More

    ‘ವರ್ಕ್ ಫ್ರಂ ಟೀಚಿಂಗ್, ಲರ್ನಿಂಗ್’ ವ್ಯವಸ್ಥೆ ಮೂಲಕ ಮನೆಯಿಂದಲೇ ಕಲಿಯಿರಿ, ಕಲಿಸಿರಿ- ಆ್ಯಪ್ ಮೂಲಕ ಶಿಕ್ಷಣ | ಕೃಷಿ ವಿಶ್ವವಿದ್ಯಾಲಯದಿಂದ ಹೊಸ ಪ್ರಯೋಗ

    ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಬಹುತೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ‘ವರ್ಕ್ ಫ್ರಂ ಹೋಂ’ ಸೌಲಭ್ಯ ಒದಗಿಸಿವೆ. ಆದರೆ, ಕೃಷಿ ವಿಶ್ವವಿದ್ಯಾಲಯ ಇದೀಗ ‘ವರ್ಕ್ ಫ್ರಂ ಟೀಚಿಂಗ್, ಲರ್ನಿಂಗ್’ ಪ್ರಯೋಗಕ್ಕಿಳಿದಿದೆ.

    ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಶಾಲೆ- ಕಾಲೇಜುಗಳ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆಯಾಗುವಂತಾಗಿದೆ. ಅದನ್ನು ನಿವಾರಿಸಲು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ‘ವರ್ಕ್ ಫ್ರಂ ಟೀಚಿಂಗ್, ಲರ್ನಿಂಗ್’ ವ್ಯವಸ್ಥೆಯನ್ನು ಕೃಷಿ ವಿಶ್ವವಿದ್ಯಾಲಯ ಜಾರಿಗೆ ತಂದಿದೆ. ಅದರ ಮೂಲಕ ಉಪನ್ಯಾಸಕರು ಪೂರ್ಣಗೊಳಿಸದ ಪಾಠಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲು ಸಹಕಾರಿಯಾಗುತ್ತಿದೆ.

    ಆಪ್ ಮೂಲಕ ಶಿಕ್ಷಣ: ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಗಳು ಸಿದ್ಧಪಡಿಸಿರುವ ವ್ಯವಸ್ಥೆಯಂತೆ ತರಗತಿಗೆ ತಕ್ಕಂತೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ವಾಟ್ಸ್​ಆಪ್ ಗ್ರೂಪ್ ರಚಿಸಲಾಗಿದೆ. ಅದಾದ ನಂತರ ಜೂಮ್ ಆಪ್​ನಲ್ಲಿ ಉಪನ್ಯಾಸಕರು ತಮ್ಮ ಐಡಿ ಕ್ರಿಯೇಟ್ ಮಾಡಿ, ಐಡಿ ಮತ್ತು ಪಾಸ್​ವರ್ಡ್ ಅನ್ನು ವಾಟ್ಸ್​ಆಪ್ ಮೂಲಕ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಆ ಐಡಿ ಮತ್ತು ಪಾಸ್​ವರ್ಡ್ ಮೂಲಕ ವಿದ್ಯಾರ್ಥಿಗಳು ಜೂಮ್ ಆಪ್​ನಲ್ಲಿ ಲಾಗಿನ್ ಆಗಬಹುದಾಗಿದೆ.

    ಪಿಪಿಟಿ ಮೂಲಕ ವಿವರಣೆ: ವಿದ್ಯಾರ್ಥಿಗಳು ಲಾಗಿನ್ ಆದ ನಂತರ ತಾವು ಸಿದ್ಧಪಡಿಸಿದ ಪವರ್ ಪಾಯಿಂಟ್ ಪ್ರಸೆಂಟೇಷನ್ ಅನ್ನು ಉಪನ್ಯಾಸಕರು ಆಪ್ ಮೂಲಕ ತೋರಿಸುತ್ತಾ ಹೋಗುತ್ತಾರೆ. ಅದನ್ನು ವಿದ್ಯಾರ್ಥಿಗಳು ನೋಟ್ ಮಾಡಿಕೊಳ್ಳಬಹುದು.

    ಪ್ರತಿದಿನ 6 ಗಂಟೆ ತರಗತಿ: ವಿಶ್ವವಿದ್ಯಾಲಯವು ಪ್ರತಿದಿನದ ತರಗತಿ ವಿವರವನ್ನು ಸಿದ್ಧಪಡಿಸಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಅದರಂತೆ ಆಯಾ ವಿಷಯದ ತರಗತಿಗಳು ನಡೆಯಲಿವೆ. ಪ್ರತಿದಿನ 6 ತರಗತಿ ನಡೆಯುತ್ತಿದ್ದು, ತಲಾ 1 ಗಂಟೆ ಕಾಲಾವಕಾಶವಿರಲಿದೆ. ಮೊದಲ 45 ನಿಮಿಷ ಉಪನ್ಯಾಸಕರು ಸಿದ್ಧಪಡಿಸಿದ ಪಿಪಿಟಿ ಆಧಾರದಲ್ಲಿ ನಡೆಯಲಿದ್ದು, ಕೊನೆಯ 15 ನಿಮಿಷ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗೆ ಉಪನ್ಯಾಸಕರು ಉತ್ತರಿಸಲಿದ್ದಾರೆ. ಅದು ಆಡಿಯೋ ಮತ್ತು ವಿಡಿಯೋ ಮೂಲಕವಾಗಿರಲಿದೆ. ಅದಕ್ಕೆ ಆಪ್​ನಲ್ಲಿ ಅವಕಾಶವಿದ್ದು, ಬಳಸಿಕೊಳ್ಳಲಾಗುತ್ತಿದೆ.

    ಹೇಗೆ ಬಳಸಬೇಕೆಂಬ ಬಗ್ಗೆ ವಿವರಣೆ: ತರಗತಿ ಆರಂಭಿಸುವುದಕ್ಕೂ ಮುನ್ನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಜೂಮ್ ಆಪ್ ಹೇಗೆ ಬಳಸಬೇಕು ಎಂಬುದರ ಬಗ್ಗೆ ವಿವರಿಸಲಾಗಿದೆ. ಆ ಕುರಿತಂತೆ ದೃಶ್ಯಾವಳಿ ಸಿದ್ಧಪಡಿಸಿ ನೀಡಲಾಗಿದೆ.

    ಸಭೆಗಳಿಗೂ ಬಳಕೆ: ಕೃಷಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಸಭೆಗಳಿಗೂ ಇದೇ ಮಾದರಿ ಅನುಸರಿಸಲು ನಿರ್ಧರಿಸಲಾಗಿದೆ. ಆ ಕುರಿತು ಚರ್ಚೆಗಳು ನಡೆಯುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳು ಇದು ಸಹಕಾರಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    4,712 ವಿದ್ಯಾರ್ಥಿಗಳಿಗೆ ತರಗತಿ: ಕೃಷಿ ವಿಶ್ವವಿದ್ಯಾಲಯದಲ್ಲಿ 3,312 ಸ್ನಾತಕ ಮತ್ತು 1,400 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆನ್​ಲೈನ್ ಶಿಕ್ಷಣ ನೀಡಲಾಗುತ್ತಿದೆ. ಒಟ್ಟು 360 ಉಪನ್ಯಾಸಕರು ಆನ್​ಲೈನ್ ಮೂಲಕ ಪಾಠ ಮಾಡುತ್ತಿದ್ದಾರೆ. ಒಮ್ಮೆಲೆ 36 ಉಪನ್ಯಾಸಕರು ಸ್ನಾತಕ, ಸ್ನಾತಕೋತ್ತರದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪಾಠ ಮಾಡುತ್ತಾರೆ.

    ಹಾಲು ವಿತರಣೆ ಲೊಕೇಷನ್ ಚಿತ್ರ ಕಡ್ಡಾಯ, ಆದರೆ ಸಹಾಯಕರನ್ನು ಕಳುಹಿಸುವಂತಿಲ್ಲ ಎಂದ ಬಿಬಿಎಂಪಿ: ಯಾಕೆ?

    ಲಾಕ್​ಡೌನ್ ಅವಧಿಯಲ್ಲಿ ವಶಪಡಿಸಿಕೊಂಡ ಮದ್ಯದ ಪ್ರಮಾಣ ನೋಡಿದ್ರೆ ಕುಡುಕರಿಗೆ ಗ್ಯಾರೆಂಟಿ ಆಗತ್ತೆ ಶಾಕ್!

    ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts