More

    ವಿಶ್ವ ಆರ್ಥಿಕ ಶ್ರೇಯಾಂಕ 2023: ಟಾಪ್ 10 ದೇಶಗಳು ಯಾವವು? ಭಾರತದ ಸ್ಥಾನವೇನು?

    ನವದೆಹಲಿ: ವಿಶ್ವದ ಪ್ರಮಖ ಆರ್ಥಿಕ ರಾಷ್ಟ್ರಗಳ ಪೈಕಿ 2023ರಲ್ಲಿಯೂ ಅಮೆರಿಕ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ನಂತರದಲ್ಲಿ ಚೀನಾ ಮತ್ತು ಜಪಾನ್ ಇವೆ. ಜರ್ಮನಿಯ ನಂತರದಲ್ಲಿ ಭಾರತ ಇದೆ. ಒಟ್ಟು ದೇಶೀಯ ಉತ್ಪನ್ನ ಆಧಾರದಲ್ಲಿ ಈ ರ್ಯಾಂಕಿಂಗ್ ನೀಡಲಾಗುತ್ತದೆ.

    ಜಿಡಿಪಿ ಎಂದರೇನು? ತಲಾದಾ ಲೆಕ್ಕ ಹೇಗೆ?:

    ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ವು ಒಂದು ನಿರ್ದಿಷ್ಟ ಅವಧಿಯಲ್ಲಿ (ಸಾಮಾನ್ಯವಾಗಿ ಒಂದು ವರ್ಷದಲ್ಲಿ) ಉತ್ಪಾದಿಸಲಾದ ಎಲ್ಲಾ ಸರಕುಗಳು ಮತ್ತು ಸೇವೆಗಳ ಒಟ್ಟು ಮಾರುಕಟ್ಟೆ ಮೌಲ್ಯವಾಗಿರುತ್ತದೆ. ಇದು ಆರ್ಥಿಕ ಆರೋಗ್ಯದ ಸೂಚಕವಾಗಿದೆ, ರಾಷ್ಟ್ರೀಯ ಸಂಪತ್ತನ್ನು ನಿಖರವಾಗಿ ಚಿತ್ರಿಸಲು ಜಿಡಿಪಿಯನ್ನು ಬಳಸಲಾಗುತ್ತದೆ. ಇದನ್ನು ಜನಸಂಖ್ಯೆಯಿಂದ ಭಾಗಾಕಾರ ಮಾಡಿದರೆ ತಲಾದಾಯ ಬರುತ್ತದೆ. ಅಂದರೆ, ಆ ರಾಷ್ಟ್ರದ ಒಬ್ಬ ವ್ಯಕ್ತಿಯು ಒಂದು ವರ್ಷದಲ್ಲಿ ಗಳಿಸುವ ಸರಾಸರಿ ಆದಾಯ ಇದಾಗಿರುತ್ತದೆ.

    ಅಮೆರಿಕ, ಚೀನಾ, ಜಪಾನ್, ಜರ್ಮನಿ, ಭಾರತ, ಬ್ರಿಟನ್​, ಫ್ರಾನ್ಸ್, ಇಟಲಿ, ಕೆನಡಾ ಮತ್ತು ಬ್ರೆಜಿಲ್ ದೇಶಗಳು ಜಿಡಿಪಿ ಲೆಕ್ಕಾಚಾರದಲ್ಲಿ ಹತ್ತು ದೊಡ್ಡ ಆರ್ಥಿಕತೆಯುಳ್ಳ ರಾಷ್ಟ್ರಗಳಾಗಿವೆ. ಈ ರಾಷ್ಟ್ರಗಳು ಜಾಗತಿಕ ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಅವಿಭಾಜ್ಯ ಪಾತ್ರವನ್ನು ವಹಿಸುವ ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾಗಿವೆ.

    ಟಾಪ್​ 10 ರಾಷ್ಟ್ರಗಳ ಜಿಡಿಪಿ, ತಲಾದಾಯ

    1) ಅಮೆರಿಕಾ: ಜಿಡಿಪಿ 26,954 ಶತಕೋಟಿ ಡಾಲರ್​ ಮತ್ತು ತಲಾದಾಯ 80410 ಡಾಲರ್​
    2) ಚೀನಾ 17,786 ಶತಕೋಟಿ ಡಾಲರ್​ ಮತ್ತು ತಲಾದಾಯ 12540 ಡಾಲರ್​
    3) ಜಪಾನ್ 4,231 ಶತಕೋಟಿ ಡಾಲರ್​ ಮತ್ತು ತಲಾದಾಯ 33950 ಡಾಲರ್​
    4) ಜರ್ಮನಿ 4,430 ಶತಕೋಟಿ ಡಾಲರ್​ ಮತ್ತು ತಲಾದಾಯ 52820 ಡಾಲರ್​
    5) ಭಾರತ 3,730 ಶತಕೋಟಿ ಡಾಲರ್​ ಮತ್ತು ತಲಾದಾಯ 2610 ಡಾಲರ್​
    6) ಬ್ರಿಟನ್​ 3,332 ಶತಕೋಟಿ ಡಾಲರ್​ ಮತ್ತು ತಲಾದಾಯ 48910 ಡಾಲರ್​
    7) ಫ್ರಾನ್ಸ್ 3,052 ಶತಕೋಟಿ ಡಾಲರ್​ ಮತ್ತು ತಲಾದಾಯ 46320 ಡಾಲರ್​
    8) ಇಟಲಿ 2,190 ಶತಕೋಟಿ ಡಾಲರ್​ ಮತ್ತು ತಲಾದಾಯ 37150 ಡಾಲರ್​
    9) ಬ್ರೆಜಿಲ್ 2,132 ತಲಾದಾಯ ಶತಕೋಟಿ ಡಾಲರ್​ ಮತ್ತು 10410 ಡಾಲರ್​
    10) ಕೆನಡಾ 2,122 ಶತಕೋಟಿ ಡಾಲರ್​ ಮತ್ತು ತಲಾದಾಯ 53250 ಡಾಲರ್​

    ಮಾಜಿ ಮಾಡೆಲ್ ದಿವ್ಯಾ ಪಹುಜಾ ಗುಂಡಿಕ್ಕಿ ಹತ್ಯೆ: ಹನಿಟ್ರ್ಯಾಪ್​ ಮೂಲಕ ಗ್ಯಾಂಗ​ಸ್ಟರ್​ ಹತ್ಯೆಗೈದ ಪಾತಕಿ

    ಇರಾನ್ ಜನರಲ್ ಸುಲೇಮಾನಿ ಸಮಾಧಿ ಬಳಿ ಅವಳಿ ಸ್ಫೋಟ: 100 ಕ್ಕೂ ಹೆಚ್ಚು ಸಾವು

    2024ರಲ್ಲಿ ಯಾವ ಷೇರುಗಳಿಗೆ ಬರಲಿದೆ ಬೇಡಿಕೆ?: ಹೀಗಿದೆ ಪ್ರಮುಖ ಬ್ರೋಕರೇಜ್​ ಸಂಸ್ಥೆಗಳ ಭವಿಷ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts