More

    ಕ್ರಿಕೆಟಿಗರಿಗೆ ಕರೊನಾ ಲಸಿಕೆ, ಕೇಂದ್ರ ಸರ್ಕಾರದ ಜತೆ ಬಿಸಿಸಿಐ ಮಾತುಕತೆ

    ನವದೆಹಲಿ: ಶೀಘ್ರದಲ್ಲಿಯೇ ದೇಶದ ಕ್ರಿಕೆಟಿಗರಿಗೂ ಕರೊನಾ ಲಸಿಕೆಯನ್ನು ನೀಡಲು ಕೇಂದ್ರ ಸರ್ಕಾರದ ಜತೆಗೆ ಮಾತುಕತೆ ನಡೆಲಾಗುತ್ತಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ತಿಳಿಸಿದ್ದಾರೆ. ಸರ್ಕಾರದ ಸೂಚನೆಯಂತೆ ಇದೀಗ ಕರೊನಾ ಲಸಿಕೆಯ ಮೊದಲ ಹಂತದಲ್ಲಿ ಆರೋಗ್ಯ ಸೇವೆಯಲ್ಲಿರುವವರು ಮತ್ತು ಅತ್ಯಂತ ಪ್ರಮುಖ ವ್ಯಕ್ತಿಗಳಿಗೆ ಮಾತ್ರ ನೀಡಲಾಗಿದೆ. ಶೀಘ್ರದಲ್ಲಿಯೇ ದೇಶದ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೂ ಕರೊನಾ ಲಸಿಕೆ ಕೊಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಧುಮಾಲ್ ತಿಳಿಸಿದ್ದಾರೆ.

    ಮುಂಬರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಳಿಗೆ ಮಾರ್ಚ್‌ನಲ್ಲಿ ಲಸಿಕೆ ಹಾಕಲು ಈಗಾಗಲೆ ಯೋಜನೆ ರೂಪಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಈ ಸಂಬಂಧ ಈಗಾಗಲೆ ಸೂಚನೆಯನ್ನು ನೀಡಿದ್ದು, ಭಾರತೀಯ ಒಲಿಂಪಿಕ್ ಸಮಿತಿ (ಐಒಎ) ಕೂಡ ಕೇಂದ್ರ ಸರ್ಕಾರದ ಜತೆಗೆ ಮಾತುಕತೆ ನಡೆಸುತ್ತಿದೆ. ಕ್ರೀಡಾಪಟುಗಳು ಲಸಿಕೆ ತೆಗೆದುಕೊಳ್ಳುವುದು ಕಡ್ಡಾಯವಾಗಿರದಿದ್ದರೂ, ಅವರು ಲಸಿಕೆಯ 2 ಡೋಸ್ ತೆಗೆದುಕೊಳ್ಳುವಂತೆ ಮನ ಒಲಿಸುವ ಪ್ರಯತ್ನ ನಡೆಸಲಾಗುವುದು ಎನ್ನಲಾಗಿದೆ.

    ಇದನ್ನೂ ಓದಿ: ಇಂಗ್ಲೆಂಡ್‌ನ ಈ ಕ್ರಿಕೆಟ್ ಮೈದಾನದಲ್ಲಿ ಸಿಕ್ಸರ್ ಸಿಡಿಸಿದರೆ 5 ರನ್ ದಂಡ!

    ದೇಶದ ಕರೊನಾ ಪರಿಸ್ಥಿತಿಯಲ್ಲಿ ನಿಕಟವಾಗಿ ಅವಲೋಕಿಸುತ್ತಿದ್ದು, ಶೀಘ್ರದಲ್ಲಿಯೇ ಪ್ರೇಕ್ಷಕರನ್ನು ಮರಳಿ ಕ್ರೀಡಾಂಗಣಕ್ಕೆ ಕರೆತರಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಲಾಗುತ್ತಿದೆ. ಶೇ. 100 ಅಲ್ಲದಿದ್ದರೂ, ಶೇ. 25-50 ಪ್ರೇಕ್ಷಕರಿಗೆ ಕ್ರೀಡಾಂಗಣದೊಳಗೆ ಪ್ರವೇಶ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಧುಮಾಲ್ ತಿಳಿಸಿದ್ದಾರೆ.

    ಈ ವರ್ಷ ಐಪಿಎಲ್ ಆಯೋಜನೆಗೆ ಯುಎಇಗಿಂತ ಭಾರತವೇ ಸುರಕ್ಷಿತ ತಾಣ!

    ಭಾರತಕ್ಕೆ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನಂ. 1 ಪಟ್ಟಕ್ಕೇರುವ ಅವಕಾಶ

    ಸಚಿನ್, ಕೊಹ್ಲಿ ಬಳಿಕ ಈ ಹೊಸ ಬ್ಯಾಟ್ಸ್‌ಮನ್ ಬ್ಯಾಟ್ ಪ್ರಾಯೋಜಕತ್ವಕ್ಕೆ ಎಂಆರ್‌ಎಫ್​ ಸಿದ್ಧತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts