More

    ಪಕ್ಕದ ಬೈಕ್​ಗೆ ತುಳಿಯಲು ಹೋಗಿ ತಾನೇ ಸ್ಕೂಟಿಯಿಂದ ಬಿದ್ದ ಮಹಿಳೆ…

    ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆಯನ್ನು ನೀವೆಲ್ಲರೂ ಕೇಳಿರುತ್ತೀರಿ. ಈ ಘಟನೆಯಲ್ಲಿ ಮಾತ್ರ ಮಾಡಿದ್ದುಣ್ಣೋ ಮಹಾರಾಯ್ತಿ ಎಂದು ಬದಲಾಯಿಸಬೇಕೋ ಏನೋ.

    ಹೈವೆಯಲ್ಲಿ ಹೊಗುತ್ತಿದ್ದ ಸ್ಕೂಟಿಯ ಹಿಂದೆ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದರು. ಅದೇ ವೇಳೆ ಪಕ್ಕದಲ್ಲಿ ಹೋಗುತ್ತಿದ್ದ ಬೈಕ್​ ಸವಾರನನ್ನು ಕಂಡು ಏನೆನಿಸಿತೋ ಏನೋ. ಈ ಮಹಿಳೆ ಬೈಕ್​ಗೆ ಕಾಲಿನಿಂದ ತುಳಿಯಲು ಪ್ರಯತ್ನಿಸಿದ್ದಾರೆ. ಆದರೆ ತಾವೇ ಆಯ ತಪ್ಪಿ ಸ್ಕೂಟಿಯಿಂದ ಬಿದ್ದಿದ್ದಾರೆ. ಈ ವಿಡಿಯೋವನ್ನು ‘ವಾಟ್​ ಕುಡ್​ ಗೋ ರಾಂಗ್​’ ಎನ್ನುವ ರೆಡ್ಡಿಟ್​ ಪೇಜ್​ನಲ್ಲಿ ಅಪ್ಲೋಡ್​ ಮಾಡಲಾಗಿದೆ.

    ಇನ್ನೂ ಮಜವಾದ ಸಂಗತಿ ಏನೆಂದರೆ ಆ ಬೈಕ್​ ಸವಾರ ಏನೂ ಆಗಿಲ್ಲ ಎಂಬಂತೆ ಒಮ್ಮೆ ಹಿಂದೆ ತಿರುಗಿ ತನ್ನ ದಾರಿ ಹಿಡಿದಿದ್ದಾನೆ. ಅದಲ್ಲದೇ ಮಹಿಳೆ ಕೂತಿದ್ದ ಸ್ಕೂಟಿಯ ಸವಾರನೂ ಒಂದಿಷ್ಟೂ ಬ್ಯಾಲೆನ್ಸ್​ ತಪ್ಪಿಲ್ಲ. ಅದೃಷ್ಟವಶಾತ್​ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಕಾರು ವೇಗದಲ್ಲಿ ಚಲಿಸುತ್ತಿರಲಿಲ್ಲ.

    ಸ್ಕೂಟಿಯ ಸವಾರ, ಮಹಿಳೆ ಹಾಗೂ ಬೈಕ್​ ಸವಾರ ಯಾರೂ ಹೆಲ್ಮೆಟ್ ಧರಿಸದೇ ಇರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಆ ಮಹಿಳೆಗೆ ಏನೂ ಆಗದೇ ಪಾರಾಗಿದ್ದು ಅದೃಷ್ಟದಿಂದ ಎಂದೇ ಹೇಳಬಹುದು. ಕಾಮೆಂಟ್​ ವಿಭಾಗದಲ್ಲಿ ಕೆಲವರು ‘ಪ್ರತಿ ಕ್ರಿಯೆಗೂ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ’ ಎಂದು ಬರೆದಿದ್ದಾರೆ.

    Trying to kick another rider. from Whatcouldgowrong

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ತಿಂದುಂಡ ಮನೆಯವರ ಮೇಲೆ ತೀವ್ರ ಹಲ್ಲೆ ಮಾಡಿದ ಯುವಕ; ಪಾರಿವಾಳಕ್ಕಾಗಿ ನಡೆದ ಕಾಳಗ!

    ಇನ್ಮುಂದೆ ಪಾಕಿಸ್ತಾನದ ಸುದ್ದಿ ವಾಹಿನಿ​ಗಳಲ್ಲಿ ಇಮ್ರಾನ್​ ಖಾನ್​ ಕಾಣಿಸಲ್ಲ; ಟಿವಿಯಿಂದಲೇ ಬ್ಯಾನ್​ ಆದ ಮಾಜಿ ಪ್ರಧಾನಿ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts