜ್ಯೋತಿಷಿಗಳ ಮನೆಗೆ ಎಡತಾಕುತ್ತಿದ್ದಾರೆ. ಮುಖ್ಯವಾಗಿ ಯಾವ ವಾರ, ಯಾವ ಸಮಯದಲ್ಲಿ ಉಮೇದುವಾರಿಕೆ ಸಲ್ಲಿಸಬೇಕು? ಯಾವ ಸಮಯಕ್ಕೆ ಸಹಿ ಮಾಡಬೇಕು? ನಾಮಪತ್ರ ಸಲ್ಲಿಸುವಾಗ ಯಾವ ದಿಕ್ಕಿನ ಕಡೆಗೆ ಮುಖ ಮಾಡಬೇಕು? ಯಾವ ಬಣ್ಣದ ಬಟ್ಟೆ ಧರಿಸಬೇಕು? ಮನೆಯಿಂದ ಎಷ್ಟು ಗಂಟೆಗೆ ಹೊರಡಬೇಕು ಇತ್ಯಾದಿ, ತಮ್ಮ ಜನ್ಮಕುಂಡಲಿ ತೋರಿಸಿ ಭವಿಷ್ಯದ ಬಗ್ಗೆ ಜ್ಯೋತಿಷದಲ್ಲಿ ಉತ್ತರ ಹುಡುಕುತ್ತಿದ್ದಾರೆ. ಈ ಬಗ್ಗೆ ಜ್ಯೋತಿಷಿಗಳನ್ನು ವಿಚಾರಿಸುತ್ತಿದ್ದಾರೆ. ಜ್ಯೋತಿಷಿಗಳು ಅಭ್ಯರ್ಥಿಯ ಜನ್ಮ ದಿನಾಂಕ, ಸಮಯ, ನಕ್ಷತ್ರ ಆಧರಿಸಿ ಸಲಹೆ ನೀಡುತ್ತಿದ್ದಾರೆ.

    ಇದನ್ನೂ ಓದಿ: ರಾಜ್ಯಕ್ಕೆ ಡಬಲ್ ಎಂಜಿನ್ ಸರ್ಕಾರದ ಅವಶ್ಯಕತೆ

    ಮಂಗಳವಾರ ಮತ್ತು ಶುಕ್ರವಾರ ಶ್ರೇಷ್ಠ!

    ಕೆಲವರಿಗೆ ಮಂಗಳವಾರ ಮತ್ತು ಶುಕ್ರವಾರ ಶ್ರೇಷ್ಠವೆನ್ನುವ ನಂಬಿಕೆಯಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಇದು ಬದಲಾಗಬಹುದು. ಕೆಲವೊಮ್ಮೆ ಚುನಾವಣಾ ಕಣದಲ್ಲಿರುವ ಎದುರಾಳಿಯ ಕುಂಡಲಿಯನ್ನೂ ನೋಡಬೇಕಾಗಬಹುದು ಎಂದು ಜ್ಯೋತಿಷಿಯೊಬ್ಬರು ತಿಳಿಸಿದ್ದಾರೆ.

    ಆಪ್ತರನ್ನು ಜ್ಯೋತಿಷಿಗಳ ಬಳಿ ಕಳಿಸುತ್ತಿದ್ದಾರಂತೆ!

    ಮತ್ತೊಂದು ಆಸಕ್ತಿಕರ ವಿಚಾರವೆಂದರೆ, ಸಾಮಾನ್ಯವಾಗಿ ಜೋತಿಷ್ಯ ವಿರೋಧಿಸುವವರೂ ಹಿಂಬಾಗಿಲಿನಿಂದ ಬಂದು ಹೋಗುತ್ತಿದ್ದಾರೆ. ತಾವಲ್ಲದಿದ್ದರೂ ಆಪ್ತರನ್ನು ಜ್ಯೋತಿಷಿಗಳ ಬಳಿ ಕಳಿಸುತ್ತಿದ್ದಾರಂತೆ! ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಒಂದು ವೇಳೆ ಅಭ್ಯರ್ಥಿಯ ಜನ್ಮಕುಂಡಲಿಯಲ್ಲಿ ದೋಷಗಳು ಕಂಡುಬಂದರೆ ಪರಿಹಾರದ ಬಗ್ಗೆಯೂ ಚರ್ಚಿಸಿ, ಕೆಲವರು ಹೋಮ, ಹವನ ಮಾಡುವ ಪದ್ಧತಿ ಇದೆ.

    ಇದನ್ನೂ ಓದಿ: ರಾಜ್ಯ ರಾಜಕೀಯ: ಅತೃಪ್ತಿ ಆಪತ್ತು, ರಾಜಿ ಸಂಧಾನದ ಕಸರತ್ತು

    ಜನ್ಮಕುಂಡಲಿ ನೋಡಬೇಕು!

    ಇಂಥ ವಿಚಾರಗಳ ಬಗ್ಗೆ ಹೇಳುವಾಗ ಪಕ್ಕಾ ಜನ್ಮಕುಂಡಲಿ ನೋಡಬೇಕಾಗುತ್ತದೆ. ಏನೋ ಒಂದು ಅಂದಾಜಿನ ಮೇಲೆ ಹೇಳುವಂತಿಲ್ಲ. ಇಲ್ಲದಿದ್ದರೆ ಫಲಿತಾಂಶದ ಲೆಕ್ಕಾಚಾರ ತಪ್ಪಾಗಬಹುದು. ಇದೆಲ್ಲವೂ ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದೆ.
    -ಜಯತೀರ್ಥಾಚಾರ್​ ವಡೇರ್​, ಜ್ಯೋತಿಷಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts