More

    ಗಂಡ-ಹೆಂಡತಿ ಜಗಳ ಮಗಳ ಕೊಲೆಯಲ್ಲಿ ಅಂತ್ಯ; ಶವದೊಂದಿಗೆ ಬೀದಿ ಸುತ್ತಿದ ತಾಯಿ

    ನಾಗ್ಪುರ: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂದು ಹೇಳುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ತನ್ನ ಪತಿಯ ಜೊತೆ ಜಗಳವಾಡಿ ಆತನ ಮೇಲಿನ ಸಿಟ್ಟಿನಿಂದ ಮಗಳನ್ನು ಕೊಂದು ಶವದೊಂದಿಗೆ ಸುಮಾರು 4 ಕಿಲೋಮೀಟರ್​ ಸುತ್ತಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಘಟನೆ ಸಂಬಂಧ ಪೊಲೀಸರು ಟ್ವಿಂಕಲ್​ ರಾವುತ್​ (23)ನನ್ನು ವಶಕ್ಕೆ ಪಡೆದಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಉದ್ಯೋಗ ಅರಸಿ ತನ್ನ ಪತಿ ರಾಮ್​ ಲಕ್ಷ್ಮಣ್​ ರಾವುತ್​ ಜೊತೆಗೆ ನಾಗ್ಪುರಕ್ಕೆ ಬಂದಿದ್ದರು ಎಂದು ವರದಿಯಾಗಿದೆ.

    ಇದನ್ನೂ ಓದಿ: ಅಧಿಕಾರಿಗಳ ಎದುರಲ್ಲೇ ಮತಯಂತ್ರ ನೆಲಕ್ಕೆ ಕುಕ್ಕಿ ಹಾಳುಗೆಡವಿದ YSRCP ಶಾಸಕ; ವಿಡಿಯೋ ವೈರಲ್​

    ಈ ಕುರಿತು ಪ್ರತಿಕ್ರಿಯಿಸಿರುವ ಎಂಐಡಿಸಿ ಪೊಲೀಸ್​ ಠಾಣಾಧಿಕಾರಿ, ದಂಪತಿಗಳು ನಾಗ್ಪುರದಲ್ಲಿರುವ ಪೇಪರ್ ಉತ್ಪನ್ನಗಳ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇವರು ಸಂಸ್ಥೆಯ ಆವರಣದಲ್ಲಿರುವ ರೂಮ್​ನಲ್ಲಿ ವಾಸಿಸುತ್ತಿದ್ದರು. ಸೋಮವಾರ (ಮೇ 20) ಸಂಜೆ 4 ಗಂಟೆ ಸುಮಾರಿಗೆ ದಂಪತಿಗಳ ನಡುವೆ ವಿಚಾರಕ್ಕೆ ಒಂದಕ್ಕೆ ಗಲಾಟೆಯಾಗಿದ್ದು, ಜಗಳದ ವೇಳೆ ಮಗು ಜೋರಾಗಿ ಅಳಲು ಪ್ರಾರಂಭಿಸಿದೆ. ಇದನ್ನು ನೋಡಿದ ತಾಯಿ ಮಗುವನ್ನು ಹೊರಗೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

    ಇದಾದ ಬಳಿಕ ಮಗುವಿನ ಶವದೊಂದಿಗೆ ನಾಲ್ಕು ಕಿಲೋಮೀಟರ್​ ಸುತ್ತಾಡಿದ್ದಾಳೆ. ಈ ವೇಳೆ ಪೊಲೀಸ್​ ಗಸ್ತು ವಾಹನವನ್ನು ಕಂಡ ಆಕೆ ನಡೆದ ಘಟನೆಯನ್ನು ಅಧಿಕಾರಿಗಳಿಗೆ ತಿಳಿಸಿದ್ದಾಳೆ. ಪೊಲೀಸರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಮಗು ಅದಾಗಲೇ ಮರತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಆರೋಪಿಯನ್ನು ಕೂಡಲೇ ವಶಕ್ಕೆ ಪಡೆದ ಅಧಿಕಾರಿಗಳು ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಎಂಐಡಿಸಿ ಪೊಲೀಸ್​ ಠಾಣಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts