More

    ಯಾವುದೇ ಚಿತ್ರರಂಗವನ್ನೂ ಕೀಳಾಗಿ ನೋಡಬೇಡಿ … ಇದು ಯಶ್​ ಮನವಿ

    ಬೆಂಗಳೂರು: ‘ಈ ವುಡ್​ಗಳನ್ನೆಲ್ಲ ಬಿಟ್ಟಾಕಿ. ಎಲ್ಲ ಚಿತ್ರಗಳನ್ನು ಒಂದು ಎಂದು ಪರಿಗಣಿಸಿ ಗೌರವಿಸಿ …’ ಎಂದು ಯಶ್​ ಅದೆಷ್ಟೋ ದಿನಗಳಿಂದ ಹೇಲುತ್ತಲೇ ಬಂದಿದ್ದಾರೆ. ಈಗ ಪುನಃ ಈ ಬಗ್ಗೆ ಮಾತಾಡಿರುವ ಅವರು, ಯಾವುದೇ ಚಿತ್ರರಂಗದ ಬಗ್ಗೆ ತಾರತಮ್ಯ ಬೇಡ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ವೇದ’ ಚಿತ್ರ ವಿಮರ್ಶೆ: ದೌರ್ಜನ್ಯದ ವಿರುದ್ಧ ಅಪ್ಪ-ಮಗಳ ಹೋರಾಟ

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಬಾಲಿವುಡ್​ ಬಗ್ಗೆ ಎಲ್ಲರೂ ಕೆಟ್ಟದಾಗಿ ಮಾತನಾಡುತ್ತಿರುವುದನ್ನು ಕೇಳಿದ್ದೇನೆ. ಇಲ್ಲಿ ಯಾವುದೇ ಚಿತ್ರರಂಗ ಮೇಲಲ್ಲ, ಯಾವುದೂ ಕೀಳಲ್ಲ. ಇವತ್ತು ಬಾಲಿವುಡ್​ನಲ್ಲಿ ಹೆಚ್ಚು ಚಿತ್ರಗಳು ಗೆಲ್ಲುತ್ತಿಲ್ಲ ಎಂಬ ಕಾರಣಕ್ಕೆ ಅದನ್ನು ಕಡೆಗಣಿಸುವುದು ತಪ್ಪು. ಯಾವುದೇ ಚಿತ್ರರಂಗವನ್ನು ಕೀಳಾಗಿ ನೋಡಬಾರದು. ಹಿಂದೊಮ್ಮೆ ನಾವೇ ಈ ಸಮಸ್ಯೆಯನ್ನು ಎದುರಿಸಿದ್ದೇವೆ. ಪುನಃ ಅಂಥದ್ದೊಂದು ಗೌರವವನ್ನು ಮರಳಿ ಪಡೆಯುವುದಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಹೀಗಿರುವಾಗ, ನಾವು ಇನ್ನೊಬ್ಬರನ್ನು ಅಗೌರದಿಂದ ನೋಡಬಾರದು. ನಾವು ಬಾಲಿವುಡ್​ ಸೇರಿದಂತೆ ಎಲ್ಲ ಚಿತ್ರರಂಗಗಳನ್ನೂ ಗೌರವಿಸಬೇಕು. ಈ ಉತ್ತರ, ದಕ್ಷಿಣೆ ಎಂಬ ವಿಭಜನೆಯನ್ನು ಬಿಟ್ಟುಬಿಡಬೇಕು’ ಎಂದು ಹೇಳಿದ್ದಾರೆ.

    ಈ ಕುರಿತು ಮತ್ತಷ್ಟು ಮಾತನಾಡಿರುವ ಅವರು, ‘ಬಾಲಿವುಡ್​ ಏನೂ ಇಲ್ಲ, ಅಲ್ಲಿಗಿಂತ ನಮ್ಮಲ್ಲೇ ಒಳ್ಳೆಯ ಸಿನಿಮಾಗಳು ಬರುತ್ತವೆ ಅಂತೆಲ್ಲ ಮಾತನಾಡಬಾರದು. ಇವತ್ತು ಬಾಲಿವುಡ್​ನಲ್ಲಿ ಚಿತ್ರಗಳು ಗೆಲ್ಲದಿರಬಹುದು. ಆದರೆ, ಅದೊಂದು ಹಂತ ಅಷ್ಟೇ. ಮುಂದೆ ಎಲ್ಲವೂ ಸರಿ ಹೋಗುತ್ತದೆ. ನಾವು ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇವೆ’ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಕೋಟಿ ಕೋಟಿ ದುಡ್ಡು ಕೊಡುತ್ತೇನೆಂದರೂ ಕಂಗನಾ ನಿರಾಕರಿಸಿದ್ದೇಕೆ?

    ಅಂದಹಾಗೆ, ಯಶ್​ ಅಭಿನಯದ ‘ಕೆಜಿಎಫ್​ 2’ ಚಿತ್ರವು ಏ.14ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಯಶ್​ ಅಭಿನಯದ ಮುಂದಿನ ಚಿತ್ರ ಯಾವುದು ಎಂದು ಇನ್ನಷ್ಟೇ ಗೊತ್ತಾಗಬೇಕಿದೆ.

    ‘ವೇದ’ ಚಿತ್ರ ವಿಮರ್ಶೆ: ದೌರ್ಜನ್ಯದ ವಿರುದ್ಧ ಅಪ್ಪ-ಮಗಳ ಹೋರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts