More

    ‘ಸೋತ್ ಆಫ್ರಿಕ’; ಹರಿಣಗಳ ಮಣಿಸಿ ವಿಶ್ವಕಪ್​ ಫೈನಲ್​ಗೆ ಪ್ರವೇಶಿಸಿದ ಆಸ್ಟ್ರೇಲಿಯಾ

    ಕೋಲ್ಕತ: ಕ್ರಿಕೆಟ್ ಕಾಶಿ ಎಂದೇ ಹೆಸರು ವಾಸಿಯಾಗಿರುವ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಆಸ್ಟ್ರೇಲಿಯಾ ಫಿನಾಲೆಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಫೈನಲ್ಸ್​ನಲ್ಲಿ ಅದು ಭಾರತದ ಎದುರಾಳಿ ಆಗಿರಲಿದೆ.

    ದಕ್ಷಿಣ ಆಫ್ರಿಕ ತಂಡ ನೀಡಿದ್ದ 213 ರನ್​ಗಳ ಗುರಿಯ ಬೆನ್ನು ಹತ್ತಿದ ಆಸ್ಟ್ರೇಲಿಯಾ 47.2 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 215 ರನ್​ ಗಳಿಸುವ ಮೂಲಕ ಜಯಭೇರಿ ಬಾರಿಸಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಡೇವಿಡ್ ಮಿಲ್ಲರ್ (101 ರನ್, 116 ಎಸೆತ, 8 ಬೌಂಡರಿ, 5 ಸಿಕ್ಸರ್) ಶತಕದ ಫಲವಾಗಿ 49.4 ಓವರ್​ಗಳಲ್ಲಿ 212 ರನ್​​ಗಳಿಗೆ ಆಲೌಟ್ ಆಯಿತು.

    ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ (10-1-34-3), ಗ್ಲೆನ್ ಮಾಕ್ಸ್ವೆಲ್ (10-0-35-0), ಪ್ಯಾಟ್ ಕಮ್ಮಿನ್ಸ್ (9.4-0-51-3), ಜೋಶ್ ಹೇಜಲ್ವುಡ್ (8-3-12-2), ಆಡಮ್ ಜಂಪಾ (7-0-55-0), ಟ್ರಾವಿಸ್ ಹೆಡ್ (5-0-21-2) ರನ್ ನೀಡಿ ವಿಕೆಟ್ ಪಡೆದಿದ್ದಾರೆ.

    ಇದನ್ನೂ ಓದಿ: ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    213 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಟ್ರಾವಿಸ್ ಹೆಡ್ (62 ರನ್, 48 ಎಸೆತ, 9 ಬೌಂಡರಿ, 2 ಸಿಕ್ಸರ್) ಅರ್ಧ ಶತಕದ ಹೋರಾಟದ ಫಲವಾಗಿ ಆಸ್ಟ್ರೇಲಿಯಾ ತಂಡವು 7 ವಿಕೆಟ್​ಗಳ ನಷ್ಟಕ್ಕೆ 217 ರನ್ ಗಳಿಸಿ ಫೈನಲ್​ಗೆ ಲಗ್ಗೆ ಇಟ್ಟಿದೆ.

    ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ (10-0-24-1), ತರ್ಬೇಜ್ ಶಂಸಿ (10-0-42-2), ಗೆರಾಲ್ಡ್ ಕೊಟ್ಸೀ (9-0-47-2), ಏಡೆನ್ ಮರ್ಕ್ರಂ (8-1-23-1), ಕಗಿಸೋ ರಬಾಡ (6-0-41-1), ಮಾರ್ಕೊ ಜೇನ್ಸನ್ (4.2-0-35-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.

    ಶಮಿಗೆ ಏಳು ವಿಕೆಟ್: ಏನಿದು ಅಚ್ಚರಿ.. ಆತನೊಬ್ಬ ನಿನ್ನೆ ಕಂಡ ಕನಸು ಇಂದು ನಿಜವಾಯ್ತು!

    ‘ದೇವ್ರು’ ಮೆಚ್ಚೋ ಆಟ ಆಡಿದ ವಿರಾಟ್​: ‘ಆ ದಿನ ನನಗೆ ನಗು ತಡೆಯಲು ಆಗಲಿಲ್ಲ’ ಎಂದ ಸಚಿನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts